ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿ | ಕಲ್ಲೇರಿ ಸೇತುವೆ ಉದ್ಘಾಟನೆ | ರಸ್ತೆ ಚರಂಡಿಗೆ ಬೇಕಿದೆ ಕಾಯಕಲ್ಪ |

June 12, 2022
8:23 PM

ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯ ನಿಂತಿಕಲ್ ಸಮೀಪದ ಕಲ್ಲೇರಿ ಅಪಘಾತ ವಲಯದಲ್ಲಿ ರೂ. 1.25 ಕೋಟಿ ಅನುದಾನದಲ್ಲಿ ನೂತನವಾಗಿ ನಿರ್ಮಾಣವಾದ ಸೇತುವೆಯನ್ನು ಭಾನುವಾರ ಸಚಿವ ಎಸ್‌ ಅಂಗಾರ ಉದ್ಘಾಟಿಸಿದರು.  

ಅಪಘಾತ ವಲಯವಾಗಿ ಹಲವು ಸಮಯಗಳಿಂದ ಗಮನ ಸೆಳೆದಿದ್ದ ಈ ಪ್ರದೇಶದಲ್ಲಿ ನೂತನವಾಗಿ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣವಾಗಿ ಸಾರ್ವಜನಿಕ ಉಪಯೋಗಕ್ಕೆ ತೆರೆದುಕೊಂಡಿದೆ. ಕಾಮಗಾರಿ ಮುಗಿದರೂ ವಾಹನ ಸಂಚಾರಕ್ಕೆ ಮುಕ್ತವಾಗಿರಲಿಲ್ಲ. ಈಚೆಗೆ ರಸ್ತೆ ತಡೆಗೆ ಇರಿಸಿದ್ದ ಮರಳಿನ ಚೀಲದಿಂದಲೇ ಅಪಾಯ ಉಂಟಾದ ವೇಳೆ ಸ್ಥಳೀಯರು ಇಲಾಖೆಯನ್ನು ಎಚ್ಚರಿಸಿದ್ದರು. ಇದೀಗ ಸೇತುವೆ ಹಾಗೂ ರಸ್ತೆ ಉದ್ಘಾಟನೆಗೊಂಡಿದೆ. ಉದ್ಘಾಟನೆ ವೇಳೆ ಸ್ಥಳೀಯ ಮುಖಂಡರು, ಇಲಾಖಾ ಅಧಿಕಾರಿಗಳು ಇದ್ದರು.

ಸುಬ್ರಹ್ಮಣ್ಯ – ಮಂಜೇಶ್ವರ ಹೆದ್ದಾರಿಯಲ್ಲಿ ಪುತ್ತೂರು ವಿಭಾಗದ ಲೋಕೋಪಯೋಗಿ ಇಲಾಖೆಯ ವತಿಯಿಂದ ಈಗಾಗಲೇ ರಸ್ತೆ ಚರಂಡಿ ದುರಸ್ತಿ ಹಾಗೂ ರಸ್ತೆಯಲ್ಲಿ ನೀರು ಹೋಗುವುದರ ತಡೆಗೆ ಕೆಲಸಗಳನ್ನು ಮಾಡಲಾಗುತ್ತಿದೆ. ರಸ್ತೆಯ ಅಲ್ಲಲ್ಲಿ ಎಚ್ಚರಿಕಾ ಫಲಕ, ಹಂಪ್‌ ನಿರ್ಮಾಣ ಸೇರಿದಂತೆ ರಸ್ತೆಯ ಬದಿಗೆ ಎಚ್ಚರಿಕೆಯ ಗುರುತುಗಳನ್ನು ಅಳವಡಿಸಲಾಗಿದೆ. ಆದರೆ ಸುಳ್ಯ ವಿಭಾಗದಲ್ಲಿ ಅಂತಹ ಯಾವುದೇ ದುರಸ್ತಿ, ಎಚ್ಚರಿಕಾ ಫಲಕಗಳು ಕಾಣಿಸುತ್ತಿಲ್ಲ. ಮಳೆಗಾಲ ಜೋರಾಗಿ ಆರಂಭವಾಗುವ ಮೊದಲು ರಸ್ತೆ ಚರಂಡಿ ವ್ಯವಸ್ಥೆ ಸರಿ ಮಾಡಬೇಕು ಎಂದು ಸಾರ್ವಜನಿಕರು  ಇದೇ ವೇಳೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!
April 3, 2026
11:59 AM
by: ದ ರೂರಲ್ ಮಿರರ್.ಕಾಂ
ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!
April 3, 2026
8:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror