80 ಕ್ಕೂ ಹೆಚ್ಚು ಭೂಕಂಪಗಳು, ಅದರಲ್ಲಿ 6.3 ತೀವ್ರತೆ. ಇದು ತೈವಾನ್ ಸ್ಥಿತಿ. ತೈವಾನ್‌ನ ಪೂರ್ವ ಕರಾವಳಿಗೆ ಅಪ್ಪಳಿಸಿದ ಭೂಕಂಪ, ರಾಜಧಾನಿ ತೈಪೆಯಲ್ಲಿ ಕಟ್ಟಡಗಳನ್ನು ನೆಲಸಮ ಮಾಡಿದೆ ಎಂದು ತೈವಾನ್ ಆಡಳಿತ ತಿಳಿಸಿದೆ. ಏಪ್ರಿಲ್ 3 ರಂದು 7.2 ತೀವ್ರತೆಯ ಭೂಕಂಪದ ನಂತರ ಕನಿಷ್ಠ 14 ಜನರು ಸಾವನ್ನಪ್ಪಿದರು. ಇದು ತೈವಾನ್‌ನಲ್ಲಿ ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಪ್ರಬಲ ಭೂಕಂಪವಾಗಿದೆ.
ಮಂಗಳವಾರದ 6.1 ತೀವ್ರತೆಯ ಭೂಕಂಪವು ಹುವಾಲಿಯನ್ ನಗರದ ದಕ್ಷಿಣಕ್ಕೆ ಕೇಂದ್ರೀಕೃತವಾಗಿತ್ತು. ತೈವಾನ್ ಗೆ ಪ್ರಬಲ ಭೂಕಂಪಗಳಿಗೆ ಹೊಸದೇನಲ್ಲ, ದ್ವೀಪದ 23 ಮಿಲಿಯನ್ ನಿವಾಸಿಗಳ ಭೂಕಂಪದ ಎದುರಿಸಲು ಅಗತ್ಯವಾದ ಮುನ್ಸೂಚನೆಯನ್ನು ಕಟ್ಟಡ ಕಟ್ಟುವಾಗಲೇ ಸಿದ್ಧ ಮಾಡುತ್ತಾರೆ ಹಾಗೂ ಭೂಕಂಪಗಳ ಬಗ್ಗೆ ವ್ಯಾಪಕವಾದ ಸಾರ್ವಜನಿಕ ಅಭಿಯಾನಗಳನ್ನು ಮಾಡುತ್ತದೆ. ಹೀಗಾಗಿ ಸತತ 80 ಭೂಕಂಪನಗಳು ಸಂಭವಿಸಿದರೂ ಅಪಾದ ಸಂಖ್ಯೆ ಕಡಿಮೆಯಾಗುತ್ತದೆ.
ಏಪ್ರಿಲ್ 3 ರಂದು, 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು, ಇದರಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದರು ಮತ್ತು ಅಂದಿನಿಂದ 1,000 ಕ್ಕೂ ಹೆಚ್ಚು ಭೂಕಂಪಗಳು ತೈವಾನ್‌ನಲ್ಲಿ ಸಂಭವಿಸಿವೆ. ರಾಜಧಾನಿ ತೈಪೆ ಸೇರಿದಂತೆ ಉತ್ತರ, ಪೂರ್ವ ಮತ್ತು ಪಶ್ಚಿಮ ತೈವಾನ್‌ನ ದೊಡ್ಡ ಭಾಗಗಳಲ್ಲಿ ಕಟ್ಟಡಗಳು ಕಳೆದ 24 ಗಂಟೆಗಳಲ್ಲಿ ಹತ್ತಾರು ಬಾರಿ ಅಲುಗಾಡಿದ್ದು, ಪ್ರಬಲವಾದ ಭೂಕಂಪವು 6.3 ರಷ್ಟಿದೆ. 2016 ರಲ್ಲಿ ದಕ್ಷಿಣ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, 1999 ರಲ್ಲಿ 7.3 ತೀವ್ರತೆಯ ಭೂಕಂಪದಲ್ಲಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…