ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗವಾದ ಕರಂದ್ಲಾಜೆ ಎಂಬ ಹೆಸರು ದೇಶದಾದ್ಯಂತ ಹೆಸರು ಮಾಡಿತ್ತು. ಇದಕ್ಕೆ ಕಾರಣರಾದವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ. ಇದೀಗ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಡಿದೆ. ಶೋಭಾ ಕರಂದ್ಲಾಜೆ ಬದಲಾಗಿ ಶೋಭಾ ಗೌಡ ಎಂದು ಹೆಸರು ಬದಲಾಯಿಸುತ್ತಾರೆ ಎನ್ನುವುದು ಈಗಿನ ಸುದ್ದಿ. ಆದರೆ ಶೋಭಾ ಕರಂದ್ಲಾಜೆ ಅವರು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.
ಹೆಸರನ್ನು ಬದಲಾಯಿಸಿಕೊಳ್ಳುವ ಉದ್ದೇಶ, ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಂತಹ ಬದಲಾವಣೆಗಳು ಹಿಂದೆಯೂ ನಡೆದಿದೆ. ಸುಳ್ಯದಿಂದ ಪುತ್ತೂರಿನಲ್ಲಿ ಚುನಾವಣೆಗೆ ಸ್ಫರ್ಧೆ ಮಾಡಿರುವ ಡಿ.ವಿ.ಸದಾನಂದ ಗೌಡ ಅವರೂ ತನ್ನ ಹೆಸರನ್ನು ಚುನಾವಣೆಯ ಕಾರಣದಿಂದ ಬದಲಾಯಿಸಿಕೊಂಡಿದ್ದರು. ಇದೇ ರೀತಿ ಚುನಾವಣೆಯಲ್ಲಿ ಮೊದಲ ಸಾಲಿನಲ್ಲಿ ಹೆಸರು ಬರಲೂ ಹೆಸರನ್ನು ಬದಲಾಯಿಸಿಕೊಂಡ ಉದಾಹರಣೆ ಇದೆ. ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಜಾತಿ ಲೆಕ್ಕಾಚಾರಗಳೇ ಪ್ರಮುಖವಾಗುವ ಕಾರಣದಿಂದ ಒಕ್ಕಲಿಗ ಸಮುದಾಯದ ಮತಗಳನ್ನು ಗಟ್ಟಿಪಡಿಸಲು ಹಳೆ ಮೈಸೂರು ಭಾಗದಲ್ಲಿ ಶೋಭಾ ಗೌಡ ಎಂಬ ಹೆಸರಿನ ಮೂಲಕ ಮತ ಪ್ರಚಾರ ಹಾಗೂ ಚುನಾವಣೆ ಕಡೆಗೂ ಗಮನಹರಿಸಲಾಗಿದೆ ಎನ್ನುವುದು ಚರ್ಚೆಯ ವಿಷಯ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…