ದೇಶದಲ್ಲಿ ರಬ್ಬರ್ ಉತ್ಪಾದನೆ ಹೆಚ್ಚಳದ ನಡುವೆ ಇದೀಗ ರಬ್ಬರ್ ಆಮದು ನೀತಿಯು ರಬ್ಬರ್ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಲಿದೆ ಎಂದು ಕೇರಳದ ಮಾತೃಭೂಮಿ ವರದಿ ಮಾಡಿದೆ.
ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ರಬ್ಬರ್ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಅದೇ ಸಮಯದಲ್ಲಿ, ರಬ್ಬರ್ ಮತ್ತು ಸಂಯುಕ್ತ ರಬ್ಬರ್ ಆಮದಿನಲ್ಲಿ ಏರಿಕೆ ಕಂಡುಬಂದಿದೆ. 2024-25ರ ಹಣಕಾಸು ವರ್ಷದಲ್ಲಿ ಉತ್ಪಾದನೆಯು ಶೇ. 2.1 ರಷ್ಟು ಹೆಚ್ಚಾಗಿದ್ದರೂ, ಆಮದು ಶೇ. 11.8 ರಷ್ಟು ಹೆಚ್ಚಾಗಿದೆ. ಸಂಯುಕ್ತ ರಬ್ಬರ್ ಆಮದಿನಲ್ಲಿನ ಏರಿಕೆ ಕೃಷಿ ವಲಯಕ್ಕೆ ಕಳವಳಕಾರಿ ಸಂಗತಿಯಾಗಿದೆ. ಇದು ಶೇ. 44.5 ರಷ್ಟು ಹೆಚ್ಚಳವಾಗಿದೆ. ಸಂಯುಕ್ತ ರಬ್ಬರ್ ಆಮದು 2.45 ಲಕ್ಷ ಟನ್‌ಗಳಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ದೇಶವು ವಾರ್ಷಿಕವಾಗಿ 7,000 ಕೋಟಿ ರೂ. ಮೌಲ್ಯದ ರಬ್ಬರ್ ಆಮದು ಮಾಡಿಕೊಳ್ಳುತ್ತದೆ. ಉತ್ಪಾದನೆ ಮತ್ತು ಬಳಕೆಯ ನಡುವೆ 5.35 ಲಕ್ಷ ಟನ್‌ಗಳ ಅಂತರವಿದೆ. ಈ ಅಂತರವನ್ನು ತುಂಬುವ ಗುರಿಯನ್ನು ಇರಿಸಿಕೊಂಡು ದೇಶದ ಈಶಾನ್ಯ ರಾಜ್ಯಗಳಿಗೆ ಕೃಷಿಯ ವಿಸ್ತರಣೆ ಹೊಂದಿದೆ. ಅಲ್ಲಿ ಕೃಷಿ ಚಟುವಟಿಕೆಗೆ ವೇಗ ನೀಡಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಏರುತ್ತಿರುವಾಗಲೂ ಟೈರ್ ಕಂಪನಿಗಳು ಸ್ಥಳೀಯ ರಬ್ಬರ್ ಖರೀದಿಸದೆ ಆಮದು ಮಾಡಿಕೊಳ್ಳುತ್ತಿವೆ. ಆಸಿಯಾನ್ ದೇಶಗಳಾದ ಥೈಲ್ಯಾಂಡ್, ಮಲೇಷ್ಯಾ ಮತ್ತು ಇಂಡೋನೇಷ್ಯಾದಿಂದ ರಬ್ಬರ್ ಆಮದು ನಡೆಯುತ್ತಿದೆ. ಇಲ್ಲಿ ಆಮದು ಸುಂಕ ಅತೀ ಕಡಿಮೆ ಅಂದರೆ 0-5 ಶೇಕಡಾವರೆಗೆ ಆಮದು ಸುಂಕ ಇರುವುದರಿಂದ ಅಲ್ಲಿಂದ ಹೆಚ್ಚಿನ ಪ್ರಮಾಣದ ಸಂಯುಕ್ತ ರಬ್ಬರ್ ಬರುತ್ತಿದೆ. ಹೀಗಾಗಿ ರಬ್ಬರ್ ಧಾರಣೆಯು ಬೆಳೆಗಾರರಿಗೆ ಸಮಧಾನಕರವಾಗಿಲ್ಲ ಎಂದು ಮಾತೃಭೂಮಿ ವರದಿಯಲ್ಲಿ ತಿಳಿಸಿದೆ.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸಿಯಮ್-4 ಮಿಷನ್ನ ನಾಲ್ವರು ಗಗನಯಾತ್ರಿಗಳನ್ನು ಒಳಗೊಂಡ…
ರಾಜ್ಯದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ…
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು…
ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಲಸಿನ…
ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…