ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ ಪಡ್ಪಿನಂಗಡಿ ಬಳಿಯ ಕುಳಾಯಿತೋಡಿಯಲ್ಲಿ ಸೇತುವೆ ಸಂಪೂರ್ಣಗೊಂಡರೂ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ. ಇದೀಗ ವಾಹನ ಸವಾರರಿಗೆ ಅದರಲ್ಲೂ ಬೈಕ್ ಸವಾರರಿಗೆ ಅಪಾಯವನ್ನು ಆಹ್ವಾನಿಸುತ್ತಿದೆ. ಈಗಾಗಲೇ ಹಲವು ಬೈಕ್ ಉರುಳಿ, ಸವಾರರಿಗೆ ಗಾಯವಾಗಿದೆ. ಇಲಾಖೆಗಳು ದಿವ್ಯ ಮೌನ ವಹಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಿಂತಿಕಲ್ಲು-ಪಡ್ಪಿನಂಗಡಿ ನಡುವೆ ಇರುವ ಕುಳಾಯಿತೋಡಿಯಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ ಪ್ರತ್ಯೇಕವಾದ ಸೇತುವೆ ರಚನೆಯಾಗಿದೆ. ಅದಕ್ಕೆ ಸಂಪರ್ಕ ರಸ್ತೆಯೂ ರಚನೆಯಾಗಿದೆ. ಆದರೆ ವಾಹನ ಸಂಚಾರ ಆಗದಂತೆ ಮರಳು ಚೀಲ ಇಡಲಾಗಿದೆ. ಇದೀಗ ಮರಳು ಚೀಲದ ಕಾರಣದಿಂದ ದ್ವಿಚಕ್ರ ಸವಾರರಿಗೆ ಅಪಾಯವನ್ನುಂಟು ಮಾಡಿದೆ. ದೂರದಿಂದ ಈ ಚೀಲದ ತಡೆಯು ಕಾಣದೆ ಹತ್ತಿರ ಬಂದಾಗಲಷ್ಟೇ ಕಾಣುವ ಕಾರಣದಿಂದ ಹಲವು ಬೈಕ್ ಸವಾರರು ಉರುಳಿದ್ದಾರೆ ಎಂದು ಸ್ಥಳೀಯರಾದ ಹಮೀದ್ ಮರಕಡ ಹೇಳಿದ್ದಾರೆ.
ಈಗಾಗಲೇ ಪೂರ್ಣಗೊಂಡ ಕಾಮಗಾರಿಯನ್ನು ವಾಹನ ಸಂಚಾರಕ್ಕೆ ಮುಕ್ತ ಮಾಡಬೇಕು. ಇದರಿಂದ ಜನರಿಗೂ ಸಮಸ್ಯೆ, ವಾಹನ ಸವಾರರಿಗೂ ಅಪಾಯವನ್ನು ಆಹ್ವಾನಿಸುತ್ತದೆ. ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ವಾಹನ ಸಂಚಾರಕ್ಕೆ ಮುಕ್ತವಾಗಬೇಕು ಎಂದು ಗ್ರಾಪಂ ಮಾಜಿ ಸದಸ್ಯ ರಫೀಕ್ ಐವತ್ತೊಕ್ಲು ಒತ್ತಾಯಿಸಿದ್ದಾರೆ.
ಈಗಾಗಲೇ ನಿರ್ಮಾಣ ಮಾಡಿರುವ ಸೇತುವೆ ಹಾಗೂ ಸಂಪರ್ಕ ರಸ್ತೆಯು ಅವೈಜ್ಞಾನಿಕವಾಗಿದೆ ಎಂದು ಮೇಲ್ನೋಟದಿಂದ ನೋಡುವಾಗ ಕಾಣುತ್ತದೆ. ವಾಹನಗಳು ಅದರಲ್ಲೂ ದೂರದೂರಿನಿಂದ ಆಗಮಿಸುವ ವಾಹನ ಚಾಲಕರು ನೇರವಾಗಿ ಆಗಮಿಸಿದರೆ ಮುಂದಿರುವ ಗುಂಡಿಗೆ ಪಲ್ಟಿಯಾಗುವ ಸಾಧ್ಯತೆ ಇದೆ. ಇಂತಹ ಕಾಮಗಾರಿ ನಡೆಸುವಾಗ ಪೂರ್ವ ಯೋಜನೆ ಇಲ್ಲವೇ ಎಂದೂ ಸ್ಥಳೀಯರಾದ ರೋಹಿತ್ ಪ್ರಶ್ನಿಸಿದ್ದಾರೆ.
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…
ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಸುಕ್ಕಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ ಚಿಕ್ಕ ದಾಗಿ ಕಟ್…
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…