ಪುಟ್ಟ ಹಳ್ಳಿಯ ಸ್ವಚ್ಛತಾ ಅಭಿಯಾನದ ಕಾರ್ಯ ಮುಂದುವರಿದಿದೆ. ಆರನೇ ವಾರದ ಸ್ವಚ್ಚ ಗ್ರಾಮ ಗುತ್ತಿಗಾರು ಟಾಸ್ಕ್ ಫೋರ್ಸ್ ಕೆಲಸವು ಗುರುವಾರ ನಡೆಯಿತು. ಈ ಅಭಿಯಾನಕ್ಕೆ ಹೂವಿನ ಅಂಗಡಿಯ ವಿಕಲಚೇತನ ಸಿದ್ದಣ್ಣ ಅವರು ತಮ್ಮ ಅಂಗಡಿಯ ಮುಂದೆ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಅಭಿಯಾನಕ್ಕೆ ಕೈಜೋಡಿಸಿದರು. ಇದೇ ಸಂದರ್ಭ ಜೀಪು ಚಾಲಕ ಮಾಲಕರು ಕೂಡಾ ಅಭಿಯಾನದ ಜೊತೆ ಸೇರಿಕೊಂಡರು. ಗುರುವಾರದ ಸ್ವಚ್ಚತಾ ಅಭಿಯಾನದಲ್ಲಿ ಸ್ವಚ್ಚತೆಯೊಂದಿಗೆ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಅಭಿಯಾನವನ್ನು ಮುಂದುವರಿಸಲಾಯಿತು.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಸ್ವಚ಼್ಛ ಗುತ್ತಿಗಾರು ಟಾಸ್ಕ್ಫೋರ್ಸ್ ಕೆಲಸವು 6 ನೇ ವಾರವೂ ಮುಂದುವರಿದಿದೆ. ಸ್ವಚ್ಛತಾ ಜಾಗೃತಿ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ. @ZP_DaksnKannada @DCDK9 @BJPBhagirathi pic.twitter.com/gSSXEq3Krw
Advertisement— theruralmirror (@ruralmirror) August 3, 2023
ಸ್ವಚ್ಚ ಗ್ರಾಮ ಗುತ್ತಿಗಾರು ಟಾಸ್ಕ್ ಫೋರ್ಸ್ ಅಭಿಯಾನಕ್ಕೆ ಸ್ವಯಂಪ್ರೇರಣೆಯಿಂದ ಎಲ್ಲರೂ ಸ್ವಚ್ಚತಾ ಟಾಸ್ಕ್ ಫೋರ್ಸ್ ಕಾರ್ಯಕ್ಕೆ ಕೈಜೋಡಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಧನಪತಿ, ಪಂಚಾಯತ್ ಸದಸ್ಯರಾದ ವಿಜಯ ಚಾರ್ಮಾತ, ಲತಾ ಆಜಡ್ಕ,ಅಮರ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು,ಗ್ರಂಥಪಾಲಕರು,ವರ್ತಕರ ಸಂಘದ ಅಧ್ಯಕ್ಷ ರು, ವರ್ತಕರು, ಜೀಪು ಚಾಲಕರು, ಆಟೋಚಾಲಕರು, ಟಾಸ್ಕ್ ಫೋರ್ಸ್ ನ ಸದಸ್ಯರೆಲ್ಲರೂ ಪಾಲ್ಗೊಂಡು ಸ್ವಚ್ಚತೆ ಮಾಡುವುದರೊಂದಿಗೆ ಅರಿವು ಮೂಡಿಸಿದರು. ಇದೇ ಸಂದರ್ಭ ಎಲ್ಲೆಂದರಲ್ಲಿ ಕಸ ಎಸೆಯದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸೂಚನಾ ಫಲಕಗಳನ್ನು ಅಂಗಡಿಗಳಲ್ಲಿ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ವರ್ತಕ ಕೇಶವ ಕಣ್ಕಲ್ ಇವರು ಟಾಸ್ಕ್ ಫೋರ್ಸ್ ನ ಎಲ್ಲ ಸದಸ್ಯರಿಗೆ ಪಾನೀಯದ ವ್ಯವಸ್ಥೆಯನ್ನು ಮಾಡಿದರು.
ಸೂಚನಾ ಫಲಕ ಅಳವಡಿಕೆ