ವಾಣಿಜ್ಯ ಸಚಿವಾಲಯವು ಚಹಾ, ಕಾಫಿ ಸಾಂಬಾರ ಪದಾರ್ಥಗಳು ಮತ್ತು ರಬ್ಬರ್‌ಗೆ ಸಂಬಂಧಿಸಿದ ಹಳೆಯ ಕಾನೂನುಗಳನ್ನು ರದ್ದಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ. ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಬರುವ ಈ ಕ್ಷೇತ್ರಗಳ ಕೃಷಿ ಹಾಗೂ ವಾಣಿಜ್ಯ ವಹಿವಾಟು ಉತ್ತೇಜಿಸುವ ಮತ್ತು ವ್ಯವಹಾರಗಳಿಗೆ ಅನುಕೂಲಕರ ವಾತಾವರಣನ್ನು ಸೃಷ್ಟಿಸುವ ದೃಷ್ಟಿಯಿಂದ ಹೊಸ ಕಾನೂನುಗಳನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ಕೃಷಿ ಹಾಗೂ ವಾಣಿಜ್ಯ ವ್ಯವಹಾರ ಉತ್ತೇಜನಗೊಳ್ಳಲಿದೆ ಎನ್ನುವ ನಿರೀಕ್ಷೆ ಇದೆ.
ನಾಲ್ಕು ಪ್ರತ್ಯೇಕ ಕಾಯಿದೆ ಬದಲಾವಣೆಗಳನ್ನು ಉಲ್ಲೇಖಿಸಲಾಗಿದೆ. ವಾಣಿಜ್ಯ ಇಲಾಖೆಯು ಟೀ ಆಕ್ಟ್ 1953, ಮಸಾಲೆ ಮಂಡಳಿ ಕಾಯಿದೆ 1986, ರಬ್ಬರ್ ಕಾಯಿದೆ 1947 ಮತ್ತು ಕಾಫಿ ಕಾಯಿದೆ 1942 ರ ರದ್ದುಪಡಿಸಲು ಪ್ರಸ್ತಾಪಿಸಿದೆ. ವಾಣಿಜ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಕರಡು ಮಸೂದೆಗಳ ಪ್ರಕಾರ, ಕಾಯಿದೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ಪ್ರಸ್ತುತ ಉದ್ದೇಶಗಳನ್ನು ಪ್ರತಿಬಿಂಬಿಸಲು ಹೊಸ ಶಾಸನಗಳನ್ನು ಜಾರಿಗೊಳಿಸಲಾಗಿದೆ.
ಕರಾಡು ಮಸೂದೆ 2022 ರ ಪ್ರಕಾರ, ಪೂರೈಕೆ ಸರಪಳಿಯ ಕಡೆಗೆ ಕೇಂದ್ರೀಕೃತ ಗಮನವನ್ನುನೀಡಲಾಗಿದೆ. ಟೀ ಕಾಯಿದೆಯ ರದ್ದತಿಯನ್ನು ಪ್ರಸ್ತಾಪಿಸಲು ಪ್ರಮುಖ ಕಾರಣವೆಂದರೆ, ಇತ್ತೀಚಿನ ದಶಕದಲ್ಲಿ ಚಹಾವನ್ನು ಬೆಳೆಯುವ, ಮಾರಾಟ ಮಾಡುವ ಮತ್ತು ಸೇವಿಸುವ ವಿಧಾನಕ್ಕೆ ಸಂಬಂಧಿಸಿದಂತೆ ಮಹತ್ತರ ಬದಲಾವಣೆಯಾಗಿದೆ. ಹೀಗಾಗಿ ಆಸ್ತಿತ್ವದಲ್ಲಿರುವ ಕಾಯಿದೆಗೆ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. ಅದೇ ರೀತಿ ರಬ್ಬರ್ ಬೆಳೆಗೆ ಉತ್ತೇಜನ ನೀಡಲು ಆಮದು ಹಾಗೂ ರಪ್ತು ಮೇಲೆಯೂ ಗಮನಹರಿಸಲಾಗುತ್ತಿದೆ. ಇದರಿಂದ ಇಲ್ಲಿನ ಬೆಳೆಗಾರರಿಗೆ ಹೆಚ್ಚು ಅನುಕೂಲವಾಗುವ ಉದ್ದೇಶ ಹೊಂದಲಾಗಿದೆ.
ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…
ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…
ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…
ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…
ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…