ಮಳೆ ಬಂತು….. ಬಂತು ಎಂದರೂ ರಾಜ್ಯದ ಬಹುತೇಕ ಕಡೆ ಬರಗಾಲದ ಛಾಯೆ | ಇನ್ನೂ ಚುರುಕುಗೊಳ್ಳದ ಮುಂಗಾರು |

June 14, 2023
12:47 PM

ಮಳೆ ಬಂತು… ಕೇರಳ ತಲುಪಿತು… ಚಂಡಮಾರುತ ಕಂಡುಬಂದಿತು… ಮುಂಗಾರು ಮಾರುತ ನಿಧಾನವಾಯಿತು, ಮುಂಗಾರು ದುರ್ಬಲವಾಯಿತು…..! ಹೀಗೇ ಮಳೆಯ ಬಗ್ಗೆ ಹತ್ತಾರು ಸುದ್ದಿಗಳು. ಮಳೆಯ ಆಗಮನಕ್ಕಾಗಿ ಕಾಯುವ ಮಂದಿ, ಕೃಷಿಕರು ಇಂದಿಗೂ ರಾಜ್ಯದಲ್ಲಿದ್ದಾರೆ. ಒಮ್ಮೆ ಮಳೆಯಾದರೆ ಸಾಕು ಎನ್ನುವ ಕೂಗು ಹಲವು ಕಡೆ ಇದೆ.ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಮೈಸೂರು ಕರ್ನಾಟಕ ಭಾಗಗಳಲ್ಲಿ ಬರಗಾಲದ ಆತಂಕ ಮೂಡಿದೆ.

ಮುಂಗಾರು ಮಳೆ ವಿಳಂಬ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಲಕಂಟಕ ಎದುರಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಮೈಸೂರು ಕರ್ನಾಟಕ ಭಾಗಗಳಲ್ಲಿ ಬರಗಾಲದ ಆತಂಕ ಮೂಡಿದೆ. ಹಲವು ನದಿಗಳು ಬತ್ತುವ ಹಂತದಲ್ಲಿದ್ದು, ಬೆಳಗಾವಿ ನಗರ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮೊನ್ನೆಯವರೆಗೆ ಕರಾವಳಿ ಜಿಲ್ಲೆಯಲ್ಲೂ ಮಳೆಯ ಕೊರತೆ ಕಂಡುಬಂದು ಬರಗಾಲದ ದೃಶ್ಯ ಕಂಡಿತ್ತು. ಅಡಿಕೆ ತೋಟಗಳು ಒಣಗಿದ್ದವು. ಇದೀಗ ಮಳೆಯಾದ ಕಾರಣ ಸ್ವಲ್ಪ ನೆಮ್ಮದಿಯಾದರೂ ರಾಜ್ಯದ ಹಲವು ಜಿಲ್ಲೆಗಳಲ್ಲಿ  ಮಳೆಗಾಗಿ ಕಾಯುವ ಸ್ಥಿತಿ ಇದೆ.

ರಾಜ್ಯದ ಬೆಳಗಾವಿ, ಬಾಗಲಕೋಟ, ಧಾರವಾಡ, ಗದಗ ಜಿಲ್ಲೆಯ ಜೀವನಾಡಿಯಾದ ಮಲಪ್ರಭೆ  ಬತ್ತುತ್ತಿದೆ. ಇದರಿಂದ ಬೈಲಹೊಂಗಲ, ಸವದತ್ತಿ, ಹುಬ್ಬಳ್ಳಿ, ಧಾರವಾಡಕ್ಕೆ ನೀರಿನ ಅಭಾವವಾಗುವ ಚಿಂತೆ ಎದುರಾಗಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ನವಿಲು ತೀರ್ಥ ಜಲಾಶಯ ಬಹುತೇಕ ಖಾಲಿಯಾಗಿದ್ದು, 37.7 ಟಿಎಂಸಿ ಸಾಮರ್ಥ್ಯದ ಜಲಾಶಯ ಸಂಪೂರ್ಣ ಖಾಲಿಯಾಗಿದ್ದು, 4 ಟಿಎಂಸಿ ನೀರು ಬಾಕಿ ಉಳಿದಿದೆ. ಇನ್ನೊಂದು ವಾರದಲ್ಲಿ ಮಳೆ ಆಗದಿದ್ದರೆ ಜಿಲ್ಲೆಯ ಜನರಿಗೆ ಕಂಟಕ ಕಾದಿದೆ. ಈಗಾಗಲೇ ಜೀವ ಜಲಕ್ಕೆ ಹಾಹಾಕಾರ ಶುರುವಾಗಿದೆ. ವಿಜಯಪುರ ಹಾವೇರಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆ  ಇದೆ.  ಮಳೆ ಆಗದ ಹಿನ್ನೆಲೆಯಲ್ಲಿ ಬಿತ್ತನೆ ವಿಳಂಬ ಆಗಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ
October 15, 2026
10:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror