ಸೇವಾ ಯಜ್ಞದಲ್ಲಿ ಯುವಕರ ತಂಡ | ಪುತ್ತೂರು ಜಾತ್ರೆಯ ಗದ್ದೆಯಲ್ಲಿ ಪುಟಾಣಿಗಳ ವೈದ್ಯಕೀಯ ವೆಚ್ಚಕ್ಕಾಗಿ ಸಹಾಯ ಯಾಚನೆ |

April 16, 2021
12:27 PM

ಈ ಯುವಕರ ತಂಡ ಸೇವೆ ಎಂಬ ಯಜ್ಞದಲ್ಲಿ  ತೊಡಗಿಸಿಕೊಂಡಿದೆ. ಇದು ದೇವರ ಸೇವೆಯ ಜೊತೆಗೇ ಜನ ಸೇವೆ, ಅದೂ ಪುಟಾಣಿಗಳ ಆರೋಗ್ಯದ ಸೇವೆ.

ಬಂಟ್ವಾಳ ತಾಲೂಕಿನ ಅಕ್ಕಪಕ್ಕದ ಗ್ರಾಮಗಳಾದ ಕೆದಿಲ, ಕಡೇಶಿವಾಲಯ, ಪೆರ್ನೆಯ ಯುವಕರ ತಂಡ ಈಗ ಸೇವೆಗೆ ಇಳಿದಿರುವುದು.  ಈ ಗ್ರಾಮದ ಸಂಘದ ಸ್ವಯಂಸೇವಕರು , ಹಿಂದು ಜಾಗರಣ ವೇದಿಕೆಯ ಸಕ್ರೀಯ ಕಾರ್ಯಕರ್ತರು ಜೊತೆಗೂಡಿ ಗ್ರಾಮದಲ್ಲಿ ಸೇವಾ ಕಾರ್ಯಕ್ಕಾಗಿ ಆಯಾ ಗ್ರಾಮದಲ್ಲಿ ಕೆದಿಲದಲ್ಲಿ ಯುವಕೇಸರಿ ಗಡಿಯಾರ,  ಕಡೇಶಿವಾಲಯದಲ್ಲಿ ಯುವಶಕ್ತಿ ಕಡೇಶಿವಾಲಯ, ಪೆರ್ನೆಯಲ್ಲಿ ಯುವಸ್ಪಂದನ ಪೆರ್ನೆ ಎನ್ನುವ ಹೆಸರಿನಲ್ಲಿ ಸಂಘಟನೆ ಆರಂಬಿಸಿ ಎಲೆಮರೆಯ ಕಾಯಿಯಂತೆ ಅನೇಕ ಸೇವಾ ಕಾರ್ಯನಡೆಸುತ್ತಾ ಬಂದಿದ್ದಾರೆ, ಸದ್ಯ  4 ಮಕ್ಕಳ ಅನಾರೋಗ್ಯ ದಿಂದಿರುವುದಾಗಿ, ಅವರಿಗೆ ಚಿಕಿತ್ಸಾ ವೆಚ್ಚ ಬರಿಸಲು ಸಾಧ್ಯವಾಗದೆ ಕಂಗೆಟ್ಟಿರುವುದನ್ನು ಮನಗಂಡು ಈಗ ಎಲ್ಲಾ ಸಂಘಟನೆ ಜೊತೆಗೂಡಿ ಸೇವಾ ಯಜ್ಞದ ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿ ಅತೀ ದೊಡ್ಡ ಹನುಮಂತನ ವೇಷ (ಅಂದಾಜು 40 ಕೆಜಿ ತೂಕದ) ಹಾಕಿ  ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಸಹಾಯಕ್ಕಾಗಿ ಇಳಿಯುತ್ತಿದ್ದಾರೆ.

ನಾಲ್ಕು ಜನ  ಅನಾರೋಗ್ಯ  ಪುಟಾಣಿಗಳ ವೈದ್ಯಕೀಯ ವೆಚ್ಚಕ್ಕಾಗಿ ಸೇವಾ ಯಜ್ಞ ಎನ್ನುವ ಹೆಸರಿನಲ್ಲಿ ಹತ್ತೂರೊಡೆಯ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ  ಹನುಮಂತನ ವೇಷದ ಜೊತೆಗೆ ಸಹಾಯಕ್ಕಾಗಿ ಕೈ ಚಾಚುತ್ತಿದ್ದಾರೆ.ಆ ಪುಟಾಣಿಗಳ ಪ್ರಾಣ ಉಳಿಸಲು  ಕೈ ಜೋಡಿಸಲು ಮನವಿ ಮಾಡಿದ್ದಾರೆ ಸಂಘಟನಗಳು. ಬಿಳಿ ಅಂಗಿ, ಕಪ್ಪು ಪೇಂಟ್, ಕೇಸರಿ ಶಾಲು ತೊಟ್ಟ ಮೂರು ಸಂಘಟನೆಯ ಕಾರ್ಯಕರ್ತರು ಡಬ್ಬ ಹಿಡಿದು ಬೃಹತ್ ಹನುಮಂತನ ವೇಷದ ಜೊತೆಗೆ ಇರುತ್ತಾರೆ ಈ ಬಡ ಪ್ರಾಣ ಉಳಿಸಲು ಈ ರೀತಿ ಪ್ರಯತ್ನಿಸುತ್ತಿದ್ದಾರೆ. ಕಣ್ಣಿಗೆ ಕಾಣುವ ದೇವರಾದ ಈ ಪುಟಾಣಿಗಳ ಜೀವ ಉಳಿಸಲು ಪಣತೊಟ್ಟಿದ್ದಾರೆ. ಕೈಲಾದ ಸಹಾಯ ಮಾಡಲು ಮನವಿ ಮಾಡಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಿ ಗೋವಿನ ಹಾಲು, ತುಪ್ಪದ ಮಹತ್ವದ ಪ್ರತಿಪಾದನೆ – ಪಾರಂಪರಿಕ ಆಹಾರ ಪದ್ಧತಿಗೆ ಒತ್ತು
September 26, 2026
7:36 PM
by: ದ ರೂರಲ್ ಮಿರರ್.ಕಾಂ
ಕುಟುಂಬದ ಸೌಂದರ್ಯ ವೈಭವದಲ್ಲಲ್ಲ, ಸೌಹಾರ್ದತೆಯಲ್ಲಿ: ಸಂಬಂಧ ಉಳಿಸುವುದೇ ನಿಜವಾದ ಗೆಲುವು
September 26, 2026
7:21 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹವಾಮಾನ ಬದಲಾವಣೆ ತಡೆಯಲು ಕಾನೂನು ಮಾತ್ರ ಸಾಲದು – ಸಾಮೂಹಿಕ ಪ್ರಯತ್ನ ಅಗತ್ಯ
September 26, 2026
7:10 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26.09.2026 | ಸೆ.28ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು: ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
September 26, 2026
1:35 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror