ರಾಮನ ಹಾದಿಯಲ್ಲಿ ಮುನ್ನಡೆಯೋಣ‌ | ರಾಘವೇಶ್ವರ ಶ್ರೀ ಕರೆ

November 12, 2022
7:49 PM

ಮಠವನ್ನು ಕಟ್ಟಿ ರಾಮನಿಗೆ ಕಾಣಿಕೆಯಾಗಿ ಸಮರ್ಪಿಸುವ ಪವಿತ್ರ ಸಂದರ್ಭದಲ್ಲಿ ರಾಮ ನಡೆದ ಹಾದಿಯಲ್ಲಿ ಮುನ್ನಡೆಯುವ ಪಣ ತೊಡಿ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

ಮಾಣಿ ಮಠದ ಸಪರಿವಾರ ಶ್ರೀರಾಮಚಂದ್ರದೇವರ ಶಿಲಾಮಯ ಗರ್ಭಗುಡಿ ನಿರ್ಮಾಣದ ಕಾಮಗಾರಿ ವೀಕ್ಷಿಸಿ, ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಶಿಷ್ಯರ ಮಾರ್ಗದರ್ಶನ ಸಭೆಯಲ್ಲಿ ಅವರು  ಆಶೀರ್ವಚನ ನೀಡಿದರು. ನಮ್ಮತನ ಉಳಿಸೋಣ. ನಮ್ಮ ಆಚರಣೆ ಸಂಪ್ರದಾಯ, ಸಂಸ್ಕೃತಿ, ಭಾಷೆ, ನಾಡು ನುಡಿ ಉಳಿಸಲು ನಮ್ಮಿಂದಾದ ಕೊಡುಗೆ ನೀಡೋಣ. ನಶ್ವರವನ್ನು ಬಿಟ್ಟು ಶಾಶ್ವತವಾದ ಈಶ್ವರನ ಕಡೆಗೆ ತೆರಳುವ ಸಂಕಲ್ಪ ಮಾಡೋಣ. ಭಗವತ್ ಚೈತನ್ಯ ಶಾಶ್ವತ; ಅದರ ಉಪಾಸನೆಯೇ ಆಧ್ಯಾತ್ಮ. ಲೌಕಿಕವಾಗಿ ನೋಡಿದರೂ ಶಕ್ತಿ, ಅನುಕೂಲ ಇದ್ದಾಗ ಸತ್ಕಾರ್ಯಗಳನ್ನು ಮಾಡಬೇಕು. ರಾಮದೇವರ ಗರ್ಭಗೃಹ ಇಡೀ ನಮ್ಮ ಮಠ ವ್ಯವಸ್ಥೆಯ ಶಿಖರ ಇದ್ದಂತೆ. ರಾಮ ಸರ್ವೋಚ್ಛ ಪೀಠದಲ್ಲಿರುವಂತೆ ಮಾಡುವ ಪ್ರಯತ್ನವೇ ಶಿಲಾಮಯ ಗರ್ಭಗುಡಿ ಎಂದು ಬಣ್ಣಿಸಿದರು.

ಜೀವನ ಮುಂದುವರಿಯುತ್ತಿರಬೇಕು. ಹರಿಯುವ ನದಿಯಾಗಬೇಕು. ಆಗ ಮಾತ್ರ ಅದು ಶುದ್ಧಿಯಾಗಿರುತ್ತದೆ. ಸಂಸ್ಥೆಯೂ ಹಾಗೆಯೇ; ಉನ್ನತಿಯತ್ತ, ಶ್ರೇಷ್ಠತೆಯತ್ತ ಮುನ್ನಡೆಯಬೇಕು. ಮಾಣಿ ಮಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಪರ್ವ ಇದಕ್ಕೆ ಅನುಕರಣೀಯ ನಿದರ್ಶನ ಎಂದು ಹೇಳಿದರು.

ಕಾಸರಗೋಡಿಗೆ ಬಂದ ಸ್ಥಿತಿ ನಾಳೆ ಇಲ್ಲಿಗೆ.....

ಬದಿಯಡ್ಕದ ದಂತವೈದ್ಯ ಡಾ.ಕೃಷ್ಣಮೂರ್ತಿ ಅವರ ನಿಗೂಢ ಸಾವಿನ ಬಗ್ಗೆ ಉಲ್ಲೇಖಿಸಿದ ಸ್ವಾಮೀಜಿಯವರು, ಭಾರತದಲ್ಲಿ ನಾವೇ ಪರಕೀಯರಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ನೆರೆಯ ಕಾಸರಗೋಡಿಗೆ ಬಂದ ಪರಿಸ್ಥಿತಿ ನಾಳೆ ದಕ್ಷಿಣ ಕನ್ನಡಕ್ಕೂ ಬರಬಹುದು; ಇಂಥ ಸಂಕಷ್ಟಗಳನ್ನು ದಿಟ್ಟವಾಗಿ ಎದುರಿಸಲು ಇಡೀ ಸಮುದಾಯ ಸಂಘಟಿತವಾಗಬೇಕು. ಇಡೀ ಸಮಾಜ ಎಚ್ಚರಗೊಂಡು ಇಂಥ ಘಟನೆ ಮರುಕಳಿಸದಂತೆ ತಕ್ಕ ಉತ್ತರ ನೀಡಬೇಕು ಎಂದು ರಾಘವೇಶ್ವರ ಶ್ರೀಗಳು ಆಶಿಸಿದರು.

ಸೇವಾ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಗಾರಡ್ಕ ಜನಾರ್ದನ ಭಟ್ ಆರ್ಥಿಕ ಅವಲೋಕನ ನೆರವೇರಿಸಿದರು. ಅಗಲಿದ ಶಿಷ್ಯಬಂಧುಗಳಿಗೆ ಡಾ.ವೈ.ವಿ.ಕೃಷ್ಣಮೂರ್ತಿ ಶ್ರದ್ಧಾಂಜಲಿ ಸಮರ್ಪಿಸಿದರು.

ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಪಿದಮಲೆ ನಾಗರಾಜ ಭಟ್, ಮಂಡಲ ಗುರಿಕಾರರಾದ ಉದಯಕುಮಾರ್ ಭಟ್ ಖಂಡಿಗೆ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಹಾಮಂಡಲ ಉಪಾಧ್ಯಕ್ಷೆ ಶೈಲಜಾ ಭಟ್ ಮತ್ತಿತರರು ಉಪಸ್ಥಿತರಿದ್ದರು. ಉದಯಶಂಕರ ಅರಸಿನಮಕ್ಕಿ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ
August 5, 2026
10:30 AM
by: ದ ರೂರಲ್ ಮಿರರ್.ಕಾಂ
ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ
August 5, 2026
9:09 AM
by: ದ ರೂರಲ್ ಮಿರರ್.ಕಾಂ
ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ
August 5, 2026
8:41 AM
by: ದ ರೂರಲ್ ಮಿರರ್.ಕಾಂ
ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ
August 4, 2026
11:23 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror