ಹೊಸರುಚಿ | ಗುಜ್ಜೆ ಸಮೋಸ

March 19, 2025
8:00 AM

ಗುಜ್ಜೆ ಸಮೋಸಕ್ಕೆ ಬೇಕಾಗುವ ಸಾಮಗ್ರಿಗಳು  ಹಾಗೂ ಮಾಡುವ ವಿಧಾನ : ಗೋಧಿ ಹುಡಿ 3 ಲೋಟ, ಮೈದಾ 1/4 ಕಪ್, ಕಪ್ಪು ಎಳ್ಳು 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು ನೀರು ಸೇರಿಸಿ ಹಿಟ್ಟನ್ನು  ಮೃದುವಾಗಿ ಕಲೆಸಿ. ಮಸಾಲೆ ಮಾಡಲು : ಬಟಾಣಿ ನೆನೆ ಹಾಕಿ,ಎಳೆಯ ಹಲಸಿನ ಕಾಯಿ ಕಟ್ ಮಾಡಿ ಕ್ಲೀನ್ ಮಾಡಿ ಇಟ್ಟು ಕೊಳ್ಳಿ , ನಂತರ ಕುಕ್ಕರ್ ಗೆ ಹಾಕಿ ಇದಕ್ಕೆ ನೆನೆ ಹಾಕಿದ ಬಟಾಣಿ, ಉಪ್ಪು ರುಚಿಗೆ ತಕ್ಕಷ್ಟು, ನೀರು ಸೇರಿಸಿ ಬೇಯಿಸಿ. ನಂತರ ಬಿಸಿ ಸ್ವಲ್ಪ ಆರಿದ ನಂತರ ಜಾರ್ ಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.

Advertisement

ಬಾಣಲೆಗೆ ಎಣ್ಣೆ, ಸಾಸಿವೆ, ಉದ್ದಿನ, ಬೇಳೆ ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಚಟಪಟಾಯಿಸಿ ನಂತರ ಚಿಕ್ಕ ದಾಗಿ ಕಟ್ ಮಾಡಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1/4 ಚಮಚ, ಗರಂ ಮಸಾಲ 1/2 ಚಮಚ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ 1/4 ಚಮಚ, ಸಮೋಸಾ ಮಸಾಲೆ 1 ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟವ್ ಆಫ್ ಮಾಡಿ.

ನಂತರ ಹಿಟ್ಟನ್ನು ನಾದಿ ಉಂಡೆಗಳನ್ನು ಮಾಡಿ, ಚಪಾತಿಯಂತೆ ಲಟ್ಟಿಸಿ ಕಟ್ ಮಾಡಿ ನಂತರ ಮಿಕ್ಸ್ ಮಾಡಿ ಇಟ್ಟ ಮಸಾಲೆ ಯನ್ನು ಹಾಕಿ ಸಮೋಸಾ ಆಕಾರದಲ್ಲಿ ಮಾಡಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈವಾಗ ಬಿಸಿ ಬಿಸಿಯಾದ ಗುಜ್ಜೆ ಸಮೋಸಾ ರೆಡಿ …

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು
February 20, 2026
7:20 AM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್
February 15, 2026
6:32 AM
by: ದಿವ್ಯ ಮಹೇಶ್
ಜೀವನಪ್ರೀತಿ
February 15, 2026
6:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror