Advertisement
ಸುದ್ದಿಗಳು

ಮಳೆಯ ದಾಖಲೆ | 200 ಮಿಮೀ ಮಳೆ ದಾಖಲಾಯಿತು ಹಲವು ಕಡೆ | ಹಲವು ಕಡೆ ಭೂಕುಸಿತ- ಉಕ್ಕಿ ಹರಿದ ನದಿಗಳು | ಜನಜೀವನ ಅಸ್ತವ್ಯಸ್ತ |

Share
ಕಳೆದ 24 ಗಂಟೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿತ್ತು. ಎಲ್ಲೆಡೆಯೂ ಭಾರೀ ಮಳೆ. ಹಲವು ಕಡೆಗಳಲ್ಲಿ  150 ಮಿಮೀ ಗಿಂತಲೂ ಅಧಿಕ ಮಳೆಯಾಗಿದೆ. ಸುಳ್ಯದ ಕಲ್ಲಾಜೆ, ಬೆಳ್ತಂಗಡಿ, ಕಾರ್ಕಳ ಪ್ರದೇಶದಲ್ಲಿ  200 ಮಿಮೀ ಮಳೆಯಾಗಿದೆ.
ಚೆಂಬು ಪ್ರದೇಶದಲ್ಲಿ ಸತತವಾಗಿ 100 ಮಿಮೀಗಿಂತ ಹೆಚ್ಚು ಮಳೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 191 ಮಿಮೀ ಮಳೆಯಾಗಿದೆ. ಎಲ್ಲೆಡೆಯೂ ಹೊಳೆ, ನದಿಗಳು ತುಂಬಿ ಹರಿಯುತ್ತಿದೆ. ಮುಂದಿನ 24 ಗಂಟೆಗಳ ಕಾಲ ಆರೆಂಜ್‌ ಎಲರ್ಟ್‌ ಇದೆ. ಉತ್ತಮ ಮಳೆಯಾಗಬಹುದು.

ಎಲ್ಲೆಲ್ಲೆ ಎಷ್ಟು ಮಳೆ ?
  • ಸುಳ್ಯ 166 ಮಿಮೀ,
  • ಕಲ್ಲಾಜೆಯಲ್ಲಿ 204 ಮಿಮೀ,
  • ಮಡಪ್ಪಾಡಿ 75  ಮಿಮೀ,
  • ಗುತ್ತಿಗಾರು-ಮೆಟ್ಟಿನಡ್ಕ 214 ಮಿಮೀ,
  • ಕಮಿಲ 169 ಮಿಮೀ ,
  • ಬಾಳಿಲ 169 ಮಿಮೀ ,
  • ಕೊಲ್ಲಮೊಗ್ರ 189 ಮಿಮೀ,
  • ಸುಬ್ರಹ್ಮಣ್ಯ 173 ಮಿಮೀ ,
  • ಕಲ್ಮಡ್ಕ 176 ಮಿಮೀ,
  • ಬಳ್ಪ 211 ಮಿಮೀ,
  • ಬೆಳ್ಳಾರೆ 145 ಮಿಮೀ ,
  • ಬೆಳ್ತಂಗಡಿ 179  ಮಿಮೀ,
  • ಪುತ್ತೂರು ಮುಂಡೂರು 110 ಮಿಮೀ ,
  • ಕೋಡಿಂಬಾಳ 144 ಮಿಮೀ,
  • ಕಾರ್ಕಳದಲ್ಲಿ 200 ಮಿಮೀ ಮಳೆಯಾಗಿದೆ. 
ನೇತ್ರಾವತಿ ಹಾಗೂ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಹಲವು ಕಡೆಗಳಲ್ಲಿ  ತೋಟಗಳಿಗೆ ನೀರು ನುಗ್ಗಿದೆ ಬಂಟ್ವಾಳದಲ್ಲಿ ಅಪಾಯಮಟ್ಟದಲ್ಲಿ  ನೇತ್ರಾವತಿ ನದಿ ಹರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಭೂಕುಸಿತ, ರಸ್ತೆ ಸಂಪರ್ಕ ಕಡಿತ ಸಂಭವಿಸಿದೆ. ಸುಳ್ಯ ತಾಲೂಕಿನ ಪಂಜದಲ್ಲಿ  ನದಿ ತುಂಬಿ ಹರಿದು ಪಂಜ-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿದು ಸ್ನಾನ ಘಟ್ಟ ಜಲಾವೃತವಾಗಿದೆ. ಸಂಪಾಜೆ ಕಲ್ಲುಗುಂಡಿಯಲ್ಲಿ  ನೀರು ಹರಿದು ತೋಟಗಳಿಗೆ , ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿ ಭೂಕುಸಿತ ಸಂಭವಿಸಿ ಮನೆ ಅಪಾಯದಲ್ಲಿದೆ. ಈಗಲೂ ಮಳೆ ಧಾರಾಕಾರವಾಗಿ ಸುರಿಯುತ್ತಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ

‘ರೋಸ್ಟೆಡ್ ಅಡಿಕೆ’ಯನ್ನು ಯಾವ ಸುಂಕ ವರ್ಗದಡಿ ಪರಿಗಣಿಸಬೇಕು ಎಂಬ ವಿವಾದಕ್ಕೆ ಮುಂಬೈ CAAR…

5 hours ago

ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!

ಮಳೆ ಇಲ್ಲದಿದ್ದರೆ ರಾಗಿ ಸೇರಿದಂತೆ ಬರ ಸಹಿಷ್ಣು ಬೆಳೆಗಳೂ ಉಳಿಯುವುದಿಲ್ಲ ಎಂಬುದನ್ನು ಕರ್ನಾಟಕದ…

6 hours ago

₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ UPI ವ್ಯಾಪಾರಿ ವಹಿವಾಟುಗಳಿಗೆ MDR ವಿಧಿಸುವ ಕೇಂದ್ರದ ನಿರ್ಧಾರಕ್ಕೆ…

13 hours ago

ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ

ಸಮರ್ಕಂಡ್‌ನಲ್ಲಿ ನಡೆದ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷರ ತಂಡ ಬೆಳ್ಳಿ ಹಾಗೂ…

14 hours ago

ಮಳೆ ಬದಲಾಗಿದೆಯೇ? ಪ್ರಕೃತಿ ಬದಲಾಗಿದೆಯೇ? ಅಥವಾ ನಾವೇ ಬದಲಾಗಿದ್ದೇವೆಯೇ?

ಕಳೆದ ಕೆಲವು ದಶಕಗಳಲ್ಲಿ ಮಳೆಯ ಸಮಯ, ತೀವ್ರತೆ ಮತ್ತು ಹಂಚಿಕೆಯಲ್ಲಿ ಬದಲಾವಣೆ ಕಂಡುಬರುತ್ತಿರುವುದಕ್ಕೆ…

14 hours ago

ಹವಾಮಾನ ವರದಿ | 28-09-2026 | ಮುಂಗಾರು ಹಿಂದೆ ಸರಿಯುತ್ತಿದ್ದರೂ ಮಳೆ ಇನ್ನೂ ಮುಗಿದಿಲ್ಲ

ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ಆರಂಭವಾಗಿದ್ದರೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಗುಡುಗು…

16 hours ago