ಸುಳ್ಯ | ಆಮ್‌ ಆದ್ಮಿ ಪಕ್ಷದ ವತಿಯಿಂದ ಸುಳ್ಯದಾದ್ಯಂತ ಬೃಹತ್‌ ರೋಡ್‌ ಶೋ | ಕೊನೆಯ ಕ್ಷಣದಲ್ಲಿ ಸುಳ್ಯದಲ್ಲಿ ಸದ್ದು ಮಾಡಿದ ಎಎಪಿ |

May 8, 2023
11:26 AM

ಸುಳ್ಯವಿಧಾನಸಭಾ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷವು ಬೃಹತ್‌ ರೋಡ್‌ ಶೋ ಆರಂಭಿಸಿದೆ. ಸುಳ್ಯ ಕ್ಷೇತ್ರದಾದ್ಯಂತ ಬೃಹತ್‌ ರೋಡ್‌ ಶೋ ನಡೆಸುವ ಮೂಲಕ ಕ್ಷೇತ್ರದಾದ್ಯಂತ ಸಂಚಲನ ಮೂಡಿಸಿದೆ. ಸಂಪಾಜೆಯಿಂದ ಆರಂಭಿಸಿ ಕ್ಷೇತ್ರದಾದ್ಯಂತ ಸಂಚಲನ ಮೂಡಿಸಿದೆ.

ಆಮ್‌ ಆದ್ಮಿ ಪಕ್ಷವು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಪ್ರಚಾರ ನಡೆಸಿದ ಪಕ್ಷಗಳಲ್ಲಿ  ಒಂದಾಗಿದೆ. ಸದ್ದಿಲ್ಲದೆ ಕ್ಷೇತ್ರದಲ್ಲಿ ಕಳೆದ ಒಂದು ತಿಂಗಳಿನಿಂದ ಕೆಲಸ ಆರಂಭ ಮಾಡಿತ್ತು. ಅತೀ ಹೆಚ್ಚು ಮತದಾರರನ್ನು  ಸಂಪರ್ಕ ಮಾಡಿದೆ. ರೋಡ್‌ ಶೋ, ಕಾರ್ನರ್‌ ಸಭೆ, ಮತದಾರರ ಭೇಟಿ, ಸಾಮಾಜಿಕ ಜಾಲತಾಣ ಹೀಗೇ ಎಲ್ಲಾ ರೀತಿಯಿಂದಲೂ ಮತದಾರರನ್ನು ಸಂಪರ್ಕ ಮಾಡಿತ್ತು. ಅಭಿವೃದ್ಧಿಯ ಮೂಲಕ ಸುಳ್ಯದಲ್ಲಿ ಬದಲಾವಣೆಯನ್ನು ಬಯಸಿತ್ತು. ಗೆದ್ದರೂ ಸೋತರೂ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದೆ.  ಇದೀಗ ಸಂಪಾಜೆಯಿಂದ ಆರಂಭಿಸಿ ಬೃಹತ್‌ ರೋಡ್‌ ಶೋ ಸುಳ್ಯ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ಬೆಳ್ಳಾರೆ, ಸವಣೂರು ಹೀಗೇ ಸಂಪೂರ್ಣ ಕ್ಷೇತ್ರದಾದ್ಯಂತ ಮಿಂಚಿತ ಸಂಚಾರ ಮಾಡುವ ಮೂಲಕ ಎಎಪಿ ಸುಳ್ಯದಲ್ಲಿ ಸದ್ದು ಮಾಡಿದೆ.

ಎಎಪಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್‌ ಅವರು ತೆರದ ವಾಹನದಲ್ಲಿ ಮತಯಾಚನೆ ಮಾಡುತ್ತಾ ಸಾಗಿಸಿದರು. ಪಕ್ಷದ ಪ್ರಮುಖರು ವಾಹನದ ಜೊತೆ ಸಾಗಿದರು. 15ಕ್ಕೂ ಹೆಚ್ಚು ವಾಹನ, 500 ಕ್ಕೂ ಅಧಿಕ ಎಎಪಿ ಕಾರ್ಯಕರ್ತರು ಜೊತೆಗಿದ್ದರು.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ
October 13, 2026
10:15 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror