MIRROR FOCUS

ಸಾಗರಮಾಲಾ ಯೋಜನೆ | ಅನುದಾನ ಬಿಡುಗಡೆಗೆ ಮೀನುಗಾರಿಕೆ, ಬಂದರು ಸಚಿವರಿಗೆ ಮನವಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸಾಗರಮಾಲ ಯೋಜನೆಗೆ(Sagara mala Scheme) ರಾಜ್ಯದ ಪಾಲಿನ ಹಣ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ(State Govt) ಕರ್ನಾಟಕ ಜಲಸಾರಿಗೆ ಮಂಡಳಿ(Karnataka Water Transport Board) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯರಾಮ್  ರಾಯಪುರ ಅವರು ಮನವಿ ಸಲ್ಲಿಸಿದರು. ಬೆಂಗಳೂರಿನ(Bengaluru) ವಿಕಾಸಸೌಧ(Vikas soudha) 2ನೇ ಮಹಡಿಯಲ್ಲಿ ನಡೆದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ(Department of Ports and Inland Waterways) ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿದರು.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯಾದ ಯೋಜನೆಯಾದ ಸಾಗರಮಾಲ ಯೋಜನೆಯಾಗಿದ್ದು, ಕೇಂದ್ರಸರ್ಕಾರ ಈ ಯೋಜನೆಗೆ ಅನುದಾನ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದ್ದರಿಂದ ರಾಜ್ಯ ಸರ್ಕಾರ ಅದಷ್ಟು ಬೇಗ ಅನುದಾನ ಬಿಡುಗಡೆಗೊಳಿಸುವಂತೆ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಳ ಎಸ್. ವೈದ್ಯ ಅವರಿಗೆ ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಒತ್ತಾಯಿಸಿದ್ದು, ಇದಕ್ಕೆ ಸಚಿವರು ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ.  ಹೀಗಾಗಲೇ ಕರಾವಳಿ ಪ್ರದೇಶದಲ್ಲಿ ಕಡಲ ಕೊರತೆ ಉಂಟಾಗಿದ್ದು, ಮೀನುಗಾರಿಕೆ ರಸ್ತೆ, ಶಾಲಾ ಕಟ್ಟಡಗಳು, ಜನವಸತಿ ಮನೆ ಮತ್ತು ಧಾರ್ಮಿಕ ಕಟ್ಟಡ ಇತ್ಯಾದಿ ಸಾರ್ವಜನಿಕ ಆಸ್ತಿಗಳನ್ನು ಸಮುದ್ರ ಕೊರೆತಯಿಂದ ಸಂರಕ್ಷಿಸಲು ಗ್ರಾನೈಟ್ ಕಲ್ಲಿನ ಶಾಶತ್ವ / ತಾತ್ಕಾಲಿಕ ಸಮುದ್ರ ಕೊರೆತ ತಡೆಗೋಡೆ  ರ್ಮಿಸಲಾಗುತ್ತಿದ್ದು, ಇದಕ್ಕೆ ಸರಿಸುಮಾರು 15 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇನ್ನು ಇದೇ ವೇಳೆ ಕರ್ನಾಟಕದ ಕಿರು ಬಂದರುಗಳಿಂದ ಕಬ್ಬಿಣದ ಅದಿರಿನ ರಪ್ತು ನಿಷೇಧವನ್ನು ಹಿಂತೆಗೆದು ಕೊಳ್ಳುವಂತೆ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ  ಡಾ.ಎನ್ ಮಂಜುಳ ಅವರಿಗೆ ಜಯರಾಮ್ ರಾಯ್ ಪುರ ಅವರುಮನವಿ ಸಲ್ಲಿಸಿದರು. ತದಡಿ ಬಂದರು ಯೋಜನೆ ಮತ್ತು ತದಡಿ ಫೋರ್ಟ್ ಲಿಮಿಟೆಡ್ ಕಂಪನಿಯನ್ನು ರಾಜ್ಯ ಸರ್ಕಾರದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ವರ್ಗಾಯಿಸುವಂತೆ ಈ ಹಿಂದೆ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಕೆ.ಎಂ.ಬಿ ಸಿಇಒ ಜಯರಾಮ್ ರಾಯ್ ಪುರ ಅವರು ಮನವಿ ಸಲ್ಲಿಸಲಾಯಿತ್ತು. ಇದಕ್ಕೆ ಕಾರ್ಯದರ್ಶಿ ಮತ್ತು ಸಚಿವರು ಸಕರಾತ್ಮಕವಾಗಿ ಸ್ಪಂಧಿಸಿದರು. ಇದರ ಜೊತೆಗೆ ಕರ್ನಾಟಕ ರಾಜ್ಯಕ್ಕೆ ಅನುಮೋದಿಸಲಾದ  ಸಾಗರಮಾಲಾ ಯೋಜನೆಗಳಿಗೆ ಪೂರ್ವಸಿದ್ಧತಾ ಅಧ್ಯಯನ  ಮತ್ತು ಸಿ.ಆರ್.ಜೆಡ್ ಕ್ಲಿಯರೆನ್ಸ್ ಯೋಜನೆಗೆ ಐದು ಕೋಟಿ ಹಣ  ಬಿಡುಗಡೆಗೊಳಿಸುವಂತೆ ಕೆ.ಎಂ.ಬಿ ಸಿಇಒ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದು, ಇದಕ್ಕೆ ಸಚಿವರು ಅನುಮತಿ ನೀಡಿದರು.

ಸಭೆಯಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ.ಎನ್. ಮಂಜುಳ, ಕರ್ನಾಟಕ ಜಲಸಾರಿಗೆ ಮಂಡಳಿಯ ನಿರ್ದೇಶಕ ಕ್ಯಾ.ಸಿ.ಸ್ವಾಮಿ, ಚೀಫ್ ಇಂಜಿನಿಯರ್ ಪ್ರಮೀತ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಟಿ.ಎಸ್ ಥಾರನಾಥ ರಾಥೋಡ್ ಸೇರಿದಂತೆ ಕಚೇರಿ ಸಿಬ್ಬಂದಿ ಇದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು

ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…

7 hours ago

ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

7 hours ago

ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ

ಭಾರತೀಯ ಸೇನಾಪಡೆಯು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ…

16 hours ago

ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ

ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…

23 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ..

1 day ago