ಕಾಲ ಪ್ರತೀಕ್ಷೆ ಎಲ್ಲ ಸಮಸ್ಯೆಗಳಿಗೆ ಪರಿಹಾರ; ತಾಳ್ಮೆಯ ಪಾಠವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಕಲಿಯೋಣ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, “ರಾಮ ತಾಳ್ಮೆಯ ಸಾಕಾರ ಮೂರ್ತಿ ಶ್ರೀರಾಮನಿಂದ ತಾಳ್ಮೆಯೆಂಬ ಮಹಾಗುಣವನ್ನು ಆಶೀರ್ವಾದವಾಗಿ ಪಡೆಯೋಣ. ತಾಳ್ಮೆಯ ಸಂಪತ್ತಿನಿಂದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ತಾಳ್ಮೆಯೊಂದಿದ್ದರೆ ಶ್ರೇಯಸ್ಸು ನಮ್ಮನ್ನು ಅರಸಿಕೊಂಡು ಬರುತ್ತದೆ ಎನ್ನುವುದಕ್ಕೆ ಲಂಕೆಯ ಅಶೋಕಾವನದಲ್ಲಿ ಒಂದು ವರ್ಷ ರಾಮನ ಪ್ರತೀಕ್ಷೆಯಲ್ಲಿ ಕಳೆದ ಸೀತೆಯೇ ಉತ್ತಮ ಉದಾಹರಣೆ” ಎಂದು ಬಣ್ಣಿಸಿದರು.
ಹಲವಾರು ಸಮಸ್ಯೆಗಳಿಗೆ ಏನೂ ಮಾಡದಿರುವುದೇ ಪರಿಹಾರ. ಬಹಳಷ್ಟು ಸಮಸ್ಯೆಗಳನ್ನು ತಾಳ್ಮೆ ಬಗೆಹರಿಸುತ್ತದೆ ಅಥವಾ ಸಮಸ್ಯೆಗಳ ಪರಿಹಾರಕ್ಕೆ ನೆರವಾಗುತ್ತದೆ.
ಚಾತುರ್ಮಾಸ್ಯ ಅಂಗವಾಗಿ ಬುಧವಾರ ರುದ್ರಹವನ, ರಾಮತಾರಕ ಹವನ, ಚಂಡಿ ಪಾರಾಯಣ, ಐಕ್ಯಮತ್ಯ ಹವನ, ಭಾಗ್ಯಸೂಕ್ತ ಹವನ ನಡೆಯಿತು. ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…
ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…
ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿದ್ದ ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಮಳೆಯ…