ಸುಳ್ಯದ ಜನತೆಗೆ ಶುಭ ಸುದ್ದಿ ಕೇಳಿಬಂದಿದೆ. ಸುಳ್ಯದ ಜನರ ಬಹುಕಾಲದ ಬೇಡಿಕೆಯಾಗಿದ್ದ 110 ಕೆವಿ ಸಬ್ ಸ್ಟೇಶನ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಜ.10 ರಂದು ಸುಳ್ಯದಲ್ಲಿ ಶಂಕುಸ್ಥಾಪನೆ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವ ಎಸ್ ಅಂಗಾರ, ಸುಳ್ಯದ 110 ಕೆವಿ ಸಬ್‌ಸ್ಟೇಷನ್ ನಿರ್ಮಾಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಜನವರಿ 10 ರಂದು ಶಂಕುಸ್ಥಾಪನೆ ನಡೆಯಲಿದೆ. ಸುಳ್ಯದ ವಿದ್ಯುತ್ ಸಬ್ ಸ್ಟೇಷನ್ ಬಳಿಯಲ್ಲಿ ಇಂಧನ ಸಚಿವರಾದ ವಿ.ಸುನಿಲ್ ಕುಮಾರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.ಮಾಡಾವಿನಿಂದ ಸುಳ್ಯಕ್ಕೆ 110 ಕೆವಿ ಲೈನ್ ಕಾರಿಡಾರ್ 22 ಕಿ.ಮಿ.ಉದ್ದವಿದೆ. ಇದರಲ್ಲಿ 1.8 ಕಿ.ಮಿ. ಲೈನ್ ಇದೆ. ಹೊಸತಾಗಿ 19.2 ಕಿ.ಮಿ. ಲೈನ್ ಮತ್ತು ಸುಳ್ಯದಲ್ಲಿ ಹೊಸ ಸಬ್ ಸ್ಟೇಷನ್ ನಿರ್ಮಾಣ ಆಗಲಿದೆ. ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. ಕಾಮಗಾರಿ ಪೂರ್ತಿಯಾಗಲು 12 ತಿಂಗಳ ಕಾಲಾವಕಾಶ ಇದೆ. ಮಾಡಾವು-ಕೊಳ್ತಿಗೆ, ಪೆರ್ಲಂಪಾಡಿ, ಮೂಲಕ ಕನಕಮಜಲು ಜಾಲ್ಸೂರು ಬೈತ್ತಡ್ಕ-ಅಜ್ಜಾವರ ಮೂಲಕ ಹೊಸ ಲೈನ್ ಹಾದು ಬರಲಿದೆ. ಈಗಿನ ಮೆಸ್ಕಾಂ 33 ಕೆವಿ ಸಬ್ ಸ್ಟೇಷನ್ ಸಮೀಪ ಹೊಸ 110 ಸಬ್ ಸ್ಟೇಷನ್ ನಿರ್ಮಾಣ ಆಗಲಿದೆ. 22 ಮೀಟರ್‌ನ ಕಾರಿಡಾರ್ ನಿರ್ಮಾಣವಾಗಲಿದೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…