ವಾಹನ ಸಂಚಾರಕ್ಕೆ ಮುಕ್ತವಾಗದ ಸೇತುವೆ | ಅಪಾಯ ಆಹ್ವಾನಿಸುತ್ತಿದೆ ಮರಳು ಚೀಲ |

June 3, 2022
2:03 PM
ಇದು ವಿಷಯ :
ರಸ್ತೆ -ಸೇತುವೆ ಕಾಮಗಾರಿ ಮುಗಿದರೂ ವಾಹನ ಸಂಚಾರಕ್ಕೆ ಮುಕ್ತವಾಗದ ರಸ್ತೆ. ಇದಕ್ಕೆ ಅಡ್ಡವಾಗಿ ಇರಿಸಿದ ಮರಳು ಚೀಲ ಈಗ ವಾಹನ ಸವಾರರರಿಗೆ ಸಂಕಷ್ಟ ತಂದಿದೆ. ಇಲಾಖಾ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ  ಪಡ್ಪಿನಂಗಡಿ ಬಳಿಯ ಕುಳಾಯಿತೋಡಿಯಲ್ಲಿ  ಸೇತುವೆ ಸಂಪೂರ್ಣಗೊಂಡರೂ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ. ಇದೀಗ ವಾಹನ ಸವಾರರಿಗೆ ಅದರಲ್ಲೂ ಬೈಕ್‌ ಸವಾರರಿಗೆ ಅಪಾಯವನ್ನು ಆಹ್ವಾನಿಸುತ್ತಿದೆ. ಈಗಾಗಲೇ ಹಲವು ಬೈಕ್‌ ಉರುಳಿ, ಸವಾರರಿಗೆ ಗಾಯವಾಗಿದೆ. ಇಲಾಖೆಗಳು ದಿವ್ಯ ಮೌನ ವಹಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಬೈಕ್‌ ಉರುಳಿ ಜಖಂ ಆಗಿರುವ ವಸ್ತುಗಳು

ನಿಂತಿಕಲ್ಲು-ಪಡ್ಪಿನಂಗಡಿ ನಡುವೆ ಇರುವ ಕುಳಾಯಿತೋಡಿಯಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ  ಪ್ರತ್ಯೇಕವಾದ ಸೇತುವೆ ರಚನೆಯಾಗಿದೆ. ಅದಕ್ಕೆ ಸಂಪರ್ಕ ರಸ್ತೆಯೂ ರಚನೆಯಾಗಿದೆ. ಆದರೆ ವಾಹನ ಸಂಚಾರ ಆಗದಂತೆ ಮರಳು ಚೀಲ ಇಡಲಾಗಿದೆ. ಇದೀಗ ಮರಳು ಚೀಲದ ಕಾರಣದಿಂದ ದ್ವಿಚಕ್ರ ಸವಾರರಿಗೆ ಅಪಾಯವನ್ನುಂಟು ಮಾಡಿದೆ. ದೂರದಿಂದ ಈ ಚೀಲದ ತಡೆಯು ಕಾಣದೆ ಹತ್ತಿರ ಬಂದಾಗಲಷ್ಟೇ ಕಾಣುವ ಕಾರಣದಿಂದ ಹಲವು ಬೈಕ್‌ ಸವಾರರು ಉರುಳಿದ್ದಾರೆ ಎಂದು ಸ್ಥಳೀಯರಾದ ಹಮೀದ್‌ ಮರಕಡ ಹೇಳಿದ್ದಾರೆ.

ಈಗಾಗಲೇ ಪೂರ್ಣಗೊಂಡ ಕಾಮಗಾರಿಯನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡಬೇಕು. ಇದರಿಂದ ಜನರಿಗೂ ಸಮಸ್ಯೆ, ವಾಹನ ಸವಾರರಿಗೂ ಅಪಾಯವನ್ನು ಆಹ್ವಾನಿಸುತ್ತದೆ. ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ವಾಹನ ಸಂಚಾರಕ್ಕೆ ಮುಕ್ತವಾಗಬೇಕು ಎಂದು ಗ್ರಾಪಂ ಮಾಜಿ ಸದಸ್ಯ ರಫೀಕ್‌ ಐವತ್ತೊಕ್ಲು ಒತ್ತಾಯಿಸಿದ್ದಾರೆ.

ಈಗಾಗಲೇ ನಿರ್ಮಾಣ ಮಾಡಿರುವ ಸೇತುವೆ ಹಾಗೂ ಸಂಪರ್ಕ ರಸ್ತೆಯು ಅವೈಜ್ಞಾನಿಕವಾಗಿದೆ ಎಂದು ಮೇಲ್ನೋಟದಿಂದ ನೋಡುವಾಗ ಕಾಣುತ್ತದೆ. ವಾಹನಗಳು ಅದರಲ್ಲೂ ದೂರದೂರಿನಿಂದ ಆಗಮಿಸುವ ವಾಹನ ಚಾಲಕರು ನೇರವಾಗಿ ಆಗಮಿಸಿದರೆ ಮುಂದಿರುವ ಗುಂಡಿಗೆ ಪಲ್ಟಿಯಾಗುವ ಸಾಧ್ಯತೆ ಇದೆ. ಇಂತಹ ಕಾಮಗಾರಿ ನಡೆಸುವಾಗ ಪೂರ್ವ ಯೋಜನೆ ಇಲ್ಲವೇ ಎಂದೂ ಸ್ಥಳೀಯರಾದ ರೋಹಿತ್‌ ಪ್ರಶ್ನಿಸಿದ್ದಾರೆ.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್‌ಗೆ ಮಂಗಳೂರಿನಲ್ಲಿ ಅಭಿನಂದನೆ – ಪುಟ್ಟ ಕಲಾವಿದನ ಸಾಧನೆಯ ಹಿಂದಿನ ಪಯಣಕ್ಕೆ ಮೆಚ್ಚುಗೆ
September 14, 2026
2:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?
September 14, 2026
12:51 PM
by: ಸಾಯಿಶೇಖರ್ ಕರಿಕಳ
ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ
September 14, 2026
11:33 AM
by: ದ ರೂರಲ್ ಮಿರರ್.ಕಾಂ
ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ
September 14, 2026
11:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror