Advertisement
MIRROR FOCUS

ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳಲು ಸರಳ ಉಪಾಯಗಳು

Share

ಸಕ್ಕರೆ ಕಾಯಿ ಅಥವಾ ಶುಗರ್ ಎಂದೆಲ್ಲಾ ಕರೆಯುವ ಆರೋಗ್ಯದ ಸಮಸ್ಯೆ  ಕಂಡುಬರುವುದೇ ನಮ್ಮ ಆಹಾರದಲ್ಲಿ. ನವಜಾತ ಶಿಶುಗಳಲ್ಲಿಯೂ ಈ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಏಕೆಂದರೆ ತುಂಬು ಗರ್ಣಿಣಿಯರಾದ ಬಳಿಕ ಬಯಕೆ ಎಂಬ ನೆಪ ಇಟ್ಟುಕೊಂಡು ಸಿಕ್ಕಿದೆಲ್ಲ ತಿನ್ನುವ ಹವ್ಯಾಸಗಳು ಮುಂದೊಂದಿನ ಪ್ರಾಣಕ್ಕೆ ಕುತ್ತು ತರುತ್ತದೆ.  ನಾಲಗೆಯ ರುಚಿಗೆಂದು ಹೆಚ್ಚು ಸಿಹಿಯನ್ನು ತಿಂದರೆ ಇದೇ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಸಕ್ಕರೆ ಕಾಯಿಲೆಗಳನ್ನು ಸೀಮಿತದಲ್ಲಿಟ್ಟುಕೊಳ್ಳಲು ನಮ್ಮ ಮನೆಯ ಮದ್ದುವೆ ಸಾಕು ಅವುಗಳೆಂದರೆ:

ನೆನೆಸಿದ ಮೆಂತ್ಯೆ ಕಾಳು: ರಾತ್ರಿ ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆ ಕಾಳುವನ್ನು ನೀರಿನಲ್ಲಿ ನೆನೆಸಿ ಮರುದಿನ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಅದರಲ್ಲಿರುವ ಫೈಬರ್ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಇದು ಮುಖದ ಸೌಂದರ್ಯ ವನ್ನು ಹೆಚ್ಚಿಸಲೂ ಸಹಾಕಾರಿ.

ಬಾರ್ಲಿ: ಬೇಸಿಗೆ ಸಮಯದಲ್ಲಿ ಬಾರ್ಲಿ ಗಂಜಿ ಅಥವಾ ಬಾರ್ಲಿ ನೀರನ್ನು ಸೇವಿಸುವುದರಿಂದ ಬೀಟಾ-ಗ್ಲುಕನ್ ಇನ್ಸುಲಿನ್ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ.

ಕರಿಬೇವಿನ ಸೊಪ್ಪು: ದೈನಂದಿನ ಆಹಾರದಲ್ಲಿ ಕರಿಬೇವು ಸೇರಿಸಿಕೊಳ್ಳುವುದು ಉತ್ತಮ. ಏಕೆಂದರೆ ಇದರ ಎಲೆ ಆಂಟಿ-ಡಯಾಬೆಟಿಕ್ ಅನ್ನು ಹೊಂದಿಕೊಂಡಿದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಿಂದ ಜಗಿಯುವುದರಿಂದ ಹೊಟ್ಟೆ ಹಾಗೂ ಕೂದಲಿನ ಸಮಸ್ಯೆಗಳು ನಿವಾರಿಸುತ್ತದೆ.

ನೆಲ್ಲಿಕಾಯಿ: ಬೆಟ್ಟದ ನೆಲ್ಲಿಕಾಯಿ ಇದರಲ್ಲಿ ಕ್ರೋಮಿಯಂ ಅಂಶವುಇನ್ಸುಲಿನ್ ಕಾರ್ಯಕ್ಕೆ ಬೆಂಬಲ ನೀಡುತ್ತದೆ ಮತ್ತು ಕಾರ್ಬೋಹೈಡ್ರೇಟ್‍ಗಳ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಕೂದಲಿನ ಸಮಸ್ಯೆಗೂ ಸಹಾಕಾರಿ.

ಹಾಗಲಕಾಯಿ: ಇದರಲ್ಲಿ ಚರಾಂತಿನ್ ಮತ್ತು ಪೀನ್ಸುಲೀನ್ ಎಂಬ ಸಕ್ರಿಯ ಪದಾರ್ಥಗಳಿವೆ. ಇವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ನೇರವಾಗಿ ಸಹಾಯ ಮಾಡುತ್ತದೆ.

ಅಗಸೆ ಬೀಜ: ಒಮೆಗಾ-3ಮತ್ತು ಫೈಬರ್ ಅನ್ನು ಒದಗಿಸುತ್ತವೆ, ಇದು ಸಕ್ಕರೆ ನಿಯಂತ್ರಣಕ್ಕೆ ಉತ್ತಮ.

ಅರಶಿನ: ಕಕ್ರ್ಯುಮಿನ್ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇದನ್ನು ಆಡುಗೆಯಲ್ಲಿ ಬಳಸುವುದು ಅಥವಾ ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಳಿಗೆ ಒಂದು ಚಿಟಿಕೆಯಷ್ಟು ಅರಶಿನ ಹುಡಿ ಹಾಕಿ ಕುಡಿಯುವುದರಿಂದ ದೇಹಕ್ಕೆ ತುಂಬ ಉತ್ತಿಮ.

ಈ ರೀತಿಯಲ್ಲಿ ಆಡುಗೆ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟಕೊಳ್ಳುವುತ್ತದೆ. ಆದರೆ ನಮ್ಮ ಮನಸ್ಸು ಹಾಗೂ ನಾಲಗೆ ಹೊರಗಿನ ತಿಂಡಿಯನ್ನು ಬೇಡುವುದು ತುಂಬ ಕೆಟ್ಟದು. ಆರೋಗ್ಯವೇ ಜೀವನ ಎಂಬ ಮಾತನ್ನು ಗಮನದಲ್ಲಿಟ್ಟು ಕೊಂಡು ಆಹಾರಪದ್ಧತಿಯನ್ನು ಬದಲಾಗಿಸಿಕೊಂಡು ಹೋಗುವುದು ತುಂಬಾನೆ ಉತ್ತಮ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

6 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

6 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

7 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

7 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

7 hours ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

1 day ago