ಸುಳ್ಯವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷವು ಬೃಹತ್ ರೋಡ್ ಶೋ ಆರಂಭಿಸಿದೆ. ಸುಳ್ಯ ಕ್ಷೇತ್ರದಾದ್ಯಂತ ಬೃಹತ್ ರೋಡ್ ಶೋ ನಡೆಸುವ ಮೂಲಕ ಕ್ಷೇತ್ರದಾದ್ಯಂತ ಸಂಚಲನ ಮೂಡಿಸಿದೆ. ಸಂಪಾಜೆಯಿಂದ ಆರಂಭಿಸಿ ಕ್ಷೇತ್ರದಾದ್ಯಂತ ಸಂಚಲನ ಮೂಡಿಸಿದೆ.
ಆಮ್ ಆದ್ಮಿ ಪಕ್ಷವು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಪ್ರಚಾರ ನಡೆಸಿದ ಪಕ್ಷಗಳಲ್ಲಿ ಒಂದಾಗಿದೆ. ಸದ್ದಿಲ್ಲದೆ ಕ್ಷೇತ್ರದಲ್ಲಿ ಕಳೆದ ಒಂದು ತಿಂಗಳಿನಿಂದ ಕೆಲಸ ಆರಂಭ ಮಾಡಿತ್ತು. ಅತೀ ಹೆಚ್ಚು ಮತದಾರರನ್ನು ಸಂಪರ್ಕ ಮಾಡಿದೆ. ರೋಡ್ ಶೋ, ಕಾರ್ನರ್ ಸಭೆ, ಮತದಾರರ ಭೇಟಿ, ಸಾಮಾಜಿಕ ಜಾಲತಾಣ ಹೀಗೇ ಎಲ್ಲಾ ರೀತಿಯಿಂದಲೂ ಮತದಾರರನ್ನು ಸಂಪರ್ಕ ಮಾಡಿತ್ತು. ಅಭಿವೃದ್ಧಿಯ ಮೂಲಕ ಸುಳ್ಯದಲ್ಲಿ ಬದಲಾವಣೆಯನ್ನು ಬಯಸಿತ್ತು. ಗೆದ್ದರೂ ಸೋತರೂ ಕ್ಷೇತ್ರದ ಜನರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದೆ. ಇದೀಗ ಸಂಪಾಜೆಯಿಂದ ಆರಂಭಿಸಿ ಬೃಹತ್ ರೋಡ್ ಶೋ ಸುಳ್ಯ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ಬೆಳ್ಳಾರೆ, ಸವಣೂರು ಹೀಗೇ ಸಂಪೂರ್ಣ ಕ್ಷೇತ್ರದಾದ್ಯಂತ ಮಿಂಚಿತ ಸಂಚಾರ ಮಾಡುವ ಮೂಲಕ ಎಎಪಿ ಸುಳ್ಯದಲ್ಲಿ ಸದ್ದು ಮಾಡಿದೆ.
ಎಎಪಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಅವರು ತೆರದ ವಾಹನದಲ್ಲಿ ಮತಯಾಚನೆ ಮಾಡುತ್ತಾ ಸಾಗಿಸಿದರು. ಪಕ್ಷದ ಪ್ರಮುಖರು ವಾಹನದ ಜೊತೆ ಸಾಗಿದರು. 15ಕ್ಕೂ ಹೆಚ್ಚು ವಾಹನ, 500 ಕ್ಕೂ ಅಧಿಕ ಎಎಪಿ ಕಾರ್ಯಕರ್ತರು ಜೊತೆಗಿದ್ದರು.
ನಾವೊಂದು ಯೋಚನೆ ಮಾಡಿದ್ದೇವೆ. ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ…
ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ ಒಂದು ಶುಭಕರವಾದ ಮತ್ತು ಧನವೃದ್ಧಿಯ ತತ್ವವನ್ನು ಸಾರುವ…
ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…
ಈ ವರ್ಷ ವಿಶೇಷವಾಗಿ ಗಮನ ಸೆಳೆದ ಕ್ಷೇತ್ರ ಕೊಟ್ಟಿಯೂರ್ ಅಥವಾ ತೃಚ್ಚೇರುಮನ ಕ್ಷೇತ್ರ…
ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನಲ್ಲಿ ಗಣನೀಯ ಏರಿಕೆಯಾಗಿದ್ದು, ಪ್ರಸಕ್ತ ಜಲಾಶಯದಲ್ಲಿ 77.144…