Advertisement
MIRROR FOCUS

ಕಟ್ಟಡಗಳು ಅಥವಾ ವಾಣಿಜ್ಯ ಚಟುವಟಿಕೆಗಳನ್ನು ರಕ್ಷಿಸಲು ಮರಗಳನ್ನು ಕಡಿಯುವಂತಿಲ್ಲ | ಕೇರಳ ಹೈಕೋರ್ಟ್

Share

ಕಟ್ಟಡಗಳು ಅಥವಾ ವಾಣಿಜ್ಯ ಚಟುವಟಿಕೆಗಳನ್ನು ರಕ್ಷಿಸಲು ಮರಗಳನ್ನು ಕಡಿಯಬಾರದು. ವಿನಾಕಾರಣ ಮರಗಳನ್ನು ಕಡಿಯುವುದು ನಮ್ಮ ಮಾತೃಭೂಮಿಯ ಮತ್ತು ಪರಿಸರದ ಕಗ್ಗೊಲೆಯೇ ಹೊರತು ಬೇರೇನೂ ಅಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ.…….ಮುಂದೆ ಓದಿ…..

ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದಂತೆ, ವ್ಯಾಪಾರ ವ್ಯವಹಾರಗಳ ಉದ್ದೇಶಗಳಿಗಾಗಿ ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯದಂತೆ ನೋಡಿಕೊಳ್ಳಲು ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಸಾರ್ವಜನಿಕರು ಅಪಾಯಕ್ಕೆ ಸಿಲುಕುವ ಸಾಧ್ಯತೆಯಂತಹ ಮರಗಳನ್ನು ಕಡಿಯಲು ಕೂಡಾ ಸರಿಯಾದ ಕಾರಣಗಳು ಇರಬೇಕು ಎಂದು ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಹೇಳಿದ್ದಾರೆ.

ಕಟ್ಟಡದ ಸಮೀಪವಿರುವ ಮರಗಳನ್ನು ಕಡಿಯಲು ಮತ್ತು ತೆಗೆಯಲು ಅನುಮತಿ ನೀಡಬೇಕು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ  ಅರ್ಜಿಯ ವಿಚಾರಣೆಯ ಬಳಿಕ ತೀರ್ಪು ನೀಡಲಾಗಿದೆ.

ಕೇರಳ ರಾಜ್ಯವು ಸಾಕಷ್ಟು ಕಾರಣವಿಲ್ಲದೆ  ರಸ್ತೆಬದಿಗಳಲ್ಲಿ ಮರಗಳನ್ನು ಕಡಿಯಲು  ಅನುಮತಿ ನೀಡದಂತೆ ನೋಡಿಕೊಳ್ಳಬೇಕು. ಮರಗಳು ತಂಪಾದ ವಾತಾವರಣವನ್ನು, ಶುದ್ಧ ಆಮ್ಲಜನಕ ಮತ್ತು ಪಕ್ಷಿಗಳು -ಪ್ರಾಣಿಗಳಿಗೆ ಆಶ್ರಯವನ್ನು ನೀಡುತ್ತವೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಅಥವಾ ಅಕ್ಕಪಕ್ಕದ ಕಟ್ಟಡಗಳಿಗೆ ನೆರಳಾಗುತ್ತದೆ ಎಂಬ ಕಾರಣಕ್ಕೆ ರಾಜ್ಯದ ರಸ್ತೆಬದಿಯಲ್ಲಿರುವ ಯಾವುದೇ ಮರಗಳನ್ನು ಕಡಿಯಲು ಅನುಮತಿ ನೀಡಬಾರದು, ಈ ಬಗ್ಗೆ ಅಗತ್ಯ ಆದೇಶಗಳನ್ನು ನೀಡಬೇಕು. ಮರದ ಹಾನಿಯಿಂದಾಗಿಯೇ ಇಂದು ಇದು ಜನರ ಜೀವನಕ್ಕೆ ಸಂಕಷ್ಟವಾಗುತ್ತಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ತಮ್ಮ ತೀರ್ಪಿನ ವೇಳೆ ಕವಿ-ಹೋರಾಟಗಾರ್ತಿ ಸುಗತಕುಮಾರಿ ಅವರ ಕವನವನ್ನು ಉಲ್ಲೇಖಿಸಿದ  ನ್ಯಾಯಮೂರ್ತಿ ಕುಂಞಿಕೃಷ್ಣನ್ ಅವರು,

ನಮ್ಮ ತಾಯಿಗಾಗಿ ಸಸಿ ನೆಡೋಣ….

ನಮ್ಮ ಪುಟ್ಟ ಮಕ್ಕಳಿಗಾಗಿ ಸಸಿ ನೆಡೋಣ….

ನೂರು ಪಕ್ಷಿಗಳಿಗೆ ಸಸಿ ನೆಡೋಣ….

ಉತ್ತಮ ನಾಳೆಗಾಗಿ ಸಸಿ ನೆಡೋಣ…..,

ಇದು ಉಸಿರಾಟಕ್ಕಾಗಿ ನೆಡಲಾಗುತ್ತದೆ….,

ಮಳೆಗಾಗಿ ಕೃತಜ್ಞತೆಯಿಂದ ಇದನ್ನು ನೆಡಲಾಗುತ್ತದೆ….,

ಸೌಂದರ್ಯಕ್ಕಾಗಿ, ಛಾಯೆಗಾಗಿ, ಹಣ್ಣುಗಳಂತಹ ಜೇನುತುಪ್ಪಕ್ಕಾಗಿ….,

ನೂರಾರು ಸಸಿಗಳನ್ನು ನೆಡೋಣ…….

ಮರಗಳನ್ನು ಕಡಿದು ತೆಗೆಯಲು ಕೊಡಲಿ ಹಿಡಿದಾಗಲೆಲ್ಲ ನಿಸರ್ಗ, ಪರಿಸರಕ್ಕಾಗಿ ಬದುಕಿದ ಸುಗತಕುಮಾರಿ ಟೀಚರ್ ಅವರ ಈ ಮಾತುಗಳನ್ನು ಈ ನಾಡಿನ ಪ್ರತಿಯೊಬ್ಬ ಪ್ರಜೆಯೂ ನೆನಪಿಸಿಕೊಳ್ಳಬೇಕು, ವಿನಾಕಾರಣ ಮರಗಳನ್ನು ಕಡಿಯುವುದು ನಮ್ಮ ಪ್ರಕೃತಿ ಮತ್ತು ಪರಿಸರದ ಕಗ್ಗೊಲೆಯೇ ಹೊರತು ಬೇರೇನೂ ಅಲ್ಲ ಎಂದು ಉಲ್ಲೇಖಿಸಿದರು. ಒಂದು ವೇಳೆ ಮರದ ಕೊಂಬೆಗಳು ವಾಲುತ್ತಿದ್ದರೆ ಅದನ್ನು ಕಡಿಯಬಹುದು, ಆದರೆ ಇಡೀ ಮರವನ್ನು ಕಡಿಯಬೇಕಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ರಸ್ತೆ ಬದಿಯಲ್ಲಿ ನಿಂತಿರುವ ಮರಗಳನ್ನು ರಕ್ಷಿಸುವುದು ಪಿಡಬ್ಲ್ಯುಡಿ ಕರ್ತವ್ಯವಾಗಿದೆ, ಅದನ್ನು ನಾಶಪಡಿಸುವ ಕೆಲಸವಲ್ಲ ಎಂದು ನ್ಯಾಯಾಲಯವು ಹೇಳಿದೆ.

(Source : PTI)

The Kerala High Court has directed the state government to ensure no trees on roadsides are felled merely because they obstruct commercial activities. The High Court said that trees can be cut and removed only if they are in damaged condition and as a result pose a danger to public safety.

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

17 hours ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

2 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

2 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

2 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

2 days ago

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?

ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…

2 days ago