ಭಾರತದಲ್ಲಿ ಎಲ್ಲಾ ಧರ್ಮದವರಿಗೂ ಸಮಾನ ಹಕ್ಕು ಇದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ಭಾರತ. ಆದರೆ ಭಾರತದಲ್ಲಿ ಹಿಂದೂಗಳೇ ಹೆಚ್ಚಿರುವ ದೇಶವಾಗಿದೆ. ಆದರೆ ಈಗ ಹಿಂದುಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ. ಭಾರತದಲ್ಲಿ (India) ಬಹುಸಂಖ್ಯಾತ ಹಿಂದೂಗಳು (Hindu) ಸಂಖ್ಯೆ ಬಹಳ ಕುಸಿತವಾಗಿದೆ ಎಂದು ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯೊಂದು (Economic Advisory Council to the Prime Minister) ವರದಿ ಪ್ರಕಟಿಸಿದೆ.
ವರದಿಯಲ್ಲಿ ಏನಿದೆ? 1950 ಮತ್ತು 2015 ರ ನಡುವೆ ಭಾರತದಲ್ಲಿ ಹಿಂದೂಗಳ ಪ್ರಮಾಣ 7.8% ರಷ್ಟು ಕುಸಿತವಾದರೆ ಮುಸ್ಲಿಮರ (Muslims) ಪ್ರಮಾಣ 53% ಏರಿಕೆಯಾಗಿದೆ. 1950ರಲ್ಲಿ 84.68% ಹಿಂದೂಗಳಿದ್ದರೆ ಈಗ ಇದು 78.06% ಇಳಿಕೆಯಾಗಿದೆ. ಮುಸ್ಲಿಮ್ ಜನಸಂಖ್ಯೆ 9.84% ಇದ್ದರೆ ಈಗ ಇದು 14.09% ಏರಿಕೆಯಾಗಿದೆ. ಭಾರತದಲ್ಲಿ ಹಿಂದೂ ಜನಸಂಖ್ಯೆಯು ಕುಗ್ಗಿದರೆ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಮತ್ತು ಸಿಖ್ ಜನಾಂಗವರ ಸಂಖ್ಯೆ ಹೆಚ್ಚಳವಾದರೆ ಜೈನ ಮತ್ತು ಪಾರ್ಸಿಗಳ ಸಂಖ್ಯೆ ಕಡಿಮೆಯಾಗಿದೆ.
ಕೈಸ್ತರು 5.38%, ಸಿಖ್ 6.58%, ಬೌದ್ಧ 0.81% ಪ್ರಮಾಣದಲ್ಲಿ ಏರಿಕೆಯಾಗಿದೆ. 1950 ರಲ್ಲಿ ಕ್ರೈಸ್ತರ ಸಂಖ್ಯೆ 2.24 ಇದ್ದರೆ 2015ರಲ್ಲಿ 2.36% ಏರಿದೆ. 1950 ರಲ್ಲಿ ಸಿಖ್ಬರ ಸಂಖ್ಯೆ 1.24% ಇದ್ದರೆ 2015ರಲ್ಲಿ 1.85% ಏರಿಕೆಯಾಗಿದೆ. 1950 ರಲ್ಲಿ ಬೌದ್ಧರ ಸಂಖ್ಯೆ 0.05% ಇದ್ದರೆ 0.81% ಏರಿಕೆಯಾಗಿದೆ. ಜೈನರ ಸಂಖ್ಯೆ 1950ರಲ್ಲಿ 0.45% ಇದ್ದರೆ 2015ರಲ್ಲಿ 0.36% ಇಳಿದಿದೆ. ಪಾರ್ಸಿ ಜನಾಂಗದ ಸಂಖ್ಯೆ 85% ಇಳಿಕೆಯಾಗಿದ್ದು 0.03% ನಿಂದ ಇದು 0.004% ಇಳಿದಿದೆ. ಪಾಕಿಸ್ತಾನದಲ್ಲಿ 3.75%, ಬಾಂಗ್ಲಾದೇಶ 18.55% ಬಹುಸಂಖ್ಯಾತ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗಿದೆ. ಫ್ರಾನ್ಸ್‌ನಲ್ಲಿ 36.76%, ಯುಕೆ 25.29% ಅಮೆರಿಕದಲ್ಲಿ 45.80% ಕ್ರೈಸ್ತರ ಸಂಖ್ಯೆ ಇಳಿಕೆಯಾಗಿದೆ.
ಅಲ್ಪಸಂಖ್ಯಾತರ ಏರಿಕೆಗೆ ಕಾರಣ ಏನು? : ಅಲ್ಪಸಂಖ್ಯಾತರ (Minority) ಜೀವನವನ್ನು ಸುಧಾರಿಸಲು ಭಾರತದ ಸರ್ಕಾರ ನೀತಿಗಳು, ರಾಜಕೀಯ ನಿರ್ಧಾರಗಳು, ಭಾರತದಲ್ಲಿ ವೈವಿಧ್ಯತೆ ವಾತಾವರಣದಿಂದಾಗಿ ಭಾರತದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಏರಿಕೆಯಾಗಿದೆ.
ಸುದ್ದಿಮೂಲ : ಅಂತರ್ಜಾಲ
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…