ಬಾಲ್ಯದಲ್ಲಿ ಶಾಲೆ ಶುರು ಆಗುವ ವಾರದ ಮೊದಲೇ ಅಮ್ಮನ ಬಳಿ ನನ್ನ ಪ್ರಶ್ನೆ ತಯಾರಾಗಿರುತ್ತಿತ್ತು.
ಜೂನ್ 1 ಕ್ಕೆ ಯಾಕೆ ಶಾಲೆ ? ಜುಲಾಯಿಯಲ್ಲಿ ಅಥವಾ ಆಗಸ್ಟ್ ಲ್ಲಿ ಶುರು ಮಾಡಿದರೆ ಸಾಲದಾ? ಒಂದು ವರುಷ ರಜೆ ಒಂದು ವರ್ಷ ಶಾಲೆ ಮಾಡ ಬಹುದಲ್ವಾ? ಅಮ್ಮ ನಿಮ್ಮ ಭವಿಷ್ಯದ ಪ್ರಶ್ನೆ. ಹಾಗೆಲ್ಲ ರಜೆ ಕೊಡುವ ಕ್ರಮ ಇಲ್ಲ . ಸಮಯ ವ್ಯರ್ಥ ಮಾಡ ಬಾರದು. ಹೋಗಿ ಮಗ್ಗಿ ಕಲಿ, ಕಾಗುಣಿತ ಮರೆತು ಹೋಗಿದಾ ನೋಡು, ಮತ್ತೆ ಹಿಂದಿ………
ಅಮ್ಮನ ಪಟ್ಟಿ ದೊಡ್ಡದಾಗುತ್ತಿದ್ದಂತೆ ನಾನು ಬೀಜದ ಗುಡ್ಡೆಗೆ ಓಡಿಯಾಯಿತು. ಇತ್ತೀಚೆಗೆ ತಮ್ಮ ಇದೇ ವಿಷಯ ಪ್ರಸ್ಥಾಪಿಸಿ . ಬಾಲ್ಯದಲ್ಲಿ ನಾವು ಹೇಳುತ್ತಿದ್ದ ಹಾಗೇ ಈ ಬಾರಿ ಆಗಿಬಿಟ್ಟಿತಲ್ಲಾ! ಮಕ್ಕಳಿಗೆ ಪಾಠ ನಾಮಕಾವಸ್ಥೆ , ರಜೆಯೇ ಬಲ. ಅಮ್ಮನೂ ಇದೇ ಮಾತು. ನೀವು ಅವುತ್ತು ಆಸೆ ಪಟ್ಟದ್ದು ಈಗ ನಿಮ್ಮ ಮಕ್ಕಳ ಕಾಲಕ್ಕೆ ನಿಜವಾಯಿತಲ್ಲಾ. ಯಾವತ್ತೂ ಒಳ್ಳೆಯದನ್ನೇ ಆಸೆ ಪಡ ಬೇಕು , ಕೆಟ್ಟದ್ದನ್ನಲ್ಲ! ಮತ್ತೀಗಲೂ ಅಮ್ಮನ ಕೈ ಯಲ್ಲಿ ನಮಗೆ ಬುದ್ಧಿವಾದ ! ನಾನು ಈಗಲೂ ಜಾಗ ಖಾಲಿ ಮಾಡಿದೆ.
ಬದುಕು ಒಂದು ಟ್ರಾಕ್ ಲ್ಲಿ ಸಾಗುತ್ತಿತ್ತು. ಎಲ್ಲರಿಗೂ ಒಂದು ಗುರಿಯತ್ತ ಸಾಗುವ ಉತ್ಸಾಹ. ಸಣ್ಣಕೆ ಕೊರೊನಾ ವೈರಸ್ ನ ಭಯ ಆರಂಭವಾಯಿತು. ಅಲ್ಲಿ ದೂರದ ಚೈನಾದಲ್ಲಿ ತಾನೇ , ನಮಗೇನೂ ಆಗದು ಎಂಬ ಮೊಂಡು ಧೈರ್ಯ. ಆದರೆ ಹಾಗಾಗಲಿಲ್ಲ. ನಾನಿಲ್ಲಿಗೂ ಬಂದೇ ಎಂದು ಹಾಜರಾಗಿಯೇ ಬಿಟ್ಟಿತು. ಕಳೆದ ವರ್ಷವಾದರೆ ಮಕ್ಕಳ ಪಾಠಗಳೆಲ್ಲ ಮುಗಿದಿತ್ತು. ಪರೀಕ್ಷೆಗಳು ಮಾತ್ರ ಉಳಿದಿದ್ದವು. ಏನೋ ಒಂದು ಮಾಡಿ ಮುಂದಿನ ಕ್ಲಾಸ್ ಗೆ ಮಕ್ಕಳಿಗೆ ಪ್ರವೇಶ ಸಿಕ್ಕಿತು.
ಮಕ್ಕಳ ಈ ಕೋವಿಡ್ ಸಮಯದ ಶೈಕ್ಷಣಿಕ ವರ್ಷವಂತೂ ಸಂಕಷ್ಟದ್ದು, ತೀರಾ ಕಷ್ಟದ ಸಮಯ. ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಣ ಸಂಸ್ಥೆಗಳು, ಸರಕಾರಕ್ಕೆ ಎಲ್ಲವೂ ಸಂಧಿಗ್ಧದಲ್ಲಿ. ಶಾಲೆ ಇಲ್ಲದಿದ್ದರೆ ಹ್ಯಾಗಾದೀತು ಎಂಬುದಕ್ಕೆ ಉತ್ತರ ಈ ಕೋವಿಡ್ ಸಂಕ್ರಮಣ ಕಾಲ.
ನಮ್ಮ ಈ ಪರಿಸರದಲ್ಲಿ ಕಳೆದ ಬಾರಿ ತೀವ್ರ ಸ್ವರೂಪದ ಕೊರೊನಾ ಇರಲಿಲ್ಲ. ಯಾವುದೇ ಸಾರ್ವಜನಿಕ , ಖಾಸಗಿ ಕಾರ್ಯಕ್ರಮಗಳಿಗೆ ನಿರ್ಬಂಧವಿದ್ದ ಕಾರಣ ಜನರು ಅಗತ್ಯ. ಕೆಲಸಗಳಿಗೆ ಮಾತ್ರ ಮನೆಯಿಂದ ಹೊರ ಬರುತ್ತಿದ್ದರು. ಒಂದು ಹಂತಕ್ಕೆ ನಿಯಂತ್ರಣದಲ್ಲಿತ್ತು. ಆದರೆ ಲಾಕ್ಡೌನ್ ಸಡಿಲವಾಯಿತು ನೋಡಿ ಇದ್ದಬದ್ದ ಕಾರ್ಯಕ್ರಮ ಗಳೆಲ್ಲ ನಡೆದವು. ಊರಿಂದೂರಿಗೆ ಜನರು ತಿರುಗ ತೊಡಗಿದರು. ಅಲ್ಲಿ ಹತೋಟಿ ಮೀರಿ ಮದುವೆ ಸಮಾರಂಭಗಳು ,ಧಾರ್ಮಿಕ ಕಾರ್ಯಗಳು,ದೈವ , ಭೂತ ನೇಮ ಕಾರ್ಯಕ್ರಮಗಳು ಜರುಗಿದುವು. ಎಲ್ಲೆಲ್ಲಿಂದಲೋ ಬಂದು ಜನ ಸೇರ ತೊಡಗಿದ, ಈ ಸ್ಥಳಗಳೇ ಕೊರೊನಾ ಹಾಟ್ ಸ್ಪಾಟ್ ಗಳಾದುವು ಎಂದರೇ ತಪ್ಪಾಗಲಾರದು.
ಸದ್ಯ ಸಿಕ್ಕಾಬಟ್ಟೆ ಕೇಸ್ ಗಳು ಪತ್ತೆಯಾಗುತ್ತಿವೆ. ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವ ಈ ಸಂಧರ್ಭದಲ್ಲಿ ಶಾಲೆ ಆರಂಭವಾಗುವುದು ಅಸಾಧ್ಯ.ದ ಮಾತು,. ಪಾಠ ಆರಂಭ ಆಗಲಿ . ಆದರೆ ಕಳೆದ ಬಾರಿಯ ಶೈಕ್ಷಣಿಕ ವರ್ಷ ಮೊಬೈಲ್ ಮೂಲಕವೇ ನಡೆದಿತ್ತು. ಈ ಬಾರಿಯೂ ಅದೇ ರೀತಿಯಲ್ಲಿ ಶಾಲೆ ಆರಂಭವಾಗುತ್ತದೆ ಎಂದು ಶಾಲೆಯಿಂದ ಫೋನ್ ಬಂದಾಗ ನಿಟ್ಟುಸಿರು ಬಿಡುವ ಸರದಿ ಹೆತ್ತವರದ್ದು. ಏನೂ ಕೆಲಸವಿಲ್ಲದೇ ಇರುವುದರಿಂದ ಸಣ್ಣ ಮಟ್ಟಿನ ಶೈಕ್ಷಣಿಕ ಪ್ರಯತ್ತವಾದರೂ ಅದು ಉತ್ತಮವೇ.
ಸದ್ಯ ದೇವರಲ್ಲಿ ಎಲ್ಲರ ಬೇಡಿಕೆಯೂ ಒಂದೇ ಮತ್ತೆ ಮೊದಲಿನಂತಾಗಲಿ. ಸಮವಸ್ತ್ರ ಧರಿಸಿದ ಮಕ್ಕಳು ಎಂದಿನಂತೆ ಶಾಲೆಗೆ ತೆರಳುವ ದಿನ ಬೇಗನೆ ಬರಲಿ ಎಂಬುದು ನಮ್ಮೆಲ್ಲರ ಹಾರೈಕೆ.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…