ಪಾಕ್, ಹಾಗೂ ಚೀನಾದ ಎದೆ ನಡುಗಿಸಲಿದೆ ಅತ್ಯಾಧುನಿಕ ಡ್ರೋನ್ | ಗಡಿ ಭಾಗದಲ್ಲಿ ಡ್ರೋನ್‌ಗಳ ನಿಯೋಜನೆ |

August 18, 2023
3:43 PM
ಗಡಿಯಲ್ಲಿ 4 ಹೆರಾನ್ ಮಾರ್ಕ್-2 ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ದೀರ್ಘ-ಶ್ರೇಣಿಯ ಕ್ಷಿಪಣಿಗಳು ಹಾಗೂ ಶಸ್ತ್ರಾಸ್ತ್ರಗಳ ವ್ಯವಸ್ಥೆ ಹೊಂದಿದೆ. ಜೊತೆಯಲ್ಲೇ ಹತ್ತಾರು ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಈ ಡ್ರೋನ್‌ಗಳಲ್ಲಿ ಇರಲಿವೆ.

ನಮ್ಮ ಶತ್ರು ದೇಶಗಳಾದ ಪಾಕ್ ಹಾಗೂ ಚೀನಾದ ಮೇಲೆ ಸದಾ ಒಂದು ಕಣ್ಣು ಇಟ್ಟಿರಲೇ ಬೇಕು. ಗಡಿಯಲ್ಲಿ ಯೋಧರ ಕಣ್ತಪ್ಪಿಸಿ ಈ ದೇಶಗಳು ಎನಾದ್ರು ತಮ್ಮ ಕಂತ್ರಿ ಬುದ್ಧಿ ತೋರಿಸುತ್ತವೆ. ಅದಕ್ಕೆ ಭಾರತೀಯ ವಾಯುಪಡೆಯು ಚೀನಾ ಮತ್ತು ಪಾಕಿಸ್ತಾನ ಎರಡೂ ಗಡಿಗಳ ಮೇಲೆ ಏಕಕಾಲಕ್ಕೆ ಕಣ್ಗಾವಲಿರಿಸುವ ಸಾಮರ್ಥ್ಯವುಳ್ಳ 4 ಸರ್ವೇಕ್ಷಣಾ ಡ್ರೋನ್‌ಗಳನ್ನ ನಿಯೋಜಿಸಿದೆ. ಹೆರಾನ್ ಮಾರ್ಕ್-2 ಹೆಸರಿನ ಡ್ರೋಣ್ ಏಕಕಾಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಗಡಿಗಳಲ್ಲಿ ಗಸ್ತು ತಿರುಗುವ ಸಾಮರ್ಥ್ಯ ಹೊಂದಿದೆ.

ಗಡಿಯಲ್ಲಿ 4 ಹೆರಾನ್ ಮಾರ್ಕ್-2 ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ದೀರ್ಘ-ಶ್ರೇಣಿಯ ಕ್ಷಿಪಣಿಗಳು ಹಾಗೂ ಶಸ್ತ್ರಾಸ್ತ್ರಗಳ ವ್ಯವಸ್ಥೆ ಹೊಂದಿದೆ. ಜೊತೆಯಲ್ಲೇ ಹತ್ತಾರು ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಈ ಡ್ರೋನ್‌ಗಳಲ್ಲಿ ಇರಲಿವೆ. ಭಾರತದ ಉತ್ತರ ವಲಯದ ಗಡಿಯ ಮುಂಚೂಣಿ ಪ್ರದೇಶಗಳಲ್ಲಿ ಈ ಡ್ರೋನ್‌ಗಳನ್ನು ಅಳವಡಿಕೆ ಮಾಡಲಾಗಿದೆ.

ಹೆರಾನ್ ಮಾರ್ಕ್-2 ವಿಶೇಷತೆ ಏನು? : ಈ ಡ್ರೋನ್‌ಗಳು ಉಪಗ್ರಹಗಳ ಜೊತೆಗೆ ಸಂವಹನ ಸಂಪರ್ಕ ಹೊಂದಿರುತ್ತವೆ. ಭಾರತೀಯ ವಾಯುಪಡೆಯು ಅತ್ಯಂತ ಸುದೀರ್ಘ ಸಮಯದಿಂದ ಈ ರೀತಿಯ ಡ್ರೋನ್‌ಗಳ ಅಗತ್ಯತೆಯನ್ನ ಪ್ರತಿಪಾದಿಸಿತ್ತು. ಈ ಡ್ರೋನ್‌ಗಳು ಅತಿ ದೂರದವರೆಗೆ ಇಂಧನ ಮರುಭರ್ತಿ ಇಲ್ಲದೇ ಸಂಚರಿಸಬಲ್ಲವು. ಒಮ್ಮೆ ಇಂಧನ ಭರ್ತಿಯಾದರೆ 36 ಗಂಟೆ ಕಾಲ ಕಾರ್ಯ ನಿರ್ವಹಿಸಬಲ್ಲವು. ಲೇಸರ್ ತಂತ್ರಜ್ಞಾನದ ಮೂಲಕ ಶತ್ರುಗಳ ನೆಲೆ ಗುರುತಿಸಬಲ್ಲವು. ಅತಿ ದೂರದಿಂದಲೇ ಶತ್ರುಗಳ ನೆಲೆಯನ್ನ ಗುರುತಿಸುವ ಸಾಮರ್ಥ್ಯ ಡ್ರೋನ್‌ಗಳಿಗೆ ಇರುವ ಕಾರಣ, ಇವುಗಳ ನೆರವಿನಿಂದ ವಾಯುಪಡೆಯ ಫೈಟರ್ ಜೆಟ್‌ಗಳು ಶತ್ರುಗಳ ನೆಲೆಗಳನ್ನು ದೂರಗಾಮಿ ಕ್ಷಿಪಣಿಗಳ ಮೂಲಕ ನಾಶಪಡಿಸಬಹುದಾಗಿದೆ ಎಂದು ವಾಯುಪಡೆ ತಿಳಿಸಿದೆ.

ಹೆರಾನ್ ಮಾರ್ಕ್-2 ಡ್ರೋನ್ ದೃಷ್ಟಿಯ ವ್ಯಾಪ್ತಿಯ ಆಚೆಗಿನ ಸರ್ವೇಕ್ಷಣೆಗೂ ನೆರವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇವುಗಳ ನೆರವಿನಿಂದ ಇಡೀ ದೇಶವನ್ನ ಒಂದೇ ಸ್ಥಳದಿಂದ ಸರ್ವೇಕ್ಷಣೆ ಮಾಡಲು ಸಾಧ್ಯ ಎಂದು ಡ್ರೋನ್ ಸ್ವಾಡರ್ನ್‌ನ ವಿಂಗ್ ಕಮಾಂಡರ್ ಪಂಕಜ್ ರಾಣಾ ತಿಳಿಸಿದ್ದಾರೆ.

ದಿನದ 24 ಗಂಟೆಯೂ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ಡ್ರೋನ್‌ಗಳು ಯಾವುದೇ ಹವಾಮಾನದಲ್ಲೂ ಕೆಲಸ ಮಾಡುತ್ತವೆ. ಅದಕ್ಕಾಗಿ ಇವುಗಳ ಎಂಜಿನ್ ಸಾಮರ್ಥ್ಯವನ್ನೂ ಹೆಚ್ಚಿಸಲಾಗಿದೆ. ಒಂದೇ ಕಾರ್ಯಾಚರಣೆಗಳಲ್ಲಿ ಈ ಡ್ರೋನ್‌ಗಳು ಹಲವು ವಲಯಗಳ ಕಾರ್ಯಗಳನ್ನು ಸುದೀರ್ಘ ಕಾಲ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಬೇಹುಗಾರಿಕೆ, ಸರ್ವೇಕ್ಷಣೆ ಹಾಗೂ ಭಾರತೀಯ ವಾಯುಪಡೆಗೆ ಮಾಹಿತಿ ರವಾನಿಸುವ ಕಾರ್ಯಗಳನ್ನು ಈ ಡ್ರೋನ್ ಮಾಡುತ್ತದೆ ಎಂದು ರಾಣಾ ವಿವರಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಭಾರತೀಯ ವಾಯುಪಡೆ ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿದ್ದ ಮಿಗ್-21 ವಿಮಾನಗಳ ಬದಲಿಗೆ ಮೇಲ್ದರ್ಜೆಗೇರಿಸಿದ ಮಿಗ್-29 ಫೈಟರ್ ಜೆಟ್‌ಗಳನ್ನ ಗಸ್ತಿಗೆ ನಿಯೋಜನೆ ಮಾಡಿತ್ತು.

Source : Digital Media

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ
August 30, 2026
10:38 PM
by: ದ ರೂರಲ್ ಮಿರರ್.ಕಾಂ
ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!
August 30, 2026
5:41 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳಿಗಾಗಿ 3 ಹೊಸ ಕಾರಿಡಾರ್‌
August 29, 2026
6:50 PM
by: ದ ರೂರಲ್ ಮಿರರ್.ಕಾಂ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror