ಕಳೆದ ಎರಡು ದಿನಗಳಿಂದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ, ಮಲೆನಾಡು ಪ್ರದೇಶದಲ್ಲಿ 150 ಮಿಮೀ+ ಮಳೆಯಾಗಿದೆ. ಹವಾಮಾನ ಆಸಕ್ತರು ಹಾಗೂ ಮಳೆ ದಾಖಲು ವಾಟ್ಸಪ್ ಗುಂಪಿನ ಮಳೆ ಮಾಹಿತಿ ಪ್ರಕಾರ ಸುಳ್ಯ ತಾಲೂಕಿನಲ್ಲಿ ಅಧಿಕ ಮಳೆಯಾಗಿದೆ.
ಸುಳ್ಯದ ಕೊಲ್ಲಮೊಗ್ರದಲ್ಲಿ 199 ಮಿಮೀ ಮಳೆಯಾದರೆ, ಬೆಳ್ಳಾರೆ 160 ಮಿಮೀ, ಕಮಿಲ 193 ಮಿಮೀ, ಕಡಬ ಕೋಡಿಂಬಾಳ 162 ಮಿಮೀ, ಬಂಟ್ವಾಳ ಪುಣಚ 79 ಮಿಮೀ, ಕೊಳ್ತಿಗೆ 105 ಮಿಮೀ , ಸುಳ್ಯ 169 ಮಿಮೀ, ಪುತ್ತೂರು ಬಂಗಾರಡ್ಕ 155 ಮಿಮೀ, ಪುತ್ತೂರು ಬಲ್ನಾಡು 110 ಮಿಮೀ ಮಳೆ ದಾಖಲಾಗಿದೆ. ಕಾರ್ಕಳ ಬಜಗೋಳಿಯಲ್ಲಿ 282 ಮಿಮೀ , ಬಂಟ್ವಾಳ ಕೆಲಿಂಜ 135 ಮಿಮೀ, ಬಳ್ಪ 207 ಮಿಮೀ, ರಾಮಕುಂಜ 170 ಮಿಮೀ, ಸುಳ್ಯ ನಡುಗಲ್ಲು 217 ಮಿಮೀ, ಕಡಬ 212 ಮಿಮೀ, ದೊಡ್ಡತೋಟ 176 ಮಿಮೀ, ಮುರುಳ್ಯ 180 ಮಿಮೀ, ಬೆಳ್ತಂಗಡಿ 218 ಮಿಮೀ, ಮಡಪ್ಪಾಡಿ 189 ಮಿಮೀ, ಬಾಳಿಲ 171 ಮಿಮೀ, ಕಲ್ಲಾಜೆ 232 ಮಿಮೀ, ಉಬರಡ್ಕ 175 ಮಿಮೀ, ಎಣ್ಮೂರು 193 ಮಿಮೀ, ಸುಬ್ರಹ್ಮಣ್ಯ 165 ಮಿಮೀ, ಕಾಸರಗೋಡು ಕಲ್ಲಕಟ್ಟ 165 ಮಿಮೀ, ಕಲ್ಮಡ್ಕ 180 ಮಿಮೀ ಮಳೆಯಾಗಿದೆ. ಚೆಂಬು 232 ಮಿಮೀ, ಎಡಮಂಗಲ 196 ಮಿಮೀ, ಮೆಟ್ಟಿನಡ್ಕ 228 ಮಿಮೀ, ಕಂದ್ರಪ್ಪಾಡಿ 224 ಮಿಮೀ, ಪಂಬೆತ್ತಾಡಿ 210 ಮಿಮೀ, ಮಲ್ಲಾರ 203 ಮಿಮೀ ಮಳೆಯಾಗಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…