ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಗ್ರಾಮದಲ್ಲಿ ಶಿವಮೂರ್ತಿ ಭಟ್ ಅವರು ಮರದ ಬೇರು, ಕಲ್ಲು ಹೀಗೆ ಬಳಸಿ ಬಿಸಾಡಿದ ನಿರುಪಯುಕ್ತ ಎನಿಸಿಕೊಂಡ ವಸ್ತುಗಳನ್ನ ತಂದು 400ಕ್ಕೂ ಅಧಿಕ ಕಲಾಕೃತಿಗಳನ್ನ ರೂಪಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಅತೀ ಸೂಕ್ಷ್ಮ ಕೆತ್ತನೆ ಮೂಲಕ ತೆಂಗಿನ ಚಿಪ್ಪುಗಳಿಗೆ ಸುಂದರ ರೂಪ ನೀಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ಮಾಡಿದ್ದಾರೆ. ತೆಂಗಿನ ಚಿಪ್ಪುಗಳು ನಾಜೂಕು ಸ್ಪರ್ಶದ ಕೆತ್ತನೆ ಮೂಲಕ ನೂರಾರು ಕಲಾಕೃತಿಗಳು ಜೀವಪಡೆದುಕೊಂಡಿವೆ. ಪ್ರಾಣಿಗಳು, ಪಕ್ಷಿಗಳು, ಮನುಷ್ಯರು, ದೇವರ ರೂಪಗಳನ್ನು ತೆಂಗಿನ ಚಿಪ್ಪಿನಲ್ಲಿ ಕೆತ್ತನೆ ಮಾಡಿದ್ದಾರೆ. ಇನ್ನೂರಕ್ಕೂ ಅಧಿಕ ಕಲಾಕೃತಿಗಳು ತೆಂಗಿನ ಚಿಪ್ಪಿನಲ್ಲೇ ಸಿದ್ದವಾಗಿದ್ದು, ಉಳಿದವು ಮರದ ಬೇರುಗಳಿಂದ ರೂಪಿತವಾಗಿವೆ. ಒಂದು ಇಂಚಿನಿಂದ ಹಿಡಿದು ಹತ್ತಾರು ಅಡಿ ಎತ್ತರದ ಕಲಾಕೃತಿಗಳನ್ನು ಮಾಡಿದ್ದಾರೆ.
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…
2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…