Advertisement
MIRROR FOCUS

ಬರ್ಮಾ ಅಡಿಕೆ ಕಳ್ಳಸಾಗಣೆ ಏರಿಕೆ | ಏಕೆ ಸಿಗುತ್ತಿಲ್ಲ ಈ ಮಾಫಿಯಾದ ರುವಾರಿ…? |

Share

ದೇಶಕ್ಕೆ ಬರ್ಮಾ ಅಡಿಕೆ ಅವ್ಯಾಹತವಾಗಿ ಕಳ್ಳಸಾಗಾಣಿಕೆಯಾಗುತ್ತಿದೆ. ಅಲ್ಲಲ್ಲಿ ತಡೆಯಾಗುತ್ತಲೂ ಇದೆ. ಈ ಕಾರಣದಿಂದಲೇ ಅಡಿಕೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಏರಿಕೆ ಕಾಣುತ್ತಿಲ್ಲ. ಅಕ್ರಮವಾಗಿ ಅಡಿಕೆ ಭಾರತದೊಳಕ್ಕೆ ಬರುತ್ತಿದ್ದರೂ, ಕೋಟ್ಯಂತರ ತೆರಿಗೆ ನಷ್ಟವಾಗುತ್ತಿದ್ದರೂ ಈ ಕಳ್ಳಸಾಗಾಣಿಕೆಯ ಪ್ರಮುಖ ರುವಾರಿ ಪತ್ತೆಯಾಗದಿರುವುದೇ ಯಕ್ಷ ಪ್ರಶ್ನೆಯಾಗಿದೆ.

ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಮೂಲಕ ಅಡಿಕೆ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಈಶಾನ್ಯ ರಾಜ್ಯದ ಬಹುತೇಕ ಅಡಿಕೆ ಬೆಳೆಗಾರರು ಕೂಡಾ ಈ ಕಳ್ಳಸಾಗಾಣಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೂ ಅಡಿಕೆ ಸಾಗಾಣಿಕೆಗೆ ತಡೆಯಾಗಿಲ್ಲ.  ಗೋಲಾಘಾಟ್-ಮೇರಪಾನಿಯಲ್ಲಿ ಬರ್ಮಾ ಅಡಿಕೆ ಕಳ್ಳಸಾಗಣೆ ಅವ್ಯಾಹತವಾಗಿ ಏರಿಕೆಯಾಗುತ್ತಿದೆ. ಮ್ಯಾನ್ಮಾರ್‌ನಿಂದ ಗೋಲಾಘಾಟ್ ಜಿಲ್ಲೆಯ ಮೂಲಕ ಅಕ್ರಮ ಬರ್ಮಾ ಅಡಿಕೆ ಸಾಗಾಣಿಕೆ ನಡೆಯುತ್ತಿದೆ. ಅಡಿಕೆ ಕಳ್ಳಸಾಗಾಣಿಕೆಯ ಮಾಫಿಯಾ ಬಹುದೊಡ್ಡ ಜಾಲವಾಗಿ ಈಗ ರೂಪುಗೊಳ್ಳುತ್ತಿದೆ.

ಗೋಲಘಟ್ಟ ನಗರದ ಮೂಲಕ ಬರ್ಮಾ ಅಡಿಕೆ ಸಾಗಾಟದ ವಿರುದ್ಧ ಗೋಲಘಟ್ಟದ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲಾಡಳಿತ ಹಾಗೂ ಗೋಲಘಟ್ಟ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಈ ಜಾಲದ ಹಿಂದೆ ದೊಡ್ಡ ಕುಳಗಳು ಇರುವುದೇ ಇದಕ್ಕೆ ಕಾರಣವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಜಾಲವು ಬರ್ಮಾ ಅಡಿಕೆಯನ್ನು ನಾಗಾಲ್ಯಾಂಡ್‌ನ ತಪ್ಪಲಿನಲ್ಲಿ ಸಂಗ್ರಹಿಸುತ್ತಾರೆ ಮತ್ತು ಅದನ್ನು ಮೆರಾಪಾನಿಯಲ್ಲಿರುವ ಸಿಆರ್‌ಪಿಎಫ್ ಗೇಟ್ ಮೂಲಕ ಮತ್ತು ಮೆರಾಪಾನಿ ಪೊಲೀಸ್ ಠಾಣೆಯ ಮುಂದೆ ಪ್ರತಿದಿನ ವಿವಿಧ ವಾಹನಳಲ್ಲಿ ಸಾಗಿಸುತ್ತಾರೆ. ಇತ್ತೀಚೆಗೆ, ಮೇರಾಪಾನಿಯಲ್ಲಿ ಅಡಿಕೆ ಹೊತ್ತ ಲಾರಿ ಅಪಘಾತಕ್ಕೀಡಾಯಿತು. ಬರ್ಮಾ ಸುಪಾರಿ ತುಂಬಿದ್ದ ಅಡಿಕೆಯನ್ನು ಸ್ಥಳೀಯರು ತಡೆದು ಮೇರಪಾನಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಅಡಿಕೆ ಸಾಗಾಟದ ಮಾಫಿಯಾ ಮೆರಪಾನಿ ಪೊಲೀಸ್ ಠಾಣೆಯಿಂದ ಅಡಿಕೆ ತುಂಬಿದ್ದ ಟ್ರಕ್  ಬಿಡಿಸಿಕೊಳ್ಳುವ ಯತ್ನವನ್ನು ಮುಂದುವರೆಸಿದೆ ಎಂದು ಹೋರಾಟಗಾರರು ಆರೋಪ ಮಾಡಿದ್ದಾರೆ.

Illegal Burmese Arecanut transportation through Golaghat district from Myanmar has been rising. Locals intercepted the truck loaded with Burmese Arecanut and handed it over to Merapani police. The Merapani police have already seized the truck loaded with smuggled Arecanut and registered a case.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

13 hours ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

14 hours ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

14 hours ago

ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್

ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…

14 hours ago

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

2 days ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

2 days ago