ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷವು ಮೊದಲ ಬಾರಿಗೆ ಸ್ಫರ್ಧೆ ನಡೆಸುತ್ತಿದೆ. ಚುನಾವಣೆ ಘೋಷಣೆಯಾಗುವ ಹೊತ್ತಿಗೇ ಅಭ್ಯರ್ಥಿ ಘೋಷಣೆ ಮಾಡಿ ಪ್ರಚಾರ ಆರಂಭಿಸಿದ ಆಮ್ ಆದ್ಮಿ ಪಕ್ಷವು ಈ ಬಾರಿ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ನಡೆಸುತ್ತಿದೆ. ಗ್ರಾಮೀಣ ಭಾಗಗಳಲ್ಲೂ ತಮ್ಮ ಪ್ರಚಾರ ವಾಹನದೊಂದಿಗೆ ತೆರಳಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಅವರು ಮತಯಾಚನೆ ಮಾಡುತ್ತಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಆಮ್ ಆದ್ಮಿ ಪ್ರಚಾರ ವಾಹನ ಓಡಾಟ ನಡೆಸುತ್ತಿದೆ.
ಆಮ್ ಆದ್ಮಿ ಪಾಟ್ಯಿ ಅಭ್ಯರ್ಥಿಯಾಗಿರುವ ಸುಮನ ಬೆಳ್ಳಾರ್ಕರ್ ಅವರು ಪೈಚಾರಿನಿಂದ ಗಾಂಧಿನಗರ ತನಕ ಸುಳ್ಯ ನಗರದಲ್ಲಿ ರೋಡ್ ಶೊ ನಡೆಸಿ ಮತಯಾಚನೆ ನಡೆಸಿದರು. ಅದಾದ ಬಳಿಕ ಗುತ್ತಿಗಾರು, ಪಂಜ, ಸಂಪಾಜೆ , ಬೆಳ್ಳಾರೆ, ಕಡಬ , ನೆಲ್ಯಾಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾರ್ನರ್ ಮೀಟಿಂಗ್ ಮತಯಾನೆ ನಡೆಸುತ್ತಿದ್ದಾರೆ. ಹೀಗಾಗಿ ಮೊದಲ ಸ್ಫರ್ಧೆಯಲ್ಲಿಯೇ ಗ್ರಾಮೀಣ ಭಾಗದವರೆಗೂ ಆಮ್ ಆದ್ಮಿ ಪಕ್ಷವು ತಲಪಿದೆ.
ಪ್ರಚಾರ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಅಶೋಕ್ ಎಡಮಲೆ, ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಲಿನ್ಸ್, ಜಿಲ್ಲಾ ಮುಖಂಡರುಗಳಾದ ವೇಣುಗೋಪಾಲ ಪುಚ್ಚಪ್ಪಾಡಿ, ಮೈಕಲ್ ಡಿಸೊಜಾ, ಪಕ್ಷದ ಪ್ರಮುಖರಾದ ರಶೀದ ಜಟ್ಟಿಪಳ್ಳ, ಖಲಂದರ್ ಎಲಿಮಲೆ, ಗುರು ಪ್ರಸಾದ್ ಮೇರ್ಕಜೆ, ರಾಮಕೃಷ್ಣ ಬೀರಮಂಗಲ, ಗಣೇಶ್ ಪ್ರಸಾದ್ ಕಂದಡ್ಕ, ಶಾಫಿ ಹಳೆಗೇಟು, ಸಂಶುದ್ದೀನ್ ಕೆ.ಎಂ ಸುರೇಶ್ ಮುಂಡಕಜೆ ಮೊದಲಾದವರು ಭಾಗವಹಿಸಿದರು
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel