ನಮ್ಮ ಶತ್ರು ದೇಶಗಳಾದ ಪಾಕ್ ಹಾಗೂ ಚೀನಾದ ಮೇಲೆ ಸದಾ ಒಂದು ಕಣ್ಣು ಇಟ್ಟಿರಲೇ ಬೇಕು. ಗಡಿಯಲ್ಲಿ ಯೋಧರ ಕಣ್ತಪ್ಪಿಸಿ ಈ ದೇಶಗಳು ಎನಾದ್ರು ತಮ್ಮ ಕಂತ್ರಿ ಬುದ್ಧಿ ತೋರಿಸುತ್ತವೆ. ಅದಕ್ಕೆ ಭಾರತೀಯ ವಾಯುಪಡೆಯು ಚೀನಾ ಮತ್ತು ಪಾಕಿಸ್ತಾನ ಎರಡೂ ಗಡಿಗಳ ಮೇಲೆ ಏಕಕಾಲಕ್ಕೆ ಕಣ್ಗಾವಲಿರಿಸುವ ಸಾಮರ್ಥ್ಯವುಳ್ಳ 4 ಸರ್ವೇಕ್ಷಣಾ ಡ್ರೋನ್‌ಗಳನ್ನ ನಿಯೋಜಿಸಿದೆ. ಹೆರಾನ್ ಮಾರ್ಕ್-2 ಹೆಸರಿನ ಡ್ರೋಣ್ ಏಕಕಾಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಗಡಿಗಳಲ್ಲಿ ಗಸ್ತು ತಿರುಗುವ ಸಾಮರ್ಥ್ಯ ಹೊಂದಿದೆ.
ಹೆರಾನ್ ಮಾರ್ಕ್-2 ವಿಶೇಷತೆ ಏನು? : ಈ ಡ್ರೋನ್‌ಗಳು ಉಪಗ್ರಹಗಳ ಜೊತೆಗೆ ಸಂವಹನ ಸಂಪರ್ಕ ಹೊಂದಿರುತ್ತವೆ. ಭಾರತೀಯ ವಾಯುಪಡೆಯು ಅತ್ಯಂತ ಸುದೀರ್ಘ ಸಮಯದಿಂದ ಈ ರೀತಿಯ ಡ್ರೋನ್‌ಗಳ ಅಗತ್ಯತೆಯನ್ನ ಪ್ರತಿಪಾದಿಸಿತ್ತು. ಈ ಡ್ರೋನ್‌ಗಳು ಅತಿ ದೂರದವರೆಗೆ ಇಂಧನ ಮರುಭರ್ತಿ ಇಲ್ಲದೇ ಸಂಚರಿಸಬಲ್ಲವು. ಒಮ್ಮೆ ಇಂಧನ ಭರ್ತಿಯಾದರೆ 36 ಗಂಟೆ ಕಾಲ ಕಾರ್ಯ ನಿರ್ವಹಿಸಬಲ್ಲವು. ಲೇಸರ್ ತಂತ್ರಜ್ಞಾನದ ಮೂಲಕ ಶತ್ರುಗಳ ನೆಲೆ ಗುರುತಿಸಬಲ್ಲವು. ಅತಿ ದೂರದಿಂದಲೇ ಶತ್ರುಗಳ ನೆಲೆಯನ್ನ ಗುರುತಿಸುವ ಸಾಮರ್ಥ್ಯ ಡ್ರೋನ್‌ಗಳಿಗೆ ಇರುವ ಕಾರಣ, ಇವುಗಳ ನೆರವಿನಿಂದ ವಾಯುಪಡೆಯ ಫೈಟರ್ ಜೆಟ್‌ಗಳು ಶತ್ರುಗಳ ನೆಲೆಗಳನ್ನು ದೂರಗಾಮಿ ಕ್ಷಿಪಣಿಗಳ ಮೂಲಕ ನಾಶಪಡಿಸಬಹುದಾಗಿದೆ ಎಂದು ವಾಯುಪಡೆ ತಿಳಿಸಿದೆ.
ಹೆರಾನ್ ಮಾರ್ಕ್-2 ಡ್ರೋನ್ ದೃಷ್ಟಿಯ ವ್ಯಾಪ್ತಿಯ ಆಚೆಗಿನ ಸರ್ವೇಕ್ಷಣೆಗೂ ನೆರವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇವುಗಳ ನೆರವಿನಿಂದ ಇಡೀ ದೇಶವನ್ನ ಒಂದೇ ಸ್ಥಳದಿಂದ ಸರ್ವೇಕ್ಷಣೆ ಮಾಡಲು ಸಾಧ್ಯ ಎಂದು ಡ್ರೋನ್ ಸ್ವಾಡರ್ನ್‌ನ ವಿಂಗ್ ಕಮಾಂಡರ್ ಪಂಕಜ್ ರಾಣಾ ತಿಳಿಸಿದ್ದಾರೆ.
ದಿನದ 24 ಗಂಟೆಯೂ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ಡ್ರೋನ್‌ಗಳು ಯಾವುದೇ ಹವಾಮಾನದಲ್ಲೂ ಕೆಲಸ ಮಾಡುತ್ತವೆ. ಅದಕ್ಕಾಗಿ ಇವುಗಳ ಎಂಜಿನ್ ಸಾಮರ್ಥ್ಯವನ್ನೂ ಹೆಚ್ಚಿಸಲಾಗಿದೆ. ಒಂದೇ ಕಾರ್ಯಾಚರಣೆಗಳಲ್ಲಿ ಈ ಡ್ರೋನ್‌ಗಳು ಹಲವು ವಲಯಗಳ ಕಾರ್ಯಗಳನ್ನು ಸುದೀರ್ಘ ಕಾಲ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಬೇಹುಗಾರಿಕೆ, ಸರ್ವೇಕ್ಷಣೆ ಹಾಗೂ ಭಾರತೀಯ ವಾಯುಪಡೆಗೆ ಮಾಹಿತಿ ರವಾನಿಸುವ ಕಾರ್ಯಗಳನ್ನು ಈ ಡ್ರೋನ್ ಮಾಡುತ್ತದೆ ಎಂದು ರಾಣಾ ವಿವರಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಭಾರತೀಯ ವಾಯುಪಡೆ ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿದ್ದ ಮಿಗ್-21 ವಿಮಾನಗಳ ಬದಲಿಗೆ ಮೇಲ್ದರ್ಜೆಗೇರಿಸಿದ ಮಿಗ್-29 ಫೈಟರ್ ಜೆಟ್‌ಗಳನ್ನ ಗಸ್ತಿಗೆ ನಿಯೋಜನೆ ಮಾಡಿತ್ತು.
Source : Digital Media
ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490.
ಒಂದು ದೇವಸ್ಥಾನದ ಎಂದರೆ ಶ್ರದ್ಧೆಯ ಕೇಂದ್ರ, ಒಂದು ಊರಿನ ದೇವಸ್ಥಾನ ಎಂದರೆ ಸೌಹಾದರ್ತೆಯ…
ಏಪ್ರಿಲ್ 3 ಹಾಗೂ 4 ರಂದು ಕರಾವಳಿ ಹಾಗೂ ಉತ್ತರ ಮತ್ತು ದಕ್ಷಿಣ…
ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…