ವಾರೆ ವ್ಹಾ…..| ಸುಬ್ಬಪ್ಪನ ರಥೋತ್ಸವದೊಂದಿಗೆ ಮುಗಿಲ ತೇರಿನ ಕೊನೆಯ ದಿನಗಳು… ! |

Advertisement

ಮುಗಿಲ ಮಾರಿಗೆ ರಾಗರತಿಯಾ..
ಮುಗಿಲ ಮಾರಿಗೆ ರಾಗರತಿಯಾ..
ನಂಜ ಏರಿತ್ತಾ…ಆಗ ಸಂಜೇ ಆಗಿತ್ತಾ
ಆಗ ಸಂಜೇ ಆಗಿತ್ತಾ…
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೊ ಬಿದ್ದಿತ್ತಾ , ಗಾಳಿಗೆ ಮೇಲಕ್ಕೆದ್ದಿತ್ತಾ..
ಗಾಳಿಗೆ ಮೇಲಕ್ಕೆದ್ದಿತ್ತಾ….
ಮುಗಿಲ ಮಾರಿಗೇ ರಾಗ ರತಿಯಾ..
ನಂಜ ಏರಿತ್ತಾ…ಆಗ ಸಂಜೇ ಆಗಿತ್ತಾ…..

Advertisement

ವಾವ್……  ದ.ರಾ. ಬೇಂದ್ರೆಯವರು ತಮ್ಮ “ರಾಗರತಿ” ಗೀತೆಯಲ್ಲಿ ಪ್ರಕೃತಿಯ ಸೊಬಗು ಮತ್ತು ಬಾವ ವಿಕಾರದ ವರ್ಣನೆಯನ್ನು ಅದ್ಬುತವಾಗಿ ಸೆರೆ ಹಿಡಿದಿದ್ದಾರೆ.

Advertisement
ಹೌದಲ್ಲಾ….. ವಿಶೇಷವಾಗಿ ಮೂಡಣದ ಊರಿಗೆ ಸುಬ್ಬಪ್ಪನ ರಥೋತ್ಸವದೊಂದಿಗೆ ಮುಗಿಲ ತೇರಿನ ಕೊನೆಯ ದಿನಗಳೂ ಹೌದು. ದೈವಿಕ ನಿಯಮವೋ, ಪ್ರಾಕೃತಿಕ ಘಟನೆಯೋ…ಸುಬ್ರಹ್ಮಣ್ಯ ಷಷ್ಠೀ ನಮ್ಮೂರಿಗೆ ಮಳೆಯ ಕೊನೆಯ ದಿನಗಳ ಸೂಚಕ.(ಪ್ರಕೃತಿ ಮತ್ತು ದೈವಿಕ ಎರಡೂ ಒಂದೇ) ಅದರಂತೆಯೇ ಸುಬ್ಬಪ್ಪ, ನಿನ್ನೆ ಷಷ್ಠೀ ಉತ್ಸವ ಸಂಭ್ರಮಿಸಿ‌ ಗರ್ಭಗುಡಿ ಸೇರಿದ ನಂತರ ವರುಣ ತನ್ನ ಕರ್ತವ್ಯ ನಿರ್ವಹಣೆಗೆ ಹಾಜರಾಗೇಬಿಟ್ಟ.ಯಾರ ಪ್ರಚೋದನೆಯೋ, ಯಾವ ನಿಯಮವೋ ಸುಬ್ಬಪ್ಪನ ರಥೋತ್ಸವದ ಸಮಾಪನ ವರುಣನಿಗೆ ಹೇಗೆ ಗೊತ್ತಾಯಿತೋ…ಉತ್ಸವದ ಸಂಧರ್ಬ ಘಟಿಸಿರಬಹುದಾದ ಮಾನುಷ ಸಹಜ ಕೊಳೆಯನ್ನು ತೊಳೆದೇ ಬಿಟ್ಟ. ….ಯಬ್ಬ..

ಎತ್ತಣ ಮಾಮರ
ಎತ್ತಣ ಕೋಗಿಲೆ ,
ಎತ್ತಣೆತ್ತಿಂದ ಸಂಭಂದವಯ್ಯಾ..
ಬೆಟ್ಟದಾ ನೆಲ್ಲಿಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣೆತ್ತಿಂದ ಸಂಬಂಧವಯ್ಯಾ…..

Advertisement

ಈ ಎತ್ತಣೆತ್ತಿನ ಸಂಭಂಧವೇ ನಾವೆಲ್ಲಾ ದೇವರೂ,ಪ್ರಕೃತಿ, ಶಕ್ತಿ ಎಂದು ನಂಬೋದಲ್ಲವೇ…ಈ ಸೂಕ್ಷ್ಮಗಳ ಅರಿಯುದರಲ್ಲೇ ,ಅರಿತು ನಡೆಯುವುದರಲ್ಲೇ ನಿಜ ಜೀವನೋತ್ಸಾಹ ಇರೋದು…

ಅದನ್ನೇ ದ.ರಾ ಬೇಂದ್ರೆಯವರು….. ಮಾನವನೂ ರಾಗವೆಂಬ ಮುಗಿಲು ರತಿಯಾಗಿ ಮನವೆಂಬ ನೆಲದಂಚಿಗೆ ಮಂಜಿನಂತೆ ಮುಸುಕಾಗಿ ಆವರಿಸಿ ಬಿದ್ದಾಗ ತನಗೆ ಅರಿಯದೇ ಹೊಸ ಜೀವ ಚೈತನ್ಯವೊಂದು ಹೊರ ಸೂಸುವುದರನ್ನು ಬಹಳ ಚೆನ್ನಾಗಿ ವರ್ಣಿಸಿದ್ದಾರೆ….

Advertisement

ಧೀಯೋಯೋನಃ ಪ್ರಚೋದಯಾತ್…. ಎಂದಷ್ಟೇ ನಮ್ಮ ಪ್ರಾರ್ಥನೆ.

# ಟಿ ಆರ್‌ ಸುರೇಶ್ಚಂದ್ರ ಕಲ್ಮಡ್ಕ

Advertisement

( ಮುಗಿಲ ಮಾರಿಗೆ ರಾಗರತಿಯಾ….. ಹಾಡು ಇಲ್ಲಿದೆ…..)

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ವಾರೆ ವ್ಹಾ…..| ಸುಬ್ಬಪ್ಪನ ರಥೋತ್ಸವದೊಂದಿಗೆ ಮುಗಿಲ ತೇರಿನ ಕೊನೆಯ ದಿನಗಳು… ! |"

Leave a comment

Your email address will not be published.


*