ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಎಮ್.ಕೃಷ್ಣಕುಮಾರ್ ಅವರ ಅಧಿಕಾರ ಅವಧಿ ಕೊನೆಗೊಳ್ಳುವುದರಿಂದ,ಮೇ 1 ರಿಂದ ಅನ್ವಯವಾಗುವಂತೆ ಡಾ.ಬಿ.ವಿ.ಸತ್ಯನಾರಾಯಣ ಅವರನ್ನು ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.
ಕಳೆದ 50 ವರ್ಷಗಳಿಂದ ರೈತರ ಹಿತರಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಪ್ಕೊದ ಆಡಳಿತ ಮಂಡಳಿಯು ಎ.23 ರಂದು ತನ್ನ ಮಂಡಳಿ ಸಭೆಯಲ್ಲಿ ಸಂಸ್ಥೆಯನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಡಾ.ಬಿ.ವಿ.ಸತ್ಯನಾರಾಯಣ ಅವರಿಗೆ ವಹಿಸುವ ನಿರ್ಣಯವನ್ನು ಅವಿರೋಧವಾಗಿ ತೆಗೆದುಕೊಂಡಿದೆ.
ಡಾ.ಸತ್ಯನಾರಾಯಣ ಅವರು ಈ ಮೊದಲು ಕೆ.ಎಮ್.ಎಫ್ ನ ಘಟಕವಾದ ಬೆಂಗಳೂರಿನ ಮದರ್ ಡೈರಿಯ ನಿರ್ದೇಶಕರಾಗಿ, ಕೆ.ಎಮ್.ಎಫ್ ನ ಜಂಟಿ ನಿರ್ದೇಶಕರಾಗಿ,ದ.ಕ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಐಡಿಯಲ್ ಐಸ್ ಕ್ರೀಮ್ ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾಗಿ ಉದ್ಯಮ ಕ್ಷೇತ್ರದಲ್ಲಿ ಅಗಾಧ ಜ್ಞಾನವನ್ನು ಹೊಂದಿರುತ್ತಾರೆ.ಅವರನ್ನು ಜನವರಿ 2024 ರಿಂದ ಕ್ಯಾಂಪ್ಕೊದ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಿಕೊಂಡಿತ್ತು.
ಸಂಸ್ಥೆಯ ಅಧ್ಯಕ್ಷರಾದ ಎ.ಕಿಶೋರ್ ಕುಮಾರ್ ಕೊಡ್ಗಿ ಮತ್ತು ಆಡಳಿತ ಮಂಡಳಿ,ನೂತನವಾಗಿ ಆಯ್ಕೆಯಾದ ವ್ಯವಸ್ಥಾಪಕ ನಿರ್ದೇಶಕರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದೆ. ಕ್ಯಾಂಪ್ಕೊಗೆ ಸಂಬಂಧಿಸಿದ ಎಲ್ಲಾ ವಿಷಯಗಳಿಗೆ ಡಾ. ಸತ್ಯನಾರಾಯಣ ಅವರನ್ನು ದೂರವಾಣಿ ಸಂಖ್ಯೆ 0824-2425866/2888220/2888218 ಹಾಗೂ ಇಮೇಲ್ ಐಡಿ md@campco.org ಮೂಲಕ ಸಂಪರ್ಕಿಸಲು ತನ್ನ ಸದಸ್ಯರನ್ನು ಕೊಡ್ಗಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…