ಬೆಳ್ತಂಗಡಿಯ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ನ್ಯಾಯಾಂಗದ ಸುಪರ್ಧಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಸಭೆ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ಭಾನುವಾರ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಆಶಿರ್ವಚನ ನೀಡಿದ ಆದಿಚುಂಚನಗಿರಿ ಮಠದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಸೌಜನ್ಯ ಪ್ರಕರಣದಲ್ಲಿ ಎಲ್ಲಾ ತನಿಖೆಗಳು ವಿಫಲವಾದ್ದು ಈ ದೇಶದ ದುರಂತ ಎಂದರು. ಈಚೆಗೆ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಅವರ ಕುಟುಂಬದವರು ಮಠಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ನೀಡಿದ್ದರು. ಸತ್ಯ, ನೀತಿ, ನ್ಯಾಯ, ಧರ್ಮಕ್ಕೆ ಎಲ್ಲರೂ ಒಂದಾಗಿರಬೇಕಾಗಿದೆ. ಸಮಾಜದ ಯಾವುದೇ ಜನರಿಗೂ ಅನ್ಯಾಯ ಆಗಬಾರದು ಎಂಬುದು ನಮ್ಮ ನಿಲುವುವಾಗಿದೆ. ಸತ್ಯ, ನ್ಯಾಯಯುತ ಹೋರಾಟಕ್ಕೆ ಯಾವತ್ತೂ ಆದಿಚುಂಚನಗಿರಿ ಮಠ ಜೊತೆಗಿರುತ್ತದೆ.
ಈ ಪ್ರಕರಣದಲ್ಲಿ ಸಂತೋಷ ರಾವ್ ಅಪರಾಧಿ ಅಲ್ಲ ಎಂದ ಮೇಲೆ ಇನ್ನೊಮ್ಮೆ ಅಪರಾಧಿ ಇರಬೇಕಲ್ಲ, ಅವನು ಯಾರು ? ಅದು ಬೇಕಾಗಿದೆ. ಸಂತೋಷ ರಾವ್ ಅವರ ಬದುಕು ಮತ್ತೆ ಕಟ್ಟಲು ಸಾಧ್ಯವಿಲ್ಲ, ಅವರಿಗೂ ನ್ಯಾಯ ಬೇಕು, ಕುಸುಮಾವತಿ ಹಾಗೂ ಅವರ ಕುಟುಂಬಕ್ಕೂ ರಕ್ಷಣೆ ಬೇಕಿದೆ. ಇದಕ್ಕಾಗಿ ಈ ಪ್ರಕರಣದಲ್ಲಿ ನ್ಯಾಯಸಿಗಲು, ಅಂದು ತನಿಖೆ ನಡೆಸಿದ ಪೊಲೀಸ್ ಅಧಿಕಾರಿ, ವೈದ್ಯರನ್ನು ಮೊದಲು ತನಿಖೆ ಮಾಡಿಸಬೇಕು, ಮಂಪರು ಪರೀಕ್ಷೆ ಮಾಡದೇ ಇದ್ದರೆ ಸತ್ಯ ಹೊರಬಾರದು ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಸತ್ಯ, ನ್ಯಾಯ ಧರ್ಮ ನಿಷ್ಟೆಯಲ್ಲಿ ಯಾರು ಹೋಗುತ್ತಾರೋ ಅವರಿಗೆ ಯಾವತ್ತೂ ಜಯ, ಅವರ ಹಿಂದೆ ಯಾವತ್ತೂ ಮಠ ಇರುತ್ತದೆ. ಮಠ ಒಂದು ಸಮುದಾಯವಾಗಿದ್ದರೂ ಎಲ್ಲರನ್ನೂ ಒಪ್ಪಿಕೊಂಡ ಮಠ, ಯಾರಿಗೇ ಅನ್ಯಾಯ ಆದರೂ ಅವರ ಹೊತೆಗೆ ಮಠ ಇರುತ್ತದೆ ಎಂದರು.
11 ವರ್ಷಗಳಿಂದಲೂ ಸತ್ಯ ಹುಡುಕುತ್ತೇವೆ ಎಂದು ನಿಂತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ಜೊತೆ ಸಮಾಜ ಹಾಗೂ ಮಠ ಇದೆ. ಸೌಜನ್ಯ ಮಹಾನ್ ಶಕ್ತಿ, ಅದು ಸ್ತ್ರೀಶಕ್ತಿ, ಅದು ಕಾಳಿ ಸ್ವರೂಪ ಪಡೆದು ಇಡೀ ರಾಜಾದ್ಯಂತ ಆವಿರ್ಭಾವ ಮಾಡುತ್ತದೆ, ಅದಕ್ಕೆ ಮೊದಲು ಸರ್ಕಾರ ಗಮನಿಸಿ ನ್ಯಾಯ ಸಿಗುವಂತೆ ಮಾಡಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ಸೌಜನ್ಯ ಪರ ಹೋರಾಟದ ಮುಂಚೂಣಿ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಅಧ್ಯಕ್ಷರಾಗಿರುವ ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸಭೆ ಆಯೋಜನೆಗೊಂಡಿತ್ತು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹರಿಯಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…
ಚಾಮರಾಜನಗರ ಜಿಲ್ಲೆಯ ಸಿದ್ದಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ರಾಜವಂಶಸ್ಥರಿಗೆ ಸೇರಿದ್ದು, ಅದನ್ನು…
15.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…