ಒಂದು ವಾರದ ಹಿಂದೆ ದಕ್ಷಿಣ ಕೊರಿಯಾ ಪೂರ್ವ ಕರಾವಳಿಯ ಪರ್ವತ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ಇದುವರೆಗೆ ಸುಮಾರು 24,000 ಹೆಕ್ಟೇರ್ ಅರಣ್ಯವನ್ನು ನಾಶಪಡಿಸಿದೆ. ಇದು ದಕ್ಷಿಣ ಕೊರಿಯಾದ ಅತ್ಯಂತ ದೊಡ್ಡ ಅಗ್ನಿ ದುರಂತವಾಗಿದೆ ಎಂದು ಸರ್ಕಾರಿ ಸಂಸ್ಥೆಯೊಂದು ಶುಕ್ರವಾರ ಮಾಹಿತಿ ನೀಡಿದೆ.
ಕಾಡ್ಗಿಚ್ಚಿನಲ್ಲಿ ಒಟ್ಟು 343 ಮನೆಗಳು ನಾಶವಾಗಿದ್ದು, 7,355 ಜನರನ್ನು ಸ್ಥಳಾಂತರಿಸಲಾಗಿದೆ. ಅದೃಷ್ಟವಶಾತ್, ಇದುವರೆಗೆ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ. ಅಧಿಕೃತ ಮಾಧ್ಯಮ ವರದಿಗಳ ಪ್ರಕಾರ, ಮಾ. 7 ರಂದು ಬೆಳಿಗ್ಗೆ 5:00 ಗಂಟೆಗೆ, ದಕ್ಷಿಣ ಕೊರಿಯಾದ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ಬೆಂಕಿಯನ್ನು ನಂದಿಸಲು ಒಟ್ಟು 17,000 ಜನರನ್ನು ತೊಡಗಿಸಿದೆ. ಅದೇ ಸಮಯದಲ್ಲಿ, ದಕ್ಷಿಣ ಕೊರಿಯಾದ ಸರ್ಕಾರವು 95 ಹೆಲಿಕಾಪ್ಟರ್‌ಗಳನ್ನು ಮತ್ತು 781 ಅಗ್ನಿಶಾಮಕ ವಾಹನಗಳನ್ನು ಸಂಘಟಿತ ಕಾರ್ಯಾಚರಣೆಗಳನ್ನು ಕೈಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.