Advertisement
ಅನುಕ್ರಮ

ಮಣ್ಣಿನ ದಿನ | ವಿಶ್ವ ಮಣ್ಣಿನ ದಿನಾಚರಣೆ | ಆರೋಗ್ಯಕರ ಮಣ್ಣಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದು |

Share

ಮಗಳು ಸೀಮಂತ ಮುಗಿಸಿ ನಿನ್ನೆಯಷ್ಟೇ ತವರು ಮನೆ ಸೇರಿದ್ದಳು. ಹೆತ್ತವರಿಗೆ ಅಜ್ಜ, ಅಜ್ಜಿಯಾಗುವ ಸಂಭ್ರಮ. ಬಹಳ ಖುಷಿಯಲ್ಲಿದ್ದರು. ದೂರದ ಬೆಂಗಳೂರು ನಗರದಲ್ಲಿರುವ ಮಗಳ ಮನೆಗೆ ಹೋಗುವುದೆಂದರೆ ಹಳ್ಳಿಯಲ್ಲಿರುವ ಹೆತ್ತವರಿಗೆ ಬಹಳ ಕಷ್ಟವಾಗುತ್ತಿತ್ತು. ಗದ್ದೆ, ತೋಟಗಳ ಉಸ್ತುವಾರಿಯನ್ನು ನಿಭಾಯಿಸ ಬೇಕಲ್ಲಾ. ಅಲ್ಲದೆ ಆಯಾ ಕಾಲದ ಕೃಷಿ ಕೆಲಸಗಳು ಕೈ ತುಂಬಾ ಇರುವ ಕಾರಣ ಸಣ್ಣ ಎರಡು ಮೂರು ದಿನಗಳ ಪ್ರಯಾಣವೂ ಕನಸೇ ಸರಿ. ಬೇಜಾರಿಲ್ಲ. ಅದರಲ್ಲೇ ಖುಷಿ ನೆಮ್ಮದಿ ಕಾಣುವ ರೈತಾಪಿ ಜನರಿಗೆ ಮಣ್ಣಿನ ಮಕ್ಕಳೆಂಬ ಹೆಮ್ಮೆ ಯಾವಾಗಲೂ ಜೀವಂತ.

ಮೊದಲ ಮಳೆಯ ಸಿಂಚನ. ಮನೆಗೆ ಬಂದ ಚೊಚ್ಚಲ ಬಸುರಿ ಕಾಣಿಸುತ್ತಿಲ್ಲವಲ್ಲ ಎಂಬ ಆತಂಕ ಅಮ್ಮನಿಗೆ. ಸಣ್ಣಗೆ ಸುರುವಾದ ಮಳೆ ತನ್ನ ಬಿರುಸನ್ನು ಹೆಚ್ಚಿಸಿತ್ತು. ಮಗಳನ್ನು ಹುಡುಕ ಹೊರಟ ಅಮ್ಮನಿಗೆ ದನದ ಕೊಟ್ಟಿಗೆಯಲ್ಲಿ ಪುಟ್ಟ ಕರು ಅಧಿತಿಯ ಮೈಸವರುತ್ತಾ ಕಣ್ಣು ಮುಚ್ಚಿ ಏನನ್ನೋ ಆಘ್ರಾಣಿಸುವ ಭಂಗಿಯಲ್ಲಿದ್ದ ಮಗಳು…. ಒಂದು ಅರ್ಥವಾಗಲಿಲ್ಕ ಏನಮ್ಮಾ ಇದೇನು ಮಾಡುತ್ತಿದ್ದಿ, ಮಳೆ ಬರುತ್ತಿದೆ, ಒಳಗೆ ನಡಿ ಎಂದು ಅಮ್ಮ ಕೇಳಿದಾಗ ಮಗಳದ್ದು ಒಂದೇ ಉತ್ತರ. ತೊಂದರೆ ಕೊಡ ಬೇಡ. ಮಣ್ಣಿನ ಪರಿಮಳ ತೆಗೆದು ಕೊಳ್ಳುತ್ತಿದ್ದೇನೆ. ಸುಮ್ಮನೆ ಉಪದ್ರ ಮಾಡ ಬೇಡ ಎಂದ ಮಗಳ ಮಾತಿಗೆ ತಲೆದೂಗಿದ ಅಮ್ಮ ಮೆಲ್ಲನೆ ಒಳ ಹೋದಳು.

ಮಣ್ಣಿನ ಪರಿಮಳ, ನಾವು, ಮಣ್ಣಿನೊಂದಿಗೇ ಮಿಳಿತವಾಗಿರುವವರು. ಮಣ್ಣು , ನಾವು ಬೇರೆಯಲ್ಲ. ನಮ್ಮ ಹುಟ್ಟು, ಬೆಳವಣಿಗೆ, ಬದುಕು ಎಲ್ಲವೂ ಮಣ್ಣಿನೊಂದಿಗೆ ಸೇರಿದೆ.

ಪರಿಸರದ ಗಿಡಮರಗಳೆಲ್ಲವೂ ನಮ್ಮ ಬಾಳಿನೇರಿಳಿತಗಳಲ್ಲಿ ನೇರ ಪಾಲುದಾರರು. ಅವುಗಳೆಲ್ಲ ಸರಿಯಿದ್ದರೆ ನಮಗೆ ಆರೋಗ್ಯ, ಜೀವನಕ್ಕೆ ಆಧಾರ. ಫಲವತ್ತಾದ ಮಣ್ಣು ಉತ್ತಮ ಪರಿಸರವನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾದ ಮಣ್ಣು ಇರುವ ಭೂಮಿ ನಮಗೆ ದೊರೆತುದು ಪುಣ್ಯವೇ.

ಇಂದು ಅತಿಯಾದ ಸಂಪನ್ಮೂಲಗಳ ಬಳಕೆಯ ನೇರ ಪರಿಣಾಮವಾಗುತ್ತಿರುವುದು ಮಣ್ಣಿನ ಮೇಲೆ ಅಂದರೆ ಭೂಮಿಯ ಮೇಲೆ. ಹಲವು ರೀತಿಯ ಕಲ್ಮಶಗಳನ್ನು ನೇರವಾಗಿ ಮಣ್ಣಿನ ಮೇಲೆ ಸುರಿದು ಹಾಳು ಮಾಡುತ್ತಿದ್ದೇವೆ. ಮಾಲಿನ್ಯ ವನ್ನು ನಿಯಂತ್ರಿಸುವ ಅಗತ್ಯ ವಿದೆ. ಸಕಾಲದಲ್ಲಿ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮಣ್ಣಿನೊಂದಿಗೆ ಭೂಮಿಯನ್ನು ಕಳೆದುಕೊಳ್ಳ ಬೇಕಾಗುತ್ತದೆ. ಹಾಗಾಗಿ ಮಣ್ಣಿನ ಜೀವ ವೈವಿಧ್ಯ ವನ್ನು ರಕ್ಷಿಸಿ. ಆರೋಗ್ಯಕರ ಮಣ್ಣಿನ ಪರಿಸರ ವ್ಯವಸ್ಥೆಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.‌

ಡಿಸೆಂಬರ್ 5 ರನ್ನು ವಿಶ್ವ ಮಣ್ಣಿನ ದಿನವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ. 2014 ರಲ್ಲಿ ಮೊದಲ ಬಾರಿಗೆ ಈ ಆಚರಣೆ ಆರಂಭವಾಯಿತು. ಆರೋಗ್ಯಕರ ಮಣ್ಣಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಂಪನ್ಮೂಲಗಳ ದೀರ್ಘಕಾಲದ ನಿರ್ವಹಣೆಯ ಕುರಿತು ಜಾಗೃತಿಗಾಗಿ ಈ ಆಚರಣೆ.
ಈ ಆಚರಣೆಯ ರುವಾರಿ ಥಾಯ್ಲೆಂಡ್ ನ ರಾಜ ಭೂಮಿಬಲ ಅತುಲ್ಯ ತೇಜ. ಒಂಬತ್ತನೇ ರಾಮನೆಂದೇ ಗುರುತಿಸಿಕೊಂಡವರು. ಮಣ್ಷಿನ ಬಗ್ಗೆ ಅದಮ್ಯ ಪ್ರೀತಿ ಹಾಗೂ ಅಪಾರ ಜ್ಞಾನ ಇದ್ದವರು. ಮಣ್ಣಿನ ಪ್ರಾಮುಖ್ಯತೆಯನ್ನು, ಸಸ್ಯದ ಬೆಳವಣಿಗೆಯಲ್ಲಿ ಮಣ್ಣಿನ ಪಾತ್ರದ ಬಗ್ಗೆ ಬಹಳ ಆಸ್ಥೆ ವಹಿಸಿದ್ದರು.‌ ಹಾಗಾಗಿ ಈ ಆಚರಣೆಯ ಪ್ರಸ್ತಾಪ ಮಾಡಿದವರು ಥಾಯ್ಲ್ಯಾಂಡ್ ರಾಜ. ಅವರ ಜನ್ಮ ದಿನ ಡಿಸೆಂಬರ್ 5. ಹಾಗಾಗಿ ಅದೇ ದಿನವನ್ನು ಮಣ್ಣಿನ ದಿನಾಚರಣೆಗೆ ಸೂಕ್ತವೆಂದು ಆಯ್ದುಕೊಳ್ಳಲಾಯಿತು. ಪ್ರತಿ ವರುಷದಂತೆ ಈ ವರುಷವೂ ದು ಧ್ಯೇಯ ವಾಕ್ಯವನ್ನು ಸೂಚಿಸಲಾಗಿದೆ. ಈ ಬಾರಿಯ ಧ್ಯೇಯ ವಾಕ್ಯ ” ಮಣ್ಣಿನ ಲವಣಾಂಶ ನಿಲ್ಲಿಸುವುದು, ಮಣ್ಣಿನ ಉತ್ಪಾದನೆ ಹೆಚ್ಚಿಸುವುದು. ನಮಗಾಗಿ , ಮುಂದಿನ ಪೀಳಿಗೆಗಾಗಿ ಆರೋಗ್ಯ ಕರವಾದ ಮಣ್ಣನ್ನು ಉಳಿಸಿಕೊಳ್ಳೋಣ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

18 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

18 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

18 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

19 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

19 hours ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

2 days ago