ಸರ್ಕಾರಗಳು ಬದಲಾಗುತ್ತಿದ್ದಂತೆ ವಸ್ತುಗಳ ಬೆಲೆಗಳಲ್ಲೂ ಬದಲಾವಣೆ ಆಗುತ್ತದೆ. ಕೆಲವು ವಸ್ತುಗಳ ಬೆಲೆ ಏರಿಕೆ ಆದ್ರೆ ಇನ್ನು ಕೆಲವುದಕ್ಕೆ ಇಳಿಕೆಯಾಗುತ್ತದೆ. ಇದೀಗ ಹಾಲಿನ ಬೆಲೆ ಏರಿಸಿ, ಅತ್ತ ಅದರ ಪರಿಣಾಮವನ್ನು ಶಾಲಾ ಮಕ್ಕಳು ಅನುಭವಿಸುವಂತಾಗಿದೆ.
ಹಾಲಿನ ದರ ಲೀಟರ್ ಗೆ 3 ರೂಪಾಯಿ ಹೆಚ್ಚಾಗಿದೆ. ಈ ಹಿನ್ನೆಲೆ ಹಾಲಿನ ಪುಡಿ ದರವು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ‘ಕ್ಷೀರ ಭಾಗ್ಯ’ ಯೋಜನೆಗೂ ತಟ್ಟಲಿದೆ ದರ ಏರಿಕೆ ಬಿಸಿ.ಜನರು ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ. ಈಗಾಗಲೇ ಹಾಲಿನ ದರ ಲೀಟರ್ ಗೆ 3 ರೂಪಾಯಿ ಹೆಚ್ಚಾಗಿದೆ. ಬೆಳಗ್ಗೆ ಎದ್ದು ಕಾಫಿ ಕುಡಿಯುವುದಕ್ಕೂ ಯೋಚನೆ ಮಾಡುವಂತಾಗಿದೆ. ಹಾಲಿನ ದರ ಲೀಟರ್ ಗೆ 3 ರೂಪಾಯಿ ಹೆಚ್ಚಿಸಿದ ಹಿನ್ನೆಲೆ, ಹಾಲಿನ ಪುಡಿ ದರ ಕೂಡ ಹೆಚ್ಚಳವಾಗುವ ಸಾಧ್ಯತೆ. ಇದರಿಂದ ‘ಕ್ಷೀರ ಭಾಗ್ಯ’ ಯೋಜನೆಗೂ ತಟ್ಟಲಿದೆ ದರ ಏರಿಕೆ ಬಿಸಿ. ಕ್ಷೀರ ಭಾಗ್ಯ ಯೋಜನೆಗೆ ಅಂದಾಜು ಹೆಚ್ಚುವರಿಯಾಗಿ 50 ಕೋಟಿ ರೂಪಾಯಿ ಅವಶ್ಯಕತೆ ಇದೆ. #KMFನಿಂದ ಹಾಲಿನ ಪುಡಿಯ ದರದ ಹೆಚ್ಚಳಕ್ಕೂ ಸರ್ಕಾರ ಜೊತೆಗೆ ಮಾತುಕತೆ ನಡೆಸಲಾಗಿದೆ.ಸದ್ಯ ಒಂದು ಕೆ.ಜಿ. ಹಾಲಿನ ಪುಡಿಗೆ 50 ರೂ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಇಟ್ಟಿದ್ದಾರೆ. ಆದ್ರೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ. ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಸಿದ್ಧತೆ ನಡೆಸಿದೆ.
ಸದ್ಯ ಕೆ.ಜಿ.ಗೆ 300 ರೂ. (GST ಹೊರತುಪಡಿಸಿ) ದರ ಇದೆ. ಇದೇ ಮಾರ್ಚ್ನಲ್ಲಿ 25ರೂ. ಹೆಚ್ಚಳ ಮಾಡಿದ್ದ KMF ಇದೀಗ ಮತ್ತೆ ಹೆಚ್ಚಳ ಮಾಡಿದರೆ, ಮೂರು ತಿಂಗಳ ಅವಧಿಯಲ್ಲಿ ಎರಡು ಬಾರಿ ಹೆಚ್ಚಿಸಿದಂತಾಗುತ್ತದೆ. ಶಿಕ್ಷಣ ಇಲಾಖೆಯು ಮಧ್ಯಾಹ್ನ ಬಿಸಿಯೂಟ ಯೋಜನೆ ಅಡಿ ಕ್ಷೀರಭಾಗ್ಯ ಯೋಜನೆ ಜಾರಿಯಲ್ಲಿದೆ. 1-10ನೇ ಕ್ಲಾಸ್ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.25 ರೂ. ಹಾಲಿನ ಪುಡಿ ದರ ಹೆಚ್ಚಳ ಮಾಡಿದಾಗ 700 ಕೋಟಿ ರೂಪಾಯಿಗೆ ಬಜೆಟ್ ಹೆಚ್ಚಾಗುತ್ತೆ. ಸದ್ಯ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು ನೀಡಲಾಗುತ್ತಿದೆ. 18 ಗ್ರಾಂ ಪುಡಿಯ ಜತೆಗೆ 10 ಗ್ರಾಂ ಸಕ್ಕರೆ, 150 ಎಂ.ಎಲ್. ಹಾಲಿನ ಪ್ರಮಾಣ ನೀಡಲಾಗುತ್ತಿದೆ. ಒಂದು ವೇಳೆ ಹಾಲಿನ ಪುಡಿಯ ದರ ಏರಿಕೆ ಆದ್ರೆ ಮತ್ತೆ ಮಕ್ಕಳ ಕ್ಷೀರ ಭಾಗ್ಯ ಯೋಜನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
Source : Online
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…