Advertisement
MIRROR FOCUS

ಜನಾಕರ್ಷಿಸುತ್ತಿರುವ ಮಂಗಳೂರು ಸರಸ್ ಮೇಳ | ನಾಳೆ ಕೊನೆಯ ಅವಕಾಶ – ಮಹಿಳೆಯರ ಕೈಚಳಕಕ್ಕೆ ಭಾರೀ ಮೆಚ್ಚುಗೆ

Share

ಮಂಗಳೂರು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಜ್ಯ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರಪಾಲಿಕೆ ಆಶ್ರಯದಲ್ಲಿ ಆಯೋಜಿಸಿರುವ ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ – ‘ಸರಸ್ ಮೇಳ’ ನೋಡುಗರ ಗಮನ ಸೆಳೆಯುತ್ತಿದೆ.

ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳ ಸ್ವಸಹಾಯ ಗುಂಪಿನ ಮಹಿಳೆಯರ ಕೌಶಲ್ಯಪೂರ್ಣ ಕೈಚಳಕವನ್ನು ಕಾಣಬಹುದು. ಪ್ರತಿಯೊಂದು ಮಳಿಗೆಯಲ್ಲೂ ವಿಶಿಷ್ಟವಾದ ವಸ್ತುಗಳೊಂದಿಗೆ ಕರಕುಶಲತೆಯ ನೈಪುಣ್ಯ ಮೆರೆದಿದೆ.

ಆಕರ್ಷಕ ಬಣ್ಣಗಳಿಂದ ಮಿಂಚುವ ಚನ್ನಪಟ್ಟಣದ ಗೊಂಬೆಗಳು, ಸೌಂದರ್ಯ ವಸ್ತುಗಳು, ಅಸ್ಸಾಂ, ತೆಲಂಗಾಣ, ಆಂಧ್ರಪ್ರದೇಶದ ಸೀರೆಗಳು, ಕೈಮಗ್ಗ ಸೀರೆಗಳು, ಸಿರಿಧಾನ್ಯ ಉತ್ಪನ್ನಗಳು, ಯುವತಿಯರ ಗಮನ ಸೆಳೆಯುವ ಕಿವಿಯೋಲೆಗಳು, ಮಣಿಸರಗಳು, ಖಾದಿ ಉತ್ಪನ್ನಗಳು, ಕೃತಕ ಆಭರಣಗಳು, ಮಡಿಕೆಗಳು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ.

ಇದೇ ವೇಳೆ ಖಾರ ತಿಂಡಿತಿನಿಸುಗಳು, ಕೇರಳದ ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ, ಉತ್ತರ ಕರ್ನಾಟಕದ ಚಟ್ನಿ ಪುಡಿ, ಖಾರದ ಪುಡಿ, ಸಾಂಬಾರು ಮಸಾಲೆ ಪದಾರ್ಥಗಳು, ಗ್ರಾಮೀಣ ಮಹಿಳೆಯರ ಕೈಯಿಂದ ತಯಾರಿಸಲ್ಪಟ್ಟ ವಿಭಿನ್ನ ವಿನ್ಯಾಸದ ಬ್ಯಾಗ್‌ಗಳು, ಮನೆಯ ಅಲಂಕಾರ ಹೆಚ್ಚಿಸುವ ಬಣ್ಣದ ಹೂದಾನಿಗಳು ಸೇರಿದಂತೆ ವಿವಿಧ ರಾಜ್ಯಗಳ ವಸ್ತುಗಳು ಕೈಗೆಟುಕುವ ದರದಲ್ಲಿ ಲಭ್ಯವಿವೆ.

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕುಟುಂಬದ ಆದಾಯ ಹೆಚ್ಚಿಸಲು, ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಹಾಗೂ ಉತ್ತಮ ಲಾಭ ಗಳಿಸಲು ಇಂತಹ ಮಾರಾಟ ಮೇಳಗಳು ಸಹಕಾರಿಯಾಗಿವೆ. ಮೇಳದಲ್ಲಿ ಹೆಚ್ಚಿನ ಸಂಖ್ಯೆಯ ಮಳಿಗೆಗಳಿದ್ದು, ಫುಡ್ ಕೋರ್ಟ್‌ನಲ್ಲಿ 30ಕ್ಕೂ ಅಧಿಕ ಮಳಿಗೆಗಳಿವೆ. ಕರಾವಳಿ ತಿನಿಸುಗಳು, ನೀರುದೋಸೆ, ಚಿಕನ್ ಸುಕ್ಕ, ಮೀನು ಖಾದ್ಯಗಳು, ಚುರುಮುರಿ, ರಾಗಿಮುದ್ದೆ, ಚಿಕನ್ ಬಿರಿಯಾನಿ, ಜ್ಯೂಸ್ ಸೇರಿದಂತೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಸರಸ್ ಮೇಳ ಫೆಬ್ರವರಿ 28 ರವರೆಗೆ ನಡೆಯಲಿದ್ದು, ನಾಳೆ ಕೊನೆಯ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡಿ ಮಹಿಳೆಯರ ಉತ್ಪನ್ನಗಳಿಗೆ ಬೆಂಬಲ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Saras Mela 2026 at Karavali Utsav Maidan in Mangalore is drawing large crowds with handicrafts, Channapatna toys, sarees, millet products, and over 30 food stalls. The exhibition-cum-sale by Self Help Group women will conclude on February 28, with organizers urging the public to visit and support rural women entrepreneurs.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಗೇರುಹಣ್ಣು ಮೌಲ್ಯವರ್ಧನೆಗೆ ಉಚಿತ ತರಬೇತಿ : ಪುತ್ತೂರಿನ DCR ವತಿಯಿಂದ ಅವಕಾಶ

ಪುತ್ತೂರಿನ DCR ಸಂಸ್ಥೆ ಗೇರುಹಣ್ಣು ಮೌಲ್ಯವರ್ಧನೆ ಕುರಿತು ಉಚಿತ CA-VA ತರಬೇತಿ ನೀಡುತ್ತಿದೆ.…

7 hours ago

ಹೆಚ್ಚುತ್ತಿರುವ ಉಷ್ಣತೆ ಕೃಷಿಗೆ ದೊಡ್ಡ ಸಂಕಷ್ಟ | ಉತ್ಪಾದನೆ ಕುಸಿತದ ಭೀತಿ

ಹವಾಮಾನ ಬದಲಾವಣೆಯಿಂದ ಉಷ್ಣತೆ ಏರಿಕೆ ಕೃಷಿ ಉತ್ಪಾದನೆಗೆ ಗಂಭೀರ ಸವಾಲಾಗಿ ಪರಿಣಮಿಸಿದೆ. ರಬಿ…

8 hours ago

ಏಷ್ಯಾ ರಬ್ಬರ್ ಬೆಲೆ ಕುಸಿತ – ರಬ್ಬರ್‌ ಇಳುವರಿ ಹಾಗೂ ಸರಬರಾಜು ಭೀತಿ ಕಡಿಮೆಯಾದ ಕಾರಣ ಮಾರುಕಟ್ಟೆ ಕುಸಿತ..!

ಪೀಕ್‌ ಹಾರ್ವೆಸ್ಟ್‌ ನಿರೀಕ್ಷೆಯಿಂದ ಏಷ್ಯಾದಲ್ಲಿ ರಬ್ಬರ್ ಬೆಲೆ ಇಳಿಕೆ. ವಾಹನ ಉದ್ಯಮ ಬೇಡಿಕೆ…

8 hours ago

ತೈವಾನ್‌ನಲ್ಲಿ “ಸಿಹಿ ಅಡಿಕೆ” – “ಅಡಿಕೆ ಕ್ಯಾಂಡಿ” ಈಗ ಚರ್ಚೆ : ಮಕ್ಕಳಿಗೆ ನಿಷೇಧ ಬೇಡಿಕೆ ಹೆಚ್ಚಳ

ತೈವಾನ್‌ನಲ್ಲಿ ಸಿಹಿ ಮತ್ತು ಫ್ಲೇವರ್‌ ಅಡಿಕೆ ಉತ್ಪನ್ನಗಳ ಮೇಲೆ ಆರೋಗ್ಯ ವಿವಾದ ತೀವ್ರವಾಗಿದೆ.…

8 hours ago

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ | ಮೌನದ ಹಿಂದೆ ಅಡಗಿರುವ ದರ ಚಲನೆಯ ಸಂಕೇತಗಳು

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಈಗ ಮೇಲ್ನೋಟಕ್ಕೆ ಸ್ಥಿರವಾಗಿದ್ದರೂ, ಆವಕ ಕುಸಿತ ಮತ್ತು…

8 hours ago

ಅಕಾಲಿಕ ಮಳೆ ಹಾನಿ ಪರಿಶೀಲನೆ : ರೈತರಿಗೆ ತಕ್ಷಣ ಪರಿಹಾರಕ್ಕೆ ಕೇಂದ್ರ ಸೂಚನೆ

ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಬೆಳೆಗಳ ಕುರಿತು ಕೇಂದ್ರ ಕೃಷಿ…

9 hours ago