ಸಂಪಾಜೆ ಎಜುಕೇಶನ್ ಸೊಸೈಟಿ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸಮಿತಿ ಅಧ್ಯಕ್ಷರಾದ ರಾಜಾರಾಮ ಕೀಲಾರು ಅವರ ಅಧ್ಯಕ್ಷತೆಯಲ್ಲಿ ಸಂಪಾಜೆ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜರುಗಿತು.ಕಾರ್ಯದರ್ಶಿ ಎಂ ಶಂಕರನಾರಾಯಣ ಭಟ್ ಸ್ವಾಗತಿಸಿದರು. ಸಭೆಯಲ್ಲಿ ವರದಿ ಮತ್ತು ಲೆಕ್ಕಪತ್ರಗಳನ್ನು ಮಂಡಿಸಿ, ಅನುಮೋದಿಸಲಾಯಿತು.
2022-23 ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ರಾಜಾರಾಮ ಕೀಲಾರು, ಕಾರ್ಯದರ್ಶಿಯಾಗಿ ಎಂ ಶಂಕರನಾರಾಯಣ ಭಟ್, ಉಪಾಧ್ಯಕ್ಷರಾಗಿ ಯು ಬಿ ಚಕ್ರಪಾಣಿ, ಖಜಾಂಜಿ ಬಿ ಆರ್ ಪದ್ಮಯ್ಯ, ಕಾರ್ಯಕಾರಿ ನಿರ್ದೇಶಕರುಗಳಾಗಿ ಕೆ ಜಿ ಮುರಳೀಧರ, ಸುಬ್ರಹ್ಮಣ್ಯ ಉಪಾಧ್ಯಾಯ, ಕೆ ಎಸ್ ಜಯರಾಮ, ನಿರ್ದೇಶಕರುಗಳಾಗಿ ಕೆ ಎಸ್ ನಾರಾಯಣ ಭಟ್, ಪಿ ಎನ್ ಗಣಪತಿ ಭಟ್, ಎಸ್ ಕೆ ಮಹಮ್ಮದ್ ಹನೀಫ್, ಕಾರ್ಯಪ್ಪ ಎಚ್ ಎನ್ ಮತ್ತು ಸಾದಿಕ್ ಎಸ್ ಎ , ಪ್ರಾಂಶುಪಾಲ ಸದಸ್ಯರಾಗಿ ಮಾಲತಿ ವೈ ಕೆ, ನೌಕರರ ಪ್ರತಿನಿಧಿ ಸದಸ್ಯರಾಗಿ ಎ ಐತಪ್ಪ ಅವರು ಮರು ಆಯ್ಕೆಯಾದರು.
ನೂತನ ಕಾರ್ಯಕಾರಿ ನಿರ್ದೇಶಕರಾಗಿ ಡಾ. ಯು ಪಿ ಜಯರಾಮ ಮತ್ತು ನಿರ್ದೇಶಕರಾಗಿ ರಾಮಕೃಷ್ಣ ಕೆ ಆಯ್ಕೆಯಾದರು. ಸಭೆಯಲ್ಲಿ ಮುಂದಿನ ಯೋಜನೆ ಬಗ್ಗೆ ಚರ್ಚಿಸಲಾಯಿತು. ರಾಜಾರಾಮ ಕೀಲಾರು ಅಧ್ಯಕ್ಷೀಯ ನುಡಿಗಳನ್ನಾಡಿ ಎಲ್ಲರೂ ಸಂಸ್ಥೆಯ ಉನ್ನತಿಗೆ ಸಹಕರಿಸಬೇಕು ಎಂದರು.
ಕಾಲೇಜು ಪ್ರಾಂಶುಪಾಲೆ ವೈ ಕೆ ಮಾಲತಿ ವಂದಿಸಿದರು.
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…