ಮಾರ್ಚ್ ತಿಂಗಳಲ್ಲಿ ಅಪರೂಪವಾಗಿ ಕಾಣುವ ಹವಾಮಾನ ಬದಲಾವಣೆ ದೇಶದ ವಿವಿದೆಡೆ ಉತ್ತಮ ಮಳೆಯಾಗಿದೆ. ಮಾರ್ಚ್ ತಿಂಗಳಲ್ಲಿ ಇಷ್ಟು ದೊಡ್ಡ ಮಟ್ಟದ ಮಳೆ ಮತ್ತು ಆಲಿಕಲ್ಲು ಮಳೆ ಸಂಭವಿಸಿರುವುದು ಹವಾಮಾನ ಅಸ್ಥಿರತೆಯ ಸೂಚಕವಾಗಿದೆ. ರೈತರ ಬೆಳೆ ಹಾಗೂ ಆದಾಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ವಿಶೇಷವಾಗಿ ಗುಜರಾತ್‌ನ ರಾಜ್ಕೋಟ್‌ನಲ್ಲಿ ಮಳೆ ಭಾರೀ ಅಬ್ಬರ ತೋರಿದ್ದು, ಕೆಲವೇ ಗಂಟೆಗಳಲ್ಲಿ 38 ಮಿಮೀ ಮಳೆ ದಾಖಲಾಗಿದ್ದು, ಇದು ಮಾರ್ಚ್ ತಿಂಗಳ ಇತಿಹಾಸದಲ್ಲೇ ಅತಿ ಹೆಚ್ಚು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಈ ತಿಂಗಳಲ್ಲಿ ಕೇವಲ 0.1 ಮಿಮೀ ಮಳೆಯಷ್ಟೇ ಆಗುತ್ತದೆ. ಹಿಂದಿನ 15 ವರ್ಷಗಳಲ್ಲಿ ಬಹುತೇಕ ವರ್ಷಗಳಲ್ಲಿ ಮಳೆಯೇ ಆಗದ ಪ್ರದೇಶದಲ್ಲಿ ಇಷ್ಟು ಭಾರೀ ಮಳೆ ಸಂಭವಿಸಿದ್ದು ಅಪರೂಪದ ಘಟನೆ ಎಂದು ತಜ್ಞರು ಹೇಳಿದ್ದಾರೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಹೇಳಿದೆ.
ಈ ಅಸಾಮಾನ್ಯ ಹವಾಮಾನಕ್ಕೆ ಪ್ರಮುಖ ಕಾರಣಗಳನ್ನು ಕೂಡಾ ತಜ್ಞರು ಹೇಳಿದ್ದಾರೆ. ಪಶ್ಚಿಮ ವ್ಯತ್ಯಯ (Western Disturbance), ಚಕ್ರವಾತೀಯ ಸಂಚಲನ, ಮೇಲ್ಮಟ್ಟದ ಟ್ರಫ್ ವ್ಯವಸ್ಥೆ ಹಾಗೂ ಅರೇಬಿಯನ್ ಸಮುದ್ರದಿಂದ ತೇವಾಂಶ ಹರಿವು ಈ ಎಲ್ಲಾ ವ್ಯವಸ್ಥೆಗಳು ಒಂದೇ ವೇಳೆ ಕಾರ್ಯನಿರ್ವಹಿಸಿದ ಪರಿಣಾಮ ಗುಡುಗು, ಗಾಳಿ, ಮಳೆ ಮತ್ತು ಆಲಿಕಲ್ಲು ಮಳೆ ಸೇರಿ ತೀವ್ರ ಹವಾಮಾನ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಕೈಮೆಟ್ ಹೇಳಿದೆ.
ಈ ಅಕಾಲಿಕ ಮಳೆ ಪರಿಣಾಮ, ಬೆಳೆ ಹಾನಿ (ಗೋಧಿ, ಕಡಲೆ, ಜೀರಿಗೆ ಮುಂತಾದವು) , ಕೊಯ್ಲಿಗೆ ಬಂದ ಬೆಳೆಗಳಿಗೆ ನಷ್ಟ, ಮಾರುಕಟ್ಟೆ ಸರಬರಾಜು ವ್ಯತ್ಯಯ ಹಾಗೂ ಗುಣಮಟ್ಟ ಸಮಸ್ಯೆ ಕಂಡುಬರಬಹುದು ಎಂದು ವರದಿಗಳು ತಿಳಿಸಿವೆ.
ಹವಾಮಾನ ತಜ್ಞರ ಪ್ರಕಾರ, ಇದೇ ರೀತಿಯ ಮತ್ತೊಂದು ವ್ಯವಸ್ಥೆ ಈಗ ಮಧ್ಯಪ್ರಾಚ್ಯ ಭಾಗದಲ್ಲಿ ರೂಪಗೊಂಡಿದ್ದು, ಮುಂದಿನ 2-3 ದಿನಗಳಲ್ಲಿ ಮತ್ತೆ ಇದೇ ರೀತಿಯ ಹವಾಮಾನ ಸಂಭವಿಸುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
An unusual weather event struck Rajkot with heavy rain, strong winds and hailstorm, recording a historic 38 mm rainfall in March. The rare phenomenon may impact crops and agriculture, raising concerns among farmers.
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…