ರಾಷ್ಟ್ರೀಯ ರೈತ ದಿನಾಚರಣೆಯಂದು ಒಂದಷ್ಟು ಸಂಕಲ್ಪ ಮಾಡಿ | ಕೃಷಿ, ನಮ್ಮ ಜೀವ ಎರಡೂ ಉಳಿದೀತು.. |

December 23, 2023
12:05 PM
ರಾಷ್ಟ್ರೀಯ ರೈತರ ದಿನಾಚರಣೆಯಂದು ಕೆಲ ಸಂಕಲ್ಪಅಗತ್ಯವಾಗಿದೆ. ಈ ಬಗ್ಗೆ ಪ್ರಶಾಂತ್‌ ಜಯರಾಮ ಬರೆದಿದ್ದಾರೆ...

ಡಿಸೆಂಬರ್ 23,ರಾಷ್ಟ್ರೀಯ ರೈತರ ದಿನಾಚರಣೆಯಂದು(Nation Farmers Day) ಕೆಳಕಂಡ ಸಂಕಲ್ಪ(Resolution) ಮಾಡಲು ಬಯಸುತ್ತೇನೆ ಮತ್ತು ನೀವು ಕೂಡ ಸಂಕಲ್ಪ ಮಾಡಲು ಕೋರುತ್ತೇನೆ.

  • ನಮ್ಮ ಕೃಷಿ ಭೂಮಿ(Agricultural Land) ಮೇಲೆ ಬೀಳುವ ಸೂರ್ಯನ(Sun) ಶಕ್ತಿಯನ್ನು ಹಸಿರೆಲೆಗಳ(Green Leaf) ಮೂಲಕ ಬಂಧಿಸುತ್ತೇನೆ ಮತ್ತು ಎಲೆಗಳಲ್ಲಿ ಬಂಧಿಯಾಗಿರುವ ಸೂರ್ಯನ ಶಕ್ತಿಯನ್ನು ಭೂಮಿಗೆ ವರ್ಗಾಯಿಸಿ ಭೂಮಿಯನ್ನು ಶಕ್ತಿಯುತ ಮಾಡಲು ಪ್ರತಿಯೊಂದು ಮರ ಗಿಡಗಳ ಎಲೆಗಳನ್ನು ರೂಪಾಯಿ ನೋಟಿನಂತೆ ಸಂರಕ್ಷಣೆ ಮಾಡುತ್ತೇನೆ.
  • ಬೆಳೆಗಳು ನಮ್ಮ ಪಾಲು, ಬೆಳೆಯ ತ್ಯಾಜ್ಯಗಳು ಮಣ್ಣಿನ ಪಾಲು. ಕೃಷಿ ತ್ಯಾಜ್ಯಗಳನ್ನು ಸುಡುವುದು ನಮ್ಮ ಹಣ ಮತ್ತು ಶ್ರಮ ಸುಟ್ಟು ಹಾಕಿದಂತೆ. ಕೃಷಿ ತ್ಯಾಜ್ಯಗಳಿಗೆ(Agricultural waste) ಬೆಂಕಿ ಹಾಕಿ ಸುಟ್ಟು ಬೂದಿ ಮಾಡುವುದಿಲ್ಲ, ಕೃಷಿ ತ್ಯಾಜ್ಯಗಳನ್ನು ಭೂಮಿಗೆ ಸೇರಿಸುವ ಕೆಲಸ ಮಾಡುತ್ತೇನೆ.
  • ಸಕಲ ಜೀವರಾಶಿಗಳೊಂದಿಗೆ ಕೃಷಿ ಮಾಡುವ ವಿಧಾನ ಅನುಸರಿಸುತ್ತೇನೆ. ನನಗೆ ಭೂಮಿ ಮೇಲೆ ಜೀವಿಸಲು ಇರುವ ಹಕ್ಕಿನಷ್ಟೇ, ಸಕಲ ಜೀವರಾಶಿಗಳಿಗೂ ಹಕ್ಕಿದೆ ಮತ್ತು ಪ್ರಕೃತಿಯ ಜೀವನ ಚಕ್ರದಲ್ಲಿ ಅವುಗಳಿಗೆ ನಿರ್ವಹಿಸಲು ನಿರ್ದಿಷ್ಟವಾದ ಕರ್ತವ್ಯವಿದೆ. ನಾವು ಬದುಕಿ ಉಳಿಯಲು ಅವುಗಳ ಬದುಕು ಅಷ್ಟೇ ಮುಖ್ಯವಾಗಿದೆ ಎಂದು ತಿಳಿಯುತ್ತೇನೆ.
  • ಕೃಷಿಯನ್ನು ಕೇವಲ ರಾಸಾಯನಶಾಸ್ತ್ರದೊಂದಿಗೆ ನೋಡದೆ ಜೀವಶಾಸ್ತ್ರದೊಂದಿಗೆ ನೋಡುವ ಮನೋಭಾವ ಮತ್ತು ಪ್ರಕೃತಿಗೆ ಪೂರಕವಾದ ಕೃಷಿ ವಿಧಾನ ಅಳವಡಿಸಿಕೊಳ್ಳುತ್ತೇನೆ.
  • ಮಣ್ಣಿನಲ್ಲಿ ಖನಿಜಾಂಶ ಮತ್ತು ಸಾವಯವಾಂಶ ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತೇನೆ.
  • ಮಣ್ಣಿಗೆ ವಿಷ ಹಾಕಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂಬ ಹುಚ್ಚು ಭ್ರಮೆಯಿಂದ ನಾಶ ಹೊಂದುತ್ತಿದ್ದೇವೆ ಮತ್ತು ದೇಶದ ಶ್ರೀಮಂತಿಕೆ ಆ ದೇಶದ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ ಹೊರತು ಬ್ಯಾಂಕಿನಲ್ಲಿ ಇಟ್ಟಿರುವ ಹಣ ಹಾಗು ಚಿನ್ನದಿಂದ ಅಲ್ಲ ಎಂದು ಬಲವಾಗಿ ನಂಬಿದ್ದೇನೆ.
  • ವಿಷಮುಕ್ತವಾದ, ಗುಣಮಟ್ಟವುಳ್ಳ, ಪೌಷ್ಟಿಕ ಮತ್ತು ಆರೋಗ್ಯಭರಿತ ಆಹಾರ ಬೆಳೆಯುವ ಮತ್ತು ಸಾಧ್ಯವಾದಷ್ಟು ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿ ಮಾಡುವ ಅಭ್ಯಾಸ ರೂಢಿಸಿಕೊಳ್ಳುತ್ತೇನೆ.
  • ನಮ್ಮೆಲ್ಲರ ಹೊಟ್ಟೆ ತುಂಬಿಸುತ್ತಿರುವ ಆಹಾರ ಬರುತ್ತಿರುವುದು ಕೃಷಿಯಿಂದಲೇ ಹೊರತು ಕೈಗಾರಿಕೆಗಳಿಂದಲ್ಲ, ಕೃಷಿ ಇಲ್ಲದೇ ಬೇರೆ ಯಾವುದೇ ಉದ್ಯಮ, ವ್ಯವಹಾರ ನಡೆಯುವುದಿಲ್ಲ. ನಮ್ಮೆಲ್ಲರ ಹಸಿವು ನೀಗಿಸುತ್ತಿರುವ ಹಾಗು ಉದ್ಯಮ ಮತ್ತು ವ್ಯವಹಾರ ನೆಡೆಯಲು ಸಹಕಾರಿಯಾಗಿರುವ ರೈತರನ್ನು ಗೌರವದಿಂದ ಕಾಣುವ ಮನೋಭಾವ ಬೆಳಸಿಕೊಳ್ಳುತ್ತೇನೆ.

ರಾಷ್ಟ್ರೀಯ ರೈತರ ದಿನಾಚರಣೆಯ ಶುಭಾಶಯಗಳು.

ಬರಹ :
ಪ್ರಶಾಂತ್ ಜಯರಾಮ್
,
ಮೊಬೈಲ್:9342434530

On December 23, National Farmers Day, I would like to make the following resolution and request you to make a resolution as well.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?
May 23, 2026
7:12 AM
by: ಡಾ.ಆದಿತ್ಯ ಭಟ್‌, ಚಣಿಲ, BHMS
ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ
May 23, 2026
6:45 AM
by: ಮಿರರ್‌ ಡೆಸ್ಕ್
ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ
May 22, 2026
8:17 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22-05-2026 | ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ ಸಾಧ್ಯತೆ – ಮೇ 30ರ ಸುಮಾರಿಗೆ ಮುಂಗಾರು ಪ್ರವೇಶ ಸಾಧ್ಯತೆ
May 22, 2026
1:14 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror