ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ

July 5, 2026
7:42 AM
ಈ ವಾರದ ಚಿಂತನೆ - "ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ"
ಸಂಬಂಧಗಳ ಆಟದಲ್ಲಿ ಕೆಲವರು ಗೆಲ್ಲಲು ನಮ್ಮನ್ನು ಕಳೆದುಕೊಳ್ಳುತ್ತಾರೆ. ಇದು ಅರ್ಥವಾಗಲು ಉದ್ದೇಶಪೂರ್ವಕವಾಗಿ ಮೌನವಾಗಿ ನೋಡಿ.. ವಾಸ್ತವ ಅರಿವಾಗುತ್ತದೆ..!. ಇಂತಹ ಸಂದರ್ಭದಲ್ಲಿ ನಮ್ಮನ್ನು ಕಳೆದುಕೊಂಡವರು ಹುಡುಕುವುದಿಲ್ಲ, ಯಾಕೆಂದರೆ ಅವರು ಉದ್ದೇಶಪೂರ್ವಕವಾಗಿಯೇ ನಮ್ಮನ್ನು ಕಳೆದುಕೊಳ್ಳಲು ಬಯಸುತ್ತಾರೆ..!.
ಮನುಷ್ಯನನ್ನು ಹೆಚ್ಚು ಒಡೆಯುವುದು ಶತ್ರುವಿನ ದ್ವೇಷವಲ್ಲ, ತನ್ನವರ ನಿರ್ಲಕ್ಷ್ಯ. ಕೆಲವರು ನಮ್ಮ ಬದುಕಿಗೆ ಬರುವುದು ಜೊತೆಯಾಗಿರಲು ಅಲ್ಲ, ತಮ್ಮ ಅಗತ್ಯ ಮುಗಿಯುವವರೆಗೂ ನಮ್ಮನ್ನು ಬಳಸಿಕೊಳ್ಳಲು. ಅಗತ್ಯ ಇರುವವರೆಗೆ ನಮ್ಮ ಉಪಸ್ಥಿತಿ ಅವರಿಗೆ ಅಮೂಲ್ಯ. ಅಗತ್ಯ ಮುಗಿದ ಕ್ಷಣದಿಂದಲೇ ನಿರ್ಲಕ್ಷ್ಯ.

ಸಂಬಂಧಗಳ ಆಟದಲ್ಲಿ ಕೆಲವರು ಗೆಲ್ಲಲು ನಮ್ಮನ್ನೇ ಕಳೆದುಕೊಳ್ಳುತ್ತಾರೆ. ಅದು ತಪ್ಪಾಗಿ ನಡೆದ ನಿರ್ಧಾರವಲ್ಲ, ಮೊದಲೇ ತೆಗೆದುಕೊಂಡ ತೀರ್ಮಾನ. ಅದಕ್ಕಾಗಿಯೇ ಕೆಲವೊಮ್ಮೆ ಏನನ್ನೂ ಕೇಳಬೇಡಿ… ಏನನ್ನೂ ಸಾಬೀತುಪಡಿಸಲು ಹೋಗಬೇಡಿ… ಮೌನವಾಗಿ ಹಿಂದೆ ಸರಿದು ನೋಡಿ. ಆಗ ಸತ್ಯವೇ ಮಾತನಾಡುತ್ತದೆ. ನಿಜವಾಗಿ ನಿಮ್ಮನ್ನು ಪ್ರೀತಿಸುವವರು ನಿಮ್ಮ ಮೌನವನ್ನು ಅರ್ಥಮಾಡಿಕೊಂಡು ನಿಮ್ಮ ಕೈ ಹಿಡಿಯುತ್ತಾರೆ. ನಿಮ್ಮನ್ನು ಕಳೆದುಕೊಳ್ಳಬೇಕೆಂದೇ ನಿರ್ಧರಿಸಿದವರು ಮಾತ್ರ  ಹಿಂದಿರುಗಿ ನೋಡುವುದಿಲ್ಲ…!

ಜೀವನದ ದೊಡ್ಡ ವ್ಯಂಗ್ಯವೇನೆಂದರೆ, ಈ ಸತ್ಯ ಅರ್ಥವಾಗುವ ಹೊತ್ತಿಗೆ ನಮ್ಮ ವಯಸ್ಸಿನ ಅರ್ಧ ಭಾಗ ಕಳೆದುಹೋಗಿರುತ್ತದೆ. ಆ ಹೊತ್ತಿಗೆ ನಾವು ನಮ್ಮ ಸಮಯ, ನಮ್ಮ ಪ್ರೀತಿ, ನಮ್ಮ ನಂಬಿಕೆ, ನಮ್ಮ ಕನಸು ಎಲ್ಲವನ್ನೂ ತಪ್ಪು ಜನರಿಗಾಗಿ, ತಪ್ಪು ನಿರ್ಧಾರಗಳಿಗಾಗಿ ಖರ್ಚು ಮಾಡಿರುತ್ತೇವೆ. ಅವರು ತಮ್ಮ ಬದುಕಿನ ದಾರಿಯಲ್ಲಿ ಬಹಳ ದೂರ ಸಾಗಿರುತ್ತಾರೆ. ನಾವು ಮಾತ್ರ ನೆನಪುಗಳ ಜೊತೆ ನಿಂತು, “ನಾನು ತಪ್ಪೇ ಮಾಡಿದ್ದೇನಾ?”, “ಎಲ್ಲಿ ತಪ್ಪಾಗಿದೆ” ಎಂದು ನಮ್ಮನ್ನೇ ಪ್ರಶ್ನಿಸುತ್ತಿರುತ್ತೇವೆ.

ಕೆಲವರು ಸಂಬಂಧವನ್ನು ಉಳಿಸಿಕೊಳ್ಳುವುದಿಲ್ಲ, ಸಂಬಂಧವನ್ನು ಬಳಸಿಕೊಳ್ಳುತ್ತಾರೆ. ನಮ್ಮ ಒಳ್ಳೆಯತನವನ್ನು, ದಾಕ್ಷಿಣ್ಯವನ್ನು ದೌರ್ಬಲ್ಯವೆಂದು ಭಾವಿಸುತ್ತಾರೆ. ನಮ್ಮ ಸಹನೆಯನ್ನು ಮೂರ್ಖತನವೆಂದು ಅರ್ಥಮಾಡಿಕೊಳ್ಳುತ್ತಾರೆ. ನಮ್ಮ ಪ್ರೀತಿಯನ್ನು, ಕಾಳಜಿಯನ್ನು ಹಕ್ಕು ಎಂದುಕೊಂಡು , ಕೊನೆಗೆ ಮನಸ್ಸನ್ನು ಒಡೆಯುತ್ತಾರೆ. ಕೊನೆಗೆ ಬೇಕಾದ ಕೆಲಸ ಮುಗಿದ ಮೇಲೆ, ಬಳಸಿದ ವಸ್ತುವಿನಂತೆ ಎಸೆದುಬಿಡುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಆ ಕ್ಷಣದಲ್ಲಿ ನಮ್ಮ ನೋವಿನ ಜೊತೆಗೆ  ವಾಸ್ತವವೊಂದು ಬೆಳಕಾಗುತ್ತದೆ,  “ನಾವು ತಪ್ಪು ಮನುಷ್ಯರನ್ನೇ ಸರಿಯಾದ ಸಂಬಂಧ ಎಂದು ನಂಬಿರುವುದು” ಎಂಬ ಅರಿವು.

ಆದರೆ, ಜೀವನ ಅಲ್ಲೇ ಮುಗಿಯುವುದಿಲ್ಲ, ಎನ್ನುವ ಪಾಸಿಟಿವ್‌ ಯೋಚನೆ ಈ ಸಮಯ ಬರದೇ ಇದ್ದರೆ ಮತ್ತೆ ಸೋಲುಗಳೇ ನಿಶ್ಚಿತ. ಹೀಗಾಗಿ ಕೆಲವರು ದೂರ ಹೋಗುವುದು ಶಿಕ್ಷೆಯಲ್ಲ, ಪಾಠ. ಕೆಲವರು ಕೈ ಬಿಡುವುದು ನಷ್ಟವಲ್ಲ, ನಿಜವಾದ ಮುಖಗಳನ್ನು ಪರಿಚಯಿಸುವ ಅವಕಾಶ. ನಮ್ಮನ್ನು ಕಳೆದುಕೊಂಡವರು ನಮ್ಮನ್ನು ಹುಡುಕುವುದಿಲ್ಲ; ಆದರೆ ಅದಕ್ಕಾಗಿ ನಾವು ನಮ್ಮನ್ನೇ ಕಳೆದುಕೊಳ್ಳಬೇಕೆಂದಿಲ್ಲ.

ಒಂದು ದಿನ  ನಿಮ್ಮನ್ನೇ ಸ್ವಾಭಿಮಾನದಿಂದ ಕೇಳಿ: “ನನ್ನನ್ನು ಗೌರವಿಸದವರಿಗಾಗಿ ನಾನು ಇನ್ನೆಷ್ಟು ಕಣ್ಣೀರು ಸುರಿಸಬೇಕು?” ಈ ಪ್ರಶ್ನೆಗೆ ನಿಮ್ಮ ಮನಸ್ಸು ಕೊಡುವ ಉತ್ತರವೇ ನಿಮ್ಮ ಹೊಸ ಬದುಕಿನ ಆರಂಭ.

ಜೀವನದ ಕೊನೆಯಲ್ಲಿ ಉಳಿಯುವುದು ನಮ್ಮನ್ನು ಬಳಸಿಕೊಂಡವರ ನೆನಪುಗಳಲ್ಲ; ನಮ್ಮನ್ನು ನಿಜವಾಗಿ ಪ್ರೀತಿಸಿದವರ ಪ್ರೀತಿ ಮತ್ತು ನಮ್ಮ ಸ್ವಾಭಿಮಾನ. ಉಳಿದವರು ಕೇವಲ ಪಾಠಗಳು. ಕೆಲವು ಪಾಠಗಳು ದುಬಾರಿಯಾಗಿರಬಹುದು. ಆದರೆ ಅವೇ ಬದುಕಿಗೆ ಹೊಸ ತಿರುವು ನೀಡುತ್ತವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Turn is a weekly reflective column that explores relationships, self-respect, and life lessons. Sometimes silence reveals the truth more clearly than words. Those who intentionally leave us may never return, but that should not stop us from valuing ourselves. Every painful experience can become a turning point toward a stronger and wiser life.

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…

 

View this post on Instagram

 

A post shared by Rural Mirror (@theruralmirror)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಅಪ್ಪ ಯಾಕೆ ವಿಚಿತ್ರವಾಗಿ ಕಾಣುತ್ತಾನೆ?
July 19, 2026
7:52 AM
by: ಮಹೇಶ್ ಪುಚ್ಚಪ್ಪಾಡಿ
ಆರೋಪದ ಆಚೆ ನಿಂತು ಒಮ್ಮೆ ಯೋಚಿಸಿದ್ದೀರಾ..?
July 12, 2026
11:57 AM
by: ಮಹೇಶ್ ಪುಚ್ಚಪ್ಪಾಡಿ
E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ
ವಿವಾಹದ ಬದಲಾಗುತ್ತಿರುವ ಮುಖ
July 5, 2026
2:16 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror