ರಾಜ್ಯದಲ್ಲಿ ಭೀಕರ ಬರ ಎದುರಾದ ಪರಿಣಾಮ ರೈತರು(Farmer) ಸಂಕಷ್ಟ ಎದರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (Central Government) ಬರ ಪರಿಹಾರ ಕೊಡುತ್ತಿಲ್ಲ. ಕೇಂದ್ರ ಮಲತಾಯಿ ಧೋರಣೆ ಮಾಡುತ್ತಿದ್ದು, ಮಧ್ಯಪ್ರವೇಶಿಸಿ ಬರ ಪರಿಹಾರ (Drought Relief Fund) ಬಿಡುಗಡೆ ಮಾಡಿಸುವಂತೆ ಸುಪ್ರೀಂ ಕೋರ್ಟ್ಗೆ (Supreme Court) ರಾಜ್ಯ ಸರ್ಕಾರ ಅರ್ಜಿ ಸಲ್ಲಿಕೆ ಮಾಡಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ (CM Siddaramaiah) ಮಾಹಿತಿ ನೀಡಿದರು. ರಾಜ್ಯ ಸರ್ಕಾರ (State Government) ಬಹಳ ದಿನಗಳ ಕಾಲ ಕಾದು ಅನಿವಾರ್ಯವಾಗಿ ಇಂದು ಸುಪ್ರೀಂಗೆ ರಿಟ್ ಪಿಟಿಷನ್ ಹಾಕಲಾಗಿದೆ. ಶನಿವಾರ ಬೆಳಗ್ಗೆ 9 ಗಂಟೆಗೆ ನಮ್ಮ ಅರ್ಜಿ ಫೈಲ್ ಆಗಿದೆ. ಕೇಂದ್ರ ಸರ್ಕಾರವು ತಕ್ಷಣವೇ ಎನ್ಡಿಆರ್ಎಫ್ ಹಣವನ್ನು (NDRF Fund) ಬಿಡುಗಡೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
223 ಬರಪೀಡಿತ ತಾಲೂಕಗಳ ಘೋಷಣೆ : ಕೇಂದ್ರ ಸರ್ಕಾರ ಅತಿವೃಷ್ಟಿ, ಅನಾವೃಷ್ಟಿ ಆದಾಗ ರಾಜ್ಯ ಸರ್ಕಾರಕ್ಕೆ ಸ್ಪಂದಿಸಬೇಕು. ಅದಕ್ಕಾಗಿ ವಿಪತ್ತು ನಿರ್ವಹಣೆ ಕಾಯ್ದೆ ತರಲಾಗಿದೆ. ಈ ಕಾಯ್ದೆ ಕೂಡ ಅದನ್ನೇ ಹೇಳುತ್ತದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, 223 ತಾಲೂಕನ್ನು ಬರಪೀಡಿತ ಅಂತ ಘೋಷಣೆ ಮಾಡಲಾಗಿದೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ,ತೋಟಗಾರಿಕಾ ಬೆಳೆ ನಷ್ಟವಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ರಾಜ್ಯದಿಂದ ಕೇಂದ್ರಕ್ಕೆ ಮೂರು ಮನವಿ ಸಲ್ಲಿಕೆ : ಇದುವರೆಗೂ ನಾವು ಕೇಂದ್ರ ಸರ್ಕಾರಕ್ಕೆ ಒಟ್ಟು ಮೂರು ಮನವಿಯನ್ನು ಕೊಟ್ಟಿದ್ದೇವೆ. ಮೊದಲನೇ ಮನವಿ ಕೊಟ್ಟ ಒಂದು ವಾರದಲ್ಲಿ ಕೇಂದ್ರದ ತಂಡ ಬರಬೇಕು ಅಂತಿದೆ. ರಾಜ್ಯಕ್ಕೆ ಬಂದ ತಂಡ ಕೇಂದ್ರಕ್ಕೆ ವರದಿ ನೀಡಿದೆ. ವರದಿ ಕೊಟ್ಟ ಒಂದು ತಿಂಗಳಲ್ಲಿ ರಾಜ್ಯಗಳಿಗೆ ಅನುದಾನ ಕೊಡಬೇಕು ಅಂತ ಕಾಯ್ದೆಯಲ್ಲಿದೆ. ಕೇಂದ್ರದ ತಂಡ ಅಕ್ಟೋಬರ್ 20ಕ್ಕೆ ವರದಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಪ್ರಧಾನಿಗೂ ಮನವಿ : ನಮ್ಮ ಕೃಷಿ, ತೋಟಗಾರಿಕಾ, ಗ್ರಾಮೀಣಾಭಿವೃದ್ಧಿ ಸಚಿವರು ದೆಹಲಿಗೆ ಹೋಗಿದ್ದಾರೆ. ಆದ್ರೆ ಭೇಟಿಗೆ ಸಿಗದ ಕಾರಣ ಅಧಿಕಾರಿಗಳಿಗೆ ವಿಚಾರ ಹೇಳಿದ್ದಾರೆ. ಹಾಗೇ ನಾನು ಪತ್ರವನ್ನು ಬರೆದಿದ್ದೇನೆ. ನಾನು ಪತ್ರ ಬರೆದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಡಿಸೆಂಬರ್ 19ಕ್ಕೆ ಭೇಟಿ ಮಾಡಿ, ಎನ್ಡಿಆರ್ಎಫ್ ಹಣ ಬಿಡುಗಡೆ ಮಾಡುವಂತೆ ಮಾಡಲಾಗಿತ್ತು. ಡಿಸೆಂಬರ್ 20ರಂದು ಅಮಿತ್ ಶಾ ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ವಿವರಿಸಲಾಗಿತ್ತು. ಆಗ ಡಿಸೆಂಬರ್ 23ರಂದು ಸಭೆ ಕರೆಯಲಾಗಿದ್ದು, ಅಲ್ಲಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುದು ಎಂದು ಹೇಳಿದ್ರು. ಪ್ರಧಾನಿಗಳು ಬೆಂಗಳೂರಿಗೆ ಬಂದಾಗ್ಲೂ ಈ ವಿಷಯವನ್ನು ಗಮನಕ್ಕೆ ತರಲಾಗಿತ್ತು ಎಂಬ ವಿಷಯವನ್ನು ತಿಳಿಸಿದರು.
After the government of Kerala, it is now the turn of Karnataka to knock on the doors of Supreme Court seeking a direction to the Centre to release funds to the State under the National Disaster Relief Fund (NDRF). “We have been anxiously waiting for the Narendra Modi regime to release funds to the State for drought relief and are now forced to move the apex court to come to our rescue,’’ disclosed Chief Minister Siddaramaiah on Saturday.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…