( ಸಾಂದರ್ಭಿಕ ಚಿತ್ರ )
ಖಾಸಗಿ ಶಾಲೆಗಳು ಹಾಗು ಅನುದಾನಿತ ಶಾಲೆಗಳ ಮೇಲೆ ಸರ್ಕಾರದ ಕಣ್ಣು ಬಿದ್ದಂತಿದೆ. ಲೈಸೆನ್ಸ್ ನವೀಕರಣ ಸೇರಿದಂತೆ ಫೈರ್ ಸೇಫ್ಟಿ ಫೀಸ್ ಕೂಡ ದುಬಾರಿ ಆಗಿದೆ. ಇದು ಪೋಷಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯೂ ಹೆಚ್ಚಾಗಿದೆ.
ಈ ಮೊದಲು ಶಾಲೆಯ ಫೈರ್ ಸೇಫ್ಟಿ ನವೀಕರಣ ಶುಲ್ಕ ಒಂದು ಸಾವಿರವಿತ್ತು. ಇದೀಗ ಆ ಶುಲ್ಕವನ್ನು ಬರೋಬ್ಬರಿ 25,500 ರೂಪಾಯಿಗೆ ಏರಿಕೆ ಮಾಡಿದೆ. ಹೊಸ ಶಾಲೆ ಅನುಮತಿಗೆ 40 ರಿಂದ 80 ಸಾವಿರ ಇತ್ತು. ಇದೀಗ ಲಕ್ಷ ದಾಟುತ್ತಿದೆ. ಎಲ್ಲಾ ನಿಯಮ ಪಾಲಿಸಿ ಅನುಮತಿ ಪಡೆಯಲು ವಿಫಲವಾದಲ್ಲಿ, ಈಗಾಗಲೇ ಕಟ್ಟಿರುವ ಎರಡೂವರೆ ಲಕ್ಷ ವಾಪಸ್ ಕೊಡಲ್ಲ ಅನ್ನೋ ಹೊಸ ನಿಯಮ ರೂಪಿಸಿದೆ. ಈ ಬಗ್ಗೆ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಎಲ್ಲಾ ನಿಯಮ ಪಾಲಿಸಿ ಅನುಮತಿ ಪಡೆಯಲು ವಿಫಲವಾದಲ್ಲಿ, ಈಗಾಗಲೇ ಕಟ್ಟಿರುವ ಎರಡೂವರೆ ಲಕ್ಷ ವಾಪಸ್ ಕೊಡಲ್ಲ ಅನ್ನೋ ಹೊಸ ನಿಯಮ ರೂಪಿಸಿದೆ. ರಾಜ್ಯದಲ್ಲಿ 6 ಸಾವಿರ ಅನುದಾನಿತ ಶಾಲೆಗಳು, 18 ಸಾವಿರ ಖಾಸಗಿ ಶಾಲೆಗಳಿವೆ. ಬೆಂಗಳೂರಿನಲ್ಲಿ 6 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿವೆ. ಇದರಲ್ಲಿರುವ ಜಾಗದಲ್ಲಿ ಬಜೆಟ್ ಖಾಸಗಿ ಶಾಲೆಗಳಿಗೆ ಫೈರ್ ಸೇಫ್ಟಿ ನಿಯಮ ಪಾಲನೆ ಕಷ್ಟಸಾಧ್ಯ. ಇದೇ ಕಾನೂನು ಮುಂದಿಟ್ಟುಕೊಂಡು ಶಾಲೆಗಳಿಂದ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಡುವ ಸಾಧ್ಯತೆಯಿದೆ. ಶಿಕ್ಷಣ ಇಲಾಖೆ ಹೊಸ ನಿಯಮ ಹಾಗೂ ವಿವಿಧ ಶುಲ್ಕಗಳ ದರವನ್ನು ಹೆಚ್ಚಳ ಮಾಡಿರುವುದು ಖಾಸಗಿ ಶಾಲೆಗಳಿಗೆ ನುಂಗಲಾರದ ತುತ್ತಾಗಿದೆ. ಸಿಬಿಎಸ್ಇ ಶಾಲೆಗಳಿಗೆ 5 ವರ್ಷಕ್ಕೊಮ್ಮೆ ನವೀಕರಣ ಇದ್ರೆ, ರಾಜ್ಯ ಪಠ್ಯಕ್ರಮದ ಶಾಲೆಗಳು ಪ್ರತಿವರ್ಷ ನವೀಕರಣದ ಕಿರುಕುಳ ನೀಡಲಾಗುತ್ತಿದೆ.
ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…
ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…
ಎಲ್‌ನಿನೋ ವಿದ್ಯಮಾನವು ಡಿಸೆಂಬರ್‌ನಲ್ಲಿ ಗರಿಷ್ಠ ತೀವ್ರತೆ ತಲುಪುವ ಸಾಧ್ಯತೆಯಿದ್ದು, 2027ರ ಫೆಬ್ರವರಿವರೆಗೆ ಮುಂದುವರಿಯಬಹುದು…
ಉಪ್ಪಿನಂಗಡಿಯ ಶ್ರೀರಾಮ ಶಾಲೆಯ ಬೆಳವಣಿಗೆಯಲ್ಲಿ ಯು.ಜಿ. ರಾಧ ಭಟ್ ಅವರು ಸುಮಾರು 18…
ಅಕ್ಟೋಬರ್ 11ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಮುಂದುವರಿಯುವ…
ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…