ಇತ್ತೀಚೆಗಿನ ಕೆಲ ವರ್ಷಗಳಿಂದ ಹವಾಮಾನದಲ್ಲಿ ಭಾರೀ ಬದಲಾವಣೆಗಳು ಕಾಣುತ್ತಿದೆ. ಅತಿಯಾದ ತಾಪಮಾನ ಹಾಗೂ ಅತಿಯಾದ ಮಳೆಯಿಂದ ಕೃಷಿ ಹಾನಿಯಾಗುತ್ತಿದೆ. ಈಗ ಮಳೆ ಅಬ್ಬರದ ಕಾರಣದಿಂದ ಮಳೆಯಾಧಾರಿತ ಕೃಷಿಗಳಲ್ಲಿ ನಷ್ಟ ಉಂಟಾಗುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲ ಇತರ ರಾಜ್ಯಗಳಲ್ಲೂ ಈ ಸಮಸ್ಯೆ ಹೆಚ್ಚಾಗಿದೆ.
ಮಹಾರಾಷ್ಟ್ರದ ಕೆಲವು ಪ್ರದೇಶದ ರೈತರು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಿರಂತರ ಮಳೆಯಿಂದಾಗಿ ತೀವ್ರ ಹೊಡೆತವನ್ನು ಅನುಭವಿಸಿದರು. ಜುಲೈ 2022 ರಲ್ಲಿ ರೈತರು ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದರು. ಮಹಾರಾಷ್ಟ್ರದ ಔರಂಗಾಬಾದ್‌ನ ವಿಭಾಗೀಯ ಕಮಿಷನರೇಟ್ ಪ್ರಕಾರ, 4.48 ಮಿಲಿಯನ್ ರೈತರು ತೀವ್ರ ಬೆಳೆ ಹಾನಿಯನ್ನು ಅನುಭವಿಸಿದ್ದಾರೆ. ಇದು ಈಚೆಗೆ ಹೆಚ್ಚಾಗುತ್ತಿದೆ. ಅನಿರೀಕ್ಷಿತ ಮಳೆಯಿಂದಾಗಿ ಸುಮಾರು 36,52,872 ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದೆ, ಅದರಲ್ಲಿ 35,34,371 ಹೆಕ್ಟೇರ್ ಮಳೆಯಾಶ್ರಿತವಾಗಿದೆ. ಈ ಋತುವಿನಲ್ಲಿ ಔರಂಗಾಬಾದ್, ಬೀಡ್ ಮತ್ತು ಲಾತೂರ್ ಜಿಲ್ಲೆಗಳಲ್ಲಿ ಒಟ್ಟು ಬಿತ್ತನೆ ಪ್ರದೇಶವು ಸುಮಾರು 20,67,896 ಹೆಕ್ಟೇರ್ ಎಂದು ಇಲಾಖೆ ವರದಿ ಮಾಡಿದೆ.
ರಾಜ್ಯದಲ್ಲಿ ಕೂಡಾ ಅದೇ ಮಾದರಿಯಲ್ಲಿ ಮಳೆಯಿಂದಾಗಿ ಕೃಷಿ ಹಾನಿಯಾಗಿದೆ. ಬೀದರ ಜಿಲ್ಲೆಯ ರೈತನೊಬ್ಬ ಮಳೆಯಿಂದಾದ ಹಾನಿಯನ್ನು ವಿವರಿಸುತ್ತಾ, ಸೆಪ್ಟೆಂಬರ್ ತಿಂಗಳು ಬೆಳೆಗಳು ಕೊಯ್ಲು ಪ್ರಾರಂಭವಾಗುವ ತಿಂಗಳು. ಈ ಸಮಯದಲ್ಲಿ ಮಳೆಯಾದರೆ ವಿಪರೀತ ನಷ್ಟವಾಗುತ್ತದೆ ಎನ್ನುತ್ತಾರೆ. ಇನ್ನೊಬ್ಬ ರೈತ ಹತ್ತಿ ಬೆಳೆಯ ಸಂಕಷ್ಟದ ಬಗ್ಗೆ ಮಾತನಾಡಿ ನಾನು ಮೂರು ಎಕರೆ ಭೂಮಿಯಲ್ಲಿ ಹತ್ತಿ ಬೆಳೆದಿದ್ದೇನೆ. ಕಳೆದ ತಿಂಗಳ ಮಳೆಯಿಂದ ಬೆಳೆ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಹವಾಮಾನ ಬದಲಾವಣೆಯ ಕಾರಣದಿಂದ ಈಗ ಸಮಸ್ಯೆಯಾಗುವುದು ಕೃಷಿಗೆ. ಯಾವುದೇ ರೀತಿಯ ಕೀಟಬಾಧೆಯಾಗದಂತೆ ರೈತರು ಮುನ್ನೆಚ್ಚರಿಕೆ ವಹಿಸಿ ಸಾಕಷ್ಟು ಎಚ್ಚರಿಕೆಯಿಂದ ಕೃಷಿ ಮಾಡುತ್ತಾರೆ. ಸಕಾಲದಲ್ಲಿ ಗೊಬ್ಬರವ್ನನೂ ನೀಡುತ್ತಾರೆ. ಆದರೆ ಬೆಳ ಕಟಾವಿಗೆ ಬರುವಾಗ ಅಥವಾ ಹೂವು ಬಿಡಲು ಆರಂಭವಾಗುವ ವೇಳೆ ಮಳೆಯಾದರೆ ಕೃಷಿ ನಷ್ಟವಾಗುತ್ತದೆ, ಕೃಷಿಯ ಶ್ರಮ ವ್ಯರ್ಥವಾಗುತ್ತದೆ.
ಇತ್ತೀಚೆಗೆ ಅಕಾಲದಲ್ಲಿ ಮಳೆಯಾಗುವ ಕಾರಣದಿಂದ ತರಕಾರಿ, ಭತ್ತ, ಬಾಳೆ, ಸೇರಿದಂತೆ ಧಾನ್ಯಗಳಿಗೆ ಹಾನಿಯಾದರೆ ಈ ಕಡೆಗೆ ಅಡಿಕೆ ಒಣಗಿಸಲು, ಕೊಳೆರೋಗದಂತಹ ಬೆಳೆಗಳೂ ಸಂಕಷ್ಟದಲ್ಲಿವೆ. ಹೀಗಾಗಿ ಈಚೆಗೆ ಕೃಷಿಕರ ವಲಯದಲ್ಲಿಯೇ ಹವಾಮಾನ ಬದಲಾವಣೆ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…