ಚುನಾವಣಾ ಕಣ | ಸುಳ್ಯದಲ್ಲಿ ಆಮ್‌ ಆದ್ಮಿ ಪಕ್ಷದಿಂದ ಭರ್ಜರಿ ಪ್ರಚಾರ |

May 5, 2023
2:54 PM
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಆಮ್‌ ಆದ್ಮಿ ಪಕ್ಷವು ಮೊದಲ ಬಾರಿಗೆ ಸ್ಫರ್ಧೆ ನಡೆಸುತ್ತಿದೆ. ಚುನಾವಣೆ ಘೋಷಣೆಯಾಗುವ ಹೊತ್ತಿಗೇ ಅಭ್ಯರ್ಥಿ ಘೋಷಣೆ ಮಾಡಿ ಪ್ರಚಾರ ಆರಂಭಿಸಿದ ಆಮ್‌ ಆದ್ಮಿ ಪಕ್ಷವು ಈ ಬಾರಿ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ನಡೆಸುತ್ತಿದೆ. ಗ್ರಾಮೀಣ ಭಾಗಗಳಲ್ಲೂ ತಮ್ಮ ಪ್ರಚಾರ ವಾಹನದೊಂದಿಗೆ ತೆರಳಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್‌ ಅವರು ಮತಯಾಚನೆ ಮಾಡುತ್ತಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಆಮ್‌ ಆದ್ಮಿ ಪ್ರಚಾರ ವಾಹನ ಓಡಾಟ ನಡೆಸುತ್ತಿದೆ.
ಆಮ್ ಆದ್ಮಿ ಪಾಟ್ಯಿ ಅಭ್ಯರ್ಥಿಯಾಗಿರುವ  ಸುಮನ ಬೆಳ್ಳಾರ್ಕರ್  ಅವರು ಪೈಚಾರಿನಿಂದ ಗಾಂಧಿನಗರ ತನಕ ಸುಳ್ಯ ನಗರದಲ್ಲಿ ರೋಡ್ ಶೊ ನಡೆಸಿ ಮತಯಾಚನೆ ನಡೆಸಿದರು. ಅದಾದ ಬಳಿಕ ಗುತ್ತಿಗಾರು, ಪಂಜ, ಸಂಪಾಜೆ , ಬೆಳ್ಳಾರೆ, ಕಡಬ , ನೆಲ್ಯಾಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾರ್ನರ್‌ ಮೀಟಿಂಗ್‌ ಮತಯಾನೆ ನಡೆಸುತ್ತಿದ್ದಾರೆ. ಹೀಗಾಗಿ ಮೊದಲ ಸ್ಫರ್ಧೆಯಲ್ಲಿಯೇ ಗ್ರಾಮೀಣ ಭಾಗದವರೆಗೂ ಆಮ್‌ ಆದ್ಮಿ ಪಕ್ಷವು ತಲಪಿದೆ.
ಪ್ರಚಾರ ಸಭೆಯಲ್ಲಿ ಆಮ್‌ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಅಶೋಕ್ ಎಡಮಲೆ, ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಲಿನ್ಸ್, ಜಿಲ್ಲಾ  ಮುಖಂಡರುಗಳಾದ ವೇಣುಗೋಪಾಲ ಪುಚ್ಚಪ್ಪಾಡಿ, ಮೈಕಲ್ ಡಿಸೊಜಾ, ಪಕ್ಷದ ಪ್ರಮುಖರಾದ ರಶೀದ ಜಟ್ಟಿಪಳ್ಳ, ಖಲಂದರ್ ಎಲಿಮಲೆ, ಗುರು ಪ್ರಸಾದ್ ಮೇರ್ಕಜೆ, ರಾಮಕೃಷ್ಣ ಬೀರಮಂಗಲ, ಗಣೇಶ್‌ ಪ್ರಸಾದ್‌ ಕಂದಡ್ಕ, ಶಾಫಿ ಹಳೆಗೇಟು, ಸಂಶುದ್ದೀನ್ ಕೆ.ಎಂ ಸುರೇಶ್ ಮುಂಡಕಜೆ ಮೊದಲಾದವರು ಭಾಗವಹಿಸಿದರು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡು ತಪ್ಪಲಲ್ಲಿ ಧಾರಾಕಾರ ಮಳೆ – ಹಲವು ಕಡೆ ಕೆಲವೇ ಗಂಟೆಯಲ್ಲಿ 100 ಮಿಮೀ ದಾಟಿದ ಮಳೆ
August 25, 2026
1:40 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |25-08-2026 | ಕರಾವಳಿ, ಮಲೆನಾಡಿನಲ್ಲೂ ಬಿಡುವಿನ ಅವಧಿ ಹೆಚ್ಚಳ -ಕೆಲವೆಡೆ ಉತ್ತಮ ಮಳೆ – ರಾಜ್ಯದಲ್ಲಿ ಮಳೆ ಪರಿಸ್ಥಿತಿ ಹೇಗೆ..?
August 25, 2026
1:04 PM
by: ಸಾಯಿಶೇಖರ್ ಕರಿಕಳ
ಕರಾವಳಿಗೆ ವಾಡಿಕೆ ಮಳೆ, ಮಲೆನಾಡು ದಾಟದ ಮುಂಗಾರು ಮೋಡ..!
August 25, 2026
12:13 PM
by: ದ ರೂರಲ್ ಮಿರರ್.ಕಾಂ
ಬೆಲೆ ಏರಿಕೆಯನ್ನಷ್ಟೇ ನೋಡುವುದಲ್ಲ ; ಮುಂದಿನ ಮಾರುಕಟ್ಟೆಯನ್ನು ನಿರ್ಮಿಸುವ ಕಾಲ
August 25, 2026
10:38 AM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror