ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನದಲ್ಲಿ ತೆಂಗಿನಕಾಯಿ ಸಾಗಿಸಲು ಅನುಮತಿಯನ್ನು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಜ. 20, 2025 ರವರೆಗೆ ಅನುಮೋದನೆಯನ್ನು ನೀಡಿದೆ. ಈಗಿನ ನಿಮಯಗಳ ಅಡಿಯಲ್ಲಿ, ತೆಂಗಿನಕಾಯಿಗಳು ಸುಡುವ ಕಾರಣದಿಂದ ಕ್ಯಾಬಿನ್ ನಲ್ಲಿ ಸಾಗಿಸಲು ಅನುಮತಿ ಇರಲಿಲ್ಲ.
ಸಿವಿಲ್ ಏವಿಯೇಷನ್ ಸೆಕ್ಯುರಿಟಿ ನಿಯಮಗಳ ಪ್ರಕಾರ ಭದ್ರಾ ಸಿಬಂದಿಗಳು ತೆಂಗಿನಕಾಯಿಯನ್ನು ವಿಮಾನದಲ್ಲಿ ಸಾಗಿಸಲು ಅವಕಾಶ ನೀಡುತ್ತಿರಲಿಲ್ಲ. ಆದರೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಹೋಗುವ ಯಾತ್ರಾರ್ಥಿಗಳು ಜನವರಿ 20, 2025 ರವರೆಗೆ ವಿಮಾನಗಳಲ್ಲಿ ಕ್ಯಾಬಿನ್ ಸಾಮಾನುಗಳಲ್ಲಿ ತೆಂಗಿನಕಾಯಿಯನ್ನು ಸಾಗಿಸಬಹುದು ಮತ್ತು ವಿಮಾನಯಾನದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಸೀಮಿತ ಅವಧಿಗೆ ತನ್ನ ಅನುಮೋದನೆಯನ್ನು ನೀಡಿದೆ.
ಆದರೆ ಉಳಿಂದತೆ ಯಾನದಲ್ಲಿ ಅಗತ್ಯವಿರುವ ಎಕ್ಸ್-ರೇ, ಎಕ್ಸ್‌ಪ್ಲೋಸಿವ್ ಟ್ರೇಸ್ ಡಿಟೆಕ್ಟರ್ ಮತ್ತು ಇತರ ತಪಾಸಣೆಗಳ ನಂತರ ಮಾತ್ರ ತೆಂಗಿನಕಾಯಿಯನ್ನು ಸಾಗಿಸಲು ಅನುಮತಿಸಲಾಗುತ್ತದೆ. ಶಬರಿಮಲೆಯ ಅಯ್ಯಪ್ಪ ದೇವಾಲಯವು ನವೆಂಬರ್ ನಂತರದ ಎರಡು ತಿಂಗಳ ತೀರ್ಥಯಾತ್ರೆಗಾಗಿ ತೆರೆಯುತ್ತದೆ. ಈ ಸಮಯದಲ್ಲಿ ಅನೇಕ ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಾರೆ. ಹೀಗೆ ಬರುವ ಎಲ್ಲಾ ಭಕ್ತಾದಿಗಳು ಇರುಮುಡಿಯೊಂದಿಗೆ ಬರುತ್ತಾರೆ. ಇರುಮಡಿಯಲ್ಲಿ ತೆಂಗಿನಕಾಯಿಯೂ ಇರುತ್ತದೆ. ಶಬರಿಮಲೆ ಯಾತ್ರೆಗೆ ಇದು ಅಗತ್ಯ ಹಾಗೂ ಅನಿವಾರ್ಯವಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…