ಓ ಕೆಂಪು ಗುಲಾಬಿ ಹೂವೇ…..
ನೀನೇ ಅಲ್ಲವೇ ಸುಂದರ ಚೆಲುವೆ
ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು
ಆದರೂ ಹೊರಟೆ ನಾ ನಿನ್ನ ಬಣ್ಣಿಸಲು
ಮೃದು ಕೋಮಲ ಕುಸುಮ ನಿನ್ನದು
ಎಲ್ಲರ ಕಣ್ಮನ ಸೆಳೆವ ಅಂದ ನಿನ್ನದು
ನಿನ್ನನೊಮ್ಮೆ ಹಿಡಿದು ಸ್ಪರ್ಶಿಸಲು
ಮನದಲ್ಲಿ ಅದೇನೋ ಪುಳಕವು
ಹೂಗಳ ಜಗದಿ ಮೆರೆಯೋ ರಾಣಿ ನೀನು…
ಸೌಂದರ್ಯ ರಾಶಿಗೆ ಸೋತಿಹುದು ರಾಣಿ ಜೇನು
ನಿನ್ನದೇ ಕುರಿತು ಮನದಿ ಮೂಡಿತೊಂದು ಕವಿತೆ
ಕೇಳು ನನ್ನ ಮನದನ್ನೆ, ಓ ಸುಲಲಿತೆ
ನಿನ್ನ ನೋಡಿದವರ ಮೊಗದಲ್ಲಿ ನಲಿವು
ಮರೆಯಾಗುವುದು ಮನದಿ ತುಂಬಿದ್ದ ನೋವು
ಭಗವಂತ ನಿನ್ನ ಸುತ್ತ ಮುಳ್ಳು ಇಟ್ಟ ಸರಿಯೇನು?
ಅದೇ ನಿನಗೆ ರಕ್ಷಣೆ,ಕ್ಷಮಿಸು ಮರೆತುಬಿಟ್ಟೆ ನಾನು
# ಅಪೂರ್ವ ಚೇತನ್ ಪೆರಂದೋಡಿ
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…