ಸುಳ್ಯದಲ್ಲಿ ಗೋಶಾಲೆ ನಿರ್ಮಾಣವಾಗಬೇಕು. ಹೀಗೊಂದು ಬೇಡಿಕೆ ಕಳೆದ 10 ವರ್ಷಗಳಿಂದ ಇದೆ. ಹಾಗಿದ್ದರೂ ಆಡಳಿತಗಳು ಏಕೆ ಮೌನ ವಹಿಸಿವೆ ? ಹೀಗೆ ಪ್ರಶ್ನೆ ಕೇಳಿರುವುದು ಕೊಡಿಯಾಲ ಬೈಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸೀತಾರಾಮ ನಾಯಕ್…!. ಕಳೆದ 10 ವರ್ಷಗಳ ಬೇಡಿಕೆ, ಹೋರಾಟಕ್ಕೆ ಬೆಲೆಯೇ ಸಿಕ್ಕಿಲ್ಲ…!. ಗೋಮಳ ಇದ್ದರೂ ಪಶುಸಂಗೋಪನಾ ಇಲಾಖೆಗಳು ಮೌನವಾಗಿವೆ…!
ಗೋಮಾತೆಯ ರಕ್ಷಣೆ ನಿತ್ಯವೂ ನಡೆಯುತ್ತಿದೆ. ಅಕ್ರಮವಾಗಿ ಗೋಸಾಗಾಟ ನಡೆಸುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಗೋಪ್ರೇಮಿಗಳು ಗೋರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಲೇ ಇರುತ್ತಾರೆ. ಹೀಗೆ ಗೋರಕ್ಷಣೆಯ ಬಳಿಕ ಗೋವುಗಳನ್ನು ಏನು ಮಾಡುವುದು ಎನ್ನುವ ಪ್ರಶ್ನೆಯ ನಡುವೆಯೇ ಗೋಶಾಲೆಯ ಬೇಡಿಕೆ ಕಳೆದ ಹತ್ತಾರು ವರ್ಷಗಳಿಂದ ಇದೆ. ಕೃಷಿರಲ್ಲೂ ಹೋರಿ ಕರುಗಳು ಇದ್ದರೆ ಏನು ಮಾಡುವುದು ಎನ್ನುವ ಪ್ರಶ್ನೆಗಳಿಗೂ ಉತ್ತರವಿಲ್ಲ. ಕೆಲವರು ದೂರದ ಗೋಶಾಲೆಗಳಿಗೆ ತಲುಪಿಸಿದರೆ ಇನ್ನೂ ಕೆಲವರು ಸಾಕುವ ಹೆಸರಿನಲ್ಲಿ ಯಾರ್ಯಾರಿಗೋ ಕೊಡಬೇಕಾದ್ದು ಅನಿವಾರ್ಯವೂ ಆಗಿದೆ. ಇಂತಹ ಸಂದರ್ಭದಲ್ಲಿ ಸುಳ್ಯದ ಕೊಡಿಯಾಲಬೈಲು ಹಾಲು ಉತ್ಪಾದರ ಸಹಕಾರಿ ಸಂಘವು ಕಳೆದ 10 ವರ್ಷಗಳಿಂದ ಗೋಶಾಲೆ ನಿರ್ಮಾಣದ ಕಡೆಗೆ ಬೇಡಿಕೆ, ಹೋರಾಟ ನಡೆಸುತ್ತಲೇ ಇದೆ. ಕಂದಾಯ ಇಲಾಖೆ ಸಹಿತ ಪಶುಸಂಗೋಪನಾ ಇಲಾಖೆಗೂ ಮನವಿ ಮಾಡಿದೆ. ಜಾಗ ಮಂಜೂರು ಕೂಡಾ ಆಗಿದೆ. ಗೋಮಳ ಇದೆ, ಅದರಲ್ಲಿ ಕನಿಷ್ಟ ಹತ್ತು ಎಕರೆ ಸಹಕಾರಿ ಸಂಘಕ್ಕೆ ನೀಡಿ, ಕೆಎಂಎಫ್ ಸಹಿತ ಗೋಪ್ರೇಮಿಗಳ ನೆರವಿನಿಂದ ಗೋಶಾಲೆ ಮಾಡುತ್ತೇವೆ ಎಂದೂ ಹೇಳಿತ್ತು. ಆದರೂ ಗೋಶಾಲೆ ತೆರೆಯಲು ಸಾಧ್ಯವಾಗಿಲ್ಲ.
2008 ರಲ್ಲಿ ಗೋಮಳ ಜಾಗದಲ್ಲಿ ಗೋಶಾಲೆಗೆ ಎಂದು 7ಎಕ್ರೆಯಷ್ಟು ಜಾಗವನ್ನು ಮೀಸಲಿಡಲಾಗಿತ್ತು. ಅದಾಗಿ ಹಲವು ಪ್ರಯತ್ನ ನಡೆದರೂ ಸಾಧ್ಯವಾಗಿಲ್ಲ. ಶಾಸಕ ಅಂಗಾರ ಅವರೂ ಈ ಹಿಂದೆ ಪತ್ರ ಬರೆದಿದ್ದರು. 2021 ರಲ್ಲಿ ಸಚಿವ ಎಸ್ ಅಂಗಾರ ಅವರು ಕೊಡಿಯಾಲಬೈಲು ಹಾಲು ಉತ್ಪಾದಕರ ಸಹಕಾರಿ ಸಂಘದ ಮನವಿಯ ಮೇರೆಗೆ ಮತ್ತೆ ಪಶುಸಂಗೋಪನಾ ಇಲಾಖೆಗೆ ಪತ್ರ ಬರೆದು ಜಮೀನು ಕಾಯ್ದಿರಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆಯನ್ನೂ ನೀಡಿದ್ದಾರೆ.
ಸುಮಾರು 10 ವರ್ಷದ ಹಿಂದೆ ಪುತ್ತೂರು-ಸುಳ್ಯ ನಡುವೆ ಅಕ್ರಮ ಗೋಸಾಗಾಟ ತಡೆಯುವ ವೇಳೆ ಸುಳ್ಯದ ಯುವಕನೊಬ್ಬ ಮೃತಪಟ್ಟಿದ್ದ , ಈ ಸಂದರ್ಭ ಅವರದೇ ಊರಿನಲ್ಲಿ ಗೋಶಾಲೆ ತೆರೆಯುವ ಬಗ್ಗೆಯೂ ಭರವಸೆ ಕೇಳಿಬಂದಿತ್ತು. ಆದರೆ 10 ವರ್ಷಗಳ ನಂತರವೂ ಈ ಕನಸು ಈಡೇರಿಲ್ಲ. ಗೋಪ್ರೇಮಿಗಳೇ ಇರುವ ನಾಡಿನಲ್ಲಿ ಗೋಶಾಲೆಯನ್ನು ತೆರೆಯಲು ಆಗದೇ ಇರುವುದು ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘವೇ ಅದರ ನೇತೃತ್ವ ವಹಿಸಿಕೊಂಡರೂ ಸರ್ಕಾರ, ಆಡಳಿತ ಸ್ಪಂದಿಸದೇ ಇರುವುದು ವಿಪರ್ಯಾಸವೇ ಸರಿ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…