ಅಡಿಕೆ ಬೆಳೆ ವಿಸ್ತರಣೆ ಚರ್ಚೆ | ಭಾರತದಲ್ಲಿ ಅಡಿಕೆ ಗಿಡ ನಾಟಿ ನಿಷೇಧ ಹೇಳಿಕೆಗೆ ಮಿಜೋರಾಂನಲ್ಲಿ ವಿರೋಧ |

September 26, 2024
6:09 PM
ಮಿಜೋರಾಂ ಮುಖ್ಯಮಂತ್ರಿ ಅವರು ಭಾರತದಲ್ಲಿ ಅಡಿಕೆ ಬೆಳೆಗಳನ್ನು  ನಿಷೇಧಿಸುವ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ್ದರು. ಅದಲ್ಲದೆ ಅಡಿಕೆ ನೆಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದೂ ಹೇಳಿದ್ದರು. ಇದು ಚರ್ಚೆಗೆ ಕಾರಣವಾಗಿದೆ.

ದೇಶದಲ್ಲಿ ಅಡಿಕೆ ಕೃಷಿ ವಿಸ್ತರಣೆಯಾಗುತ್ತಿದೆ. ಕರ್ನಾಟಕ, ಕೇರಳ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಅಡಿಕೆ ಬೆಳೆ ವಿಸ್ತರಣೆಯಾಗಿ ಅಸ್ಸಾಂ, ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯದಲ್ಲೂ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ.  ಈ ನಡುವೆ ಭಾರತದಲ್ಲಿ ಅಡಿಕೆ ಬೆಳೆಯನ್ನು ಬೆಳೆಯನ್ನು ನಿಷೇಧಿಸುವ ಕುರಿತು ಮಿಜೋರಾಂ ಮುಖ್ಯಮಂತ್ರಿ  ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. ರಾಜ್ಯಸಭಾ ಸದಸ್ಯ ವನ್ಲಾಲ್ವೆನಾ ಅವರು ಈ ಬಗ್ಗೆ ವಿರೋಧಿಸಿದ್ದು, ಮುಖ್ಯಮಂತ್ರಿಗಳ ಹೇಳಿಕೆ ತಪ್ಪು ಮಾಹಿತಿ ಕಾರಣವಾಗಿದೆ ಎಂದಿದ್ದಾರೆ.…..ಮುಂದೆ ಓದಿ….

ದೇಶದಲ್ಲಿ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿರುವಂತೆಯೇ ಅಡಿಕೆ ಅಕ್ರಮ ಆಮದು ಕೂಡಾ ಹೆಚ್ಚಾಗಿದೆ. ಅದರ ಜೊತೆಗೆ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆ  ಮಿಶ್ರಣ ಮಾಡಿ  ಮಾರಾಟ ಮಾಡುವ ದಂಧೆಯೂ ನಡೆಯುತ್ತಿದೆ. ಅಕ್ರಮ ಅಡಿಕೆಯು ಮಿಜೋರಾಂ, ಅಸ್ಸಾಂ ಮೂಲಕವಾಗಿ ಭಾರತದ ಒಳಕ್ಕೆ ಬರುತ್ತಿದೆ. ಎರಡು ವರ್ಷಗಳಿಂದ ಅಕ್ರಮವಾಗಿ ಅಡಿಕೆ ಆಮದಾಗುತ್ತಿರುವುದನ್ನು ತಡೆಯಲು ಮಿಜೋರಾಂ ಸರ್ಕಾರ ಪ್ರಯತ್ನ ಮಾಡುತ್ತಿದೆ. ಹಾಗಿದ್ದರೂ ಅಡಿಕೆ ಆಮದು ನಡೆಯುತ್ತಿದೆ. ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ. ಈ ನಡುವೆ ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಅವರು ಭಾರತದಲ್ಲಿ ಅಡಿಕೆ ಬೆಳೆಗಳನ್ನು  ನಿಷೇಧಿಸುವ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದರು. ಅದಲ್ಲದೆ ಅಡಿಕೆ ನೆಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದೂ ಹೇಳಿದ್ದರು. ಇದು ಚರ್ಚೆಗೆ ಕಾರಣವಾಗಿದೆ.…..ಮುಂದೆ ಓದಿ….

ಮುಖ್ಯಮಂತ್ರಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ವನಲಾಲ್ವೇನ ಅವರು, ಕೇಂದ್ರ ಕೃಷಿ ಸಚಿವ ಶಿವರಾಜ್ ಕುಮಾರ್ ಚೌಹಾಣ್ ಅವರನ್ನು ತಕ್ಷಣವೇ ಭೇಟಿಯಾಗಿ ಈ ಬಗ್ಗೆ ಮಾಹಿತಿ ಪಡೆದು ಖಂಡಿಸಿದ್ದಾರೆ. ಈ ಸುದ್ದಿಯಿಂದ ರೈತರು ಕಂಗಾಲಾಗಿದ್ದಾರೆ ಮತ್ತು ಅಂತಹ ಯಾವುದೇ ಆದೇಶವನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

ವನಲಾಲ್ವೆನಾ ಅವರ ಪ್ರಕಾರ, ಅಡಿಕೆ ಗಿಡ ನೆಡುವುದನ್ನು ನಿಷೇಧಿಸುವ ಯಾವುದೇ ನಿರ್ದೇಶನವನ್ನು ಕೇಂದ್ರ ಸರ್ಕಾರ ಹೊರಡಿಸಿಲ್ಲ. ಕೃಷಿ ಸಚಿವ ಚೌಹಾಣ್ ಅವರು ಸ್ಪಷ್ಟಪಡಿಸಿದ್ದಾರೆ. ಯಾವ ಇಲಾಖೆಗಳೂ ಈ ಬಗ್ಗೆ ದೃಢಪಡಿಸಿಲ್ಲ, ಧೈರ್ಯವಾಗಿ ಮಿಜೋರಾಂನಲ್ಲಿ ಅಡಿಕೆಯನ್ನು ಕೃಷಿಕರು ಬೆಳೆಯಬಹುದು ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಬೇಕು ಮತ್ತು ರೈತರು ಅಡಿಕೆ ಬೆಳೆಯನ್ನು ನೆಡುವುದನ್ನು ನಿರ್ಬಂಧಿಸುವುದಿಲ್ಲ ಎಂದು ಸಾರ್ವಜನಿಕರಿಗೆ ಭರವಸೆ ನೀಡಬೇಕು ಎಂದು ವನಲಾಲ್ವೇನಾ ಒತ್ತಾಯಿಸಿದ್ದಾರೆ. (Source : EM News)

Arecanut cultivation is on the rise across the country, not only in Karnataka, Kerala, Tamil Nadu, and Andhra Pradesh, but also in the North Eastern states like Assam and Mizoram. The recent statement by the Chief Minister of Mizoram proposing a ban on Arecanut cultivation in India has sparked a debate. Rajya Sabha member Vanlalvena objected to this statement, stating that the Chief Minister’s remarks were based on misinformation.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!
July 15, 2026
9:49 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?
July 15, 2026
2:10 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?
July 15, 2026
7:02 AM
by: ದ ರೂರಲ್ ಮಿರರ್.ಕಾಂ
ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror