ಮಳೆಗಾಲದಲ್ಲಿ ನಿರೀಕ್ಷೆಯಷ್ಟು ಮಳೆ ಬರದೇ ಹೋಯಿತು. ಬರದ ಛಾಯೆ ಆವರಿಸಿತು. ಚಳಿಗಾಲ ಬಂದಾಗಲೂ ಚಳಿ ದೂರವಾಯಿತು. ಈ ಬಾರಿ 18 ಡಿಗ್ರಿಗಿಂತ ಕಡಿಮೆ ಚಳಿ ಇಲ್ಲದೇ ಹೋಯಿತು. ಈಗ ಮತ್ತೆ ಮಳೆ ಶುರುವಾಗಿದೆ. ಕೆಲವು ಕಡೆ ಉತ್ತಮ ಮಳೆ, ಇನ್ನೂ ಕೆಲವು ಕಡೆ ತುಂತುರು ಮಳೆ ಕರಾವಳಿ ಪ್ರದೇಶದಲ್ಲಿ ಕಾಣಿಸಿದೆ. ಒಟ್ಟಾರೆ ಈ ಬಾರಿ ಹವಾಮಾನ ಕೈಕೊಟ್ಟಿದೆ. ಕೃಷಿ, ಗ್ರಾಮೀಣ ಭಾಗ ಸಂಕಷ್ಟಕ್ಕೆ ಸಿಲುಕುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಕಡಬ ,ಪುತ್ತೂರು, ಸುಳ್ಯ, ಬಂಟ್ವಾಳ ಭಾಗದಲ್ಲಿ ಬುಧವಾರ ಮುಂಜಾನೆ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಮಂಗಳವಾರ ಸಂಜೆಯಿಂದಲೇ ತುಂತುರು ಮಳೆಯ ಸಿಂಚನವಾಗುತ್ತಿದ್ದು ಮೋಡ ಕವಿದ ವಾತಾವರಣವಿತ್ತು.ಕಾಸರಗೋಡು ಕಡೆ 2 ಮಿಮೀ ವರೆಗೆ ಮಳೆಯಾದರೆ ಬಂಟ್ವಾಳ ಪ್ರದೇಶದಲ್ಲಿ 5 ಮಿಮೀ ಮಳೆಯಾಗಿದೆ.
ಧನುರ್ಮಾಸದಲ್ಲಿ ವಿಪರೀತ ಚಳಿ ಇರುವುದು ಪದ್ಧತಿ. ಆದರೆ ಈಗ ಅಕಾಲಿಕ ಮಳೆ ಕೃಷಿಕರಿಗೂ ಸಂಕಷ್ಟ. ಅಡಿಕೆ ಬೆಳೆ ಸಹಿತ ಎಲ್ಲಾ ಕೃಷಿಕರಿಗೂ ಸಂಕಷ್ಟ. ಅಡಿಕೆ ಒಣಗಿಸಲು ಹರಸಾಹಸ, ರಬ್ಬರ್ ಇಳುವರಿ ಕುಂಠಿತವಾಗಿದೆ. ಮುಂದಿನ ಅಡಿಕೆ ಫಸಲಿಗೂ ಇದೇ ಸಂಕಷ್ಟದ ಮಳೆ. ಚಳಿಯ ಕೊರತೆ, ಮಳೆಯ ಆಗಮನ ಇದೆರಡೂ ಈಗ ಸಮಸ್ಯೆ, ಕೃಷಿಗೂ ಸಂಕಷ್ಟ.
ಉತ್ತರಾಯಣ ಆರಂಭವಾಗಿರುವ ಕಾರಣ ಹಲವು ಮನೆಗಳಲ್ಲಿ ಶುಭಕಾರ್ಯಗಳು, ಭೂತಾರಾದನೆಯಂತಹ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಅಕಾಲಿಕ ಮಳೆಗೆ ಕಾರ್ಯಕ್ರಮ ನಡೆಯುವ ಮನೆಗಳಲ್ಲಿ ಚಿಂತೆ ಉಂಟಾಗಿದೆ.
ಗ್ರಾಮೀಣ ಭಾಗಗಳು ಸೇರಿದಂತೆ ಈಗ ಅಭಿವೃದ್ಧಿ ಕಾರ್ಯಗಳು ಆರಂಭವಾಗುವ ಸಮಯ. ಈಗ ಅಕಾಲಿಕ ಮಳೆಯು ಅಭಿವೃದ್ಧಿ ಕಾರ್ಯಗಳೂ ವಿಳಂಬಕ್ಕೂ ಕಾರಣವಾಗುತ್ತಿದೆ.
RM ನ್ಯೂಸ್, ಕೊಕ್ಕಡ -ನೆಲ್ಯಾಡಿ
Belthangady, Kadaba ,Puttur, Sullia, Bantwal area of Dakshina Kannada district received rain for about an hour on Wednesday morning.
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…
ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…
ತೆಲಂಗಾಣ ಹಾಗೂ ಹೈದ್ರಾಬಾದ್ ಪ್ರದೇಶದಲ್ಲಿ ಹೀಟ್‌ವೇವ್ ಪರಿಸ್ಥಿತಿ ಕಂಡುಬಂದಿದೆ. ಹೀಗಾಗಿ ಹೆಚ್ಚುತ್ತಿರುವ ಉಷ್ಣ…