Advertisement
MIRROR FOCUS

ರೋಸ್ಟೆಡ್ ಅಡಿಕೆ ವರ್ಗೀಕರಣ ಸ್ಪಷ್ಟ | ಹೈಕೋರ್ಟ್ ತೀರ್ಪಿನ ಬಳಿಕ ಹೊಸ ಆದೇಶಕ್ಕೆ CAAR ನಿರಾಕರಣೆ

Share

ಭಾರತಕ್ಕೆ ಆಮದು ಮಾಡಲಾಗುವ ರೋಸ್ಟೆಡ್ ಅಡಿಕೆ ವರ್ಗೀಕರಣ ಕುರಿತಾಗಿ ಈಗಾಗಲೇ ಹೈಕೋರ್ಟ್ ನೀಡಿದ ತೀರ್ಪು ಅಂತಿಮವಾಗಿರುವ ಹಿನ್ನೆಲೆಯಲ್ಲಿ, ಕಸ್ಟಮ್ಸ್‌ ಪ್ರಾಧಿಕಾರ (CAAR),  ಹೊಸದಾಗಿ ಮುಂಗಡ ತೀರ್ಪು ನೀಡಲು ನಿರಾಕರಿಸಿದೆ. ಈ ನಿರ್ಧಾರವು ಅಡಿಕೆ ಆಮದು ಮತ್ತು ಅಡಿಕೆ ವ್ಯಾಪಾರ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಲಿದೆ. ಅಡಿಕೆ ಬೆಳೆಗಾರರಿಗೆ ಮಾರುಕಟ್ಟೆ ಸ್ಥಿರತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಖಾಸಗಿ ಸಂಸ್ಥೆಯೊಂದು ಇಂಡೋನೇಷ್ಯಾದಿಂದ ರೋಸ್ಟೆಡ್ ಅಡಿಕೆಯನ್ನು ಭಾರತಕ್ಕೆ ಆಮದು ಮಾಡುತ್ತಿದ್ದು, ಈ ಉತ್ಪನ್ನವನ್ನು Customs Tariff Heading 2008 ಅಡಿಯಲ್ಲಿ ವರ್ಗೀಕರಿಸಬೇಕು ಎಂದು CAAR ಮುಂದೆ ಅರ್ಜಿ ಸಲ್ಲಿಸಿತ್ತು. ಈ ರೋಸ್ಟಿಂಗ್ ಪ್ರಕ್ರಿಯೆಯಲ್ಲಿ ಅಡಿಕೆಯನ್ನು ಸುಮಾರು 130°C ರಿಂದ 150°C ತಾಪಮಾನದಲ್ಲಿ ಬಿಸಿ ಮಾಡಲಾಗುತ್ತದೆ. ಇದರಿಂದ ಅಡಿಕೆಯ ತೇವಾಂಶ ಕಡಿಮೆಯಾಗುತ್ತದೆ ಮತ್ತು ಅದರ ಭೌತಿಕ ಹಾಗೂ ರಾಸಾಯನಿಕ ಗುಣಲಕ್ಷಣಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಈ ರೀತಿಯ ರೋಸ್ಟೆಡ್ ಅಡಿಕೆ ನೇರವಾಗಿ ಬಳಕೆಗೆ ಯೋಗ್ಯವಾಗಿದ್ದು, ಮಾರುಕಟ್ಟೆಯಲ್ಲಿ “Roasted Supari” ರೂಪದಲ್ಲಿ ಮಾರಾಟವಾಗುತ್ತದೆ ಎಂದು ಹೇಳಿತ್ತು.

ಆದರೆ,  ಮದ್ರಾಸ್ ಹೈಕೋರ್ಟ್ ಈ ವಿಷಯವನ್ನು ಈಗಾಗಲೇ ಪರಿಶೀಲಿಸಿ, ರೋಸ್ಟಿಂಗ್ ಪ್ರಕ್ರಿಯೆ ಮೂಲಕ ಅಡಿಕೆ ಮೂಲ ಉತ್ಪನ್ನದಿಂದ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ, ಇದನ್ನು ಸಾಮಾನ್ಯ ಒಣ ಅಡಿಕೆ (Chapter 8) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.  ಬದಲಾಗಿ, ರೋಸ್ಟೆಡ್ ಅಡಿಕೆ “Prepared or roasted nuts” ವರ್ಗಕ್ಕೆ ಸೇರಿದ್ದು, Customs Tariff Heading 2008 (Chapter 20) ಅಡಿಯಲ್ಲಿ ವರ್ಗೀಕರಿಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದೆ.

Customs Authority for Advance Rulings (CAAR) ಪ್ರಕಾರ, ಈ ವಿಷಯವನ್ನು ಈಗಾಗಲೇ ಹೈಕೋರ್ಟ್ ತೀರ್ಮಾನಿಸಿರುವುದರಿಂದ, Customs Act Section 28-I ಪ್ರಕಾರ ಅದೇ ವಿಷಯದಲ್ಲಿ ಮತ್ತೆ ತೀರ್ಮಾನ ನೀಡಲು ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ CAAR ಹೊಸ ತೀರ್ಪು ನೀಡಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ತೀರ್ಪು ವಿಶೇಷವಾಗಿ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಧಾರಣೆ ಏರಿಕೆ ಅಥವಾ ಸ್ಥಿರತೆಯತ್ತ ಸಾಗುವ ಸಾಧ್ಯತೆ ಹೆಚ್ಚು.  ರೋಸ್ಟಿಂಗ್ ಪ್ರಕ್ರಿಯೆ ಮೂಲಕ ಅಡಿಕೆ ಹೊಸ ಉತ್ಪನ್ನವಾಗಿ ಪರಿಗಣಿಸಲಾಗುತ್ತದೆ ಎಂಬುದನ್ನು ಕಾನೂನು ಸ್ಪಷ್ಟಪಡಿಸಿದೆ. ಇದರಿಂದ ಮುಂದಿನ ದಿನಗಳಲ್ಲಿ ರೋಸ್ಟೆಡ್ ಅಡಿಕೆ ಆಮದು ಮತ್ತು ಕಸ್ಟಮ್ಸ್ ವರ್ಗೀಕರಣದಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಹೀಗಾಗಿ ರೋಸ್ಟೆಡ್‌ ಅಡಿಕೆ ಅಥವಾ ಡ್ರೈ ಅಡಿಕೆ ಆಮದು ಕಷ್ಟವಾಗಲಿದೆ.

The Customs Authority for Advance Rulings (CAAR), Mumbai, has declined to issue a fresh ruling on roasted areca nut classification, stating that the matter has already been settled by the Madras High Court. The court ruled that roasted arecanut is a processed product and must be classified under Customs Tariff Heading 2008 (Chapter 20), not as raw areca nut under Chapter 8. This decision brings clarity to arecanut importers and the supari processing industry in India.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

2 hours ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

3 hours ago

‘ಗ್ರೀನ್ ಕ್ರೈಮ್’ | ಹವಾಮಾನ ಸಂಕಷ್ಟವಲ್ಲ, ಇದು “ಪರಿಸರ ಅಪರಾಧ” | ಮನೋವಿಜ್ಞಾನಿಯ ಪುಸ್ತಕ ಜಗತ್ತಿಗೆ ಎಚ್ಚರಿಕೆ

ಪರಿಸರ ನಾಶವು ಕೇವಲ ಸಮಸ್ಯೆಯಲ್ಲ, ಅದು ಅಪರಾಧ ಎಂಬುದನ್ನು “ಗ್ರೀನ್ ಕ್ರೈಮ್” ಪುಸ್ತಕ…

3 hours ago

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಅಭಿಯಾನಕ್ಕೆ ಚಾಲನೆ | ಕೃಷಿ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ

ಘಾನಾದಲ್ಲಿ ಮರ ಬೆಳೆ ವೈವಿಧ್ಯೀಕರಣ ಯೋಜನೆ ಆರಂಭಗೊಂಡಿದ್ದು, ರೈತರ ಆದಾಯ ಹೆಚ್ಚಿಸಲು ಮತ್ತು…

11 hours ago

ಹವಾಮಾನ ವರದಿ | 30-03-2026 | ಇವತ್ತಿನ ಮಳೆ ಎಲ್ಲಿ…? ಎಷ್ಟು ದಿನ ಇದೆ ಮಳೆ…?

ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ…

21 hours ago

ರಾಜ್ಯದ ಹಲವೆಡೆ ಮಳೆ ; ಬೆಂಗಳೂರಿನಲ್ಲಿ ಹಗುರ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…

1 day ago