ಈ ಯುವಕರ ತಂಡ ಸೇವೆ ಎಂಬ ಯಜ್ಞದಲ್ಲಿ ತೊಡಗಿಸಿಕೊಂಡಿದೆ. ಇದು ದೇವರ ಸೇವೆಯ ಜೊತೆಗೇ ಜನ ಸೇವೆ, ಅದೂ ಪುಟಾಣಿಗಳ ಆರೋಗ್ಯದ ಸೇವೆ.
ಬಂಟ್ವಾಳ ತಾಲೂಕಿನ ಅಕ್ಕಪಕ್ಕದ ಗ್ರಾಮಗಳಾದ ಕೆದಿಲ, ಕಡೇಶಿವಾಲಯ, ಪೆರ್ನೆಯ ಯುವಕರ ತಂಡ ಈಗ ಸೇವೆಗೆ ಇಳಿದಿರುವುದು. ಈ ಗ್ರಾಮದ ಸಂಘದ ಸ್ವಯಂಸೇವಕರು , ಹಿಂದು ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತರು ಜೊತೆಗೂಡಿ ಗ್ರಾಮದಲ್ಲಿ ಸೇವಾ ಕಾರ್ಯಕ್ಕಾಗಿ ಆಯಾ ಗ್ರಾಮದಲ್ಲಿ ಕೆದಿಲದಲ್ಲಿ ಯುವಕೇಸರಿ ಗಡಿಯಾರ, ಕಡೇಶಿವಾಲಯದಲ್ಲಿ ಯುವಶಕ್ತಿ ಕಡೇಶಿವಾಲಯ, ಪೆರ್ನೆಯಲ್ಲಿ ಯುವಸ್ಪಂದನ ಪೆರ್ನೆ ಎನ್ನುವ ಹೆಸರಿನಲ್ಲಿ ಸಂಘಟನೆ ಆರಂಬಿಸಿ ಎಲೆಮರೆಯ ಕಾಯಿಯಂತೆ ಅನೇಕ ಸೇವಾ ಕಾರ್ಯನಡೆಸುತ್ತಾ ಬಂದಿದ್ದಾರೆ, ಸದ್ಯ 4 ಮಕ್ಕಳ ಅನಾರೋಗ್ಯ ದಿಂದಿರುವುದಾಗಿ, ಅವರಿಗೆ ಚಿಕಿತ್ಸಾ ವೆಚ್ಚ ಬರಿಸಲು ಸಾಧ್ಯವಾಗದೆ ಕಂಗೆಟ್ಟಿರುವುದನ್ನು ಮನಗಂಡು ಈಗ ಎಲ್ಲಾ ಸಂಘಟನೆ ಜೊತೆಗೂಡಿ ಸೇವಾ ಯಜ್ಞದ ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ಅತೀ ದೊಡ್ಡ ಹನುಮಂತನ ವೇಷ (ಅಂದಾಜು 40 ಕೆಜಿ ತೂಕದ) ಹಾಕಿ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಸಹಾಯಕ್ಕಾಗಿ ಇಳಿಯುತ್ತಿದ್ದಾರೆ.
ನಾಲ್ಕು ಜನ ಅನಾರೋಗ್ಯ ಪುಟಾಣಿಗಳ ವೈದ್ಯಕೀಯ ವೆಚ್ಚಕ್ಕಾಗಿ ಸೇವಾ ಯಜ್ಞ ಎನ್ನುವ ಹೆಸರಿನಲ್ಲಿ ಹತ್ತೂರೊಡೆಯ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಹನುಮಂತನ ವೇಷದ ಜೊತೆಗೆ ಸಹಾಯಕ್ಕಾಗಿ ಕೈ ಚಾಚುತ್ತಿದ್ದಾರೆ.ಆ ಪುಟಾಣಿಗಳ ಪ್ರಾಣ ಉಳಿಸಲು ಕೈ ಜೋಡಿಸಲು ಮನವಿ ಮಾಡಿದ್ದಾರೆ ಸಂಘಟನಗಳು. ಬಿಳಿ ಅಂಗಿ, ಕಪ್ಪು ಪೇಂಟ್, ಕೇಸರಿ ಶಾಲು ತೊಟ್ಟ ಮೂರು ಸಂಘಟನೆಯ ಕಾರ್ಯಕರ್ತರು ಡಬ್ಬ ಹಿಡಿದು ಬೃಹತ್ ಹನುಮಂತನ ವೇಷದ ಜೊತೆಗೆ ಇರುತ್ತಾರೆ ಈ ಬಡ ಪ್ರಾಣ ಉಳಿಸಲು ಈ ರೀತಿ ಪ್ರಯತ್ನಿಸುತ್ತಿದ್ದಾರೆ. ಕಣ್ಣಿಗೆ ಕಾಣುವ ದೇವರಾದ ಈ ಪುಟಾಣಿಗಳ ಜೀವ ಉಳಿಸಲು ಪಣತೊಟ್ಟಿದ್ದಾರೆ. ಕೈಲಾದ ಸಹಾಯ ಮಾಡಲು ಮನವಿ ಮಾಡಿದ್ದಾರೆ.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…